ಯೋಜನೆಗಳ ಅರಿವು ಮೂಡಿಸಲು ಡಿಸಿ ನಿರ್ದೇಶನ

district koppal dc suresh itnal pmfme scheme awareness programme
Published on

ಕೊಪ್ಪಳ: ಪಿಎಂಎ್​ಎಂಇ ಯೋಜನೆಯ ಜಿಲ್ಲಾಮಟ್ಟದ ಅರಿವು ಕಾರ್ಯಕ್ರಮ ಸೆ.18ರಂದು ನಡೆಯಲಿದ್ದು, ಅಚ್ಚುಕಟ್ಟಾಗಿ ಆಯೋಜಿಸುವಂತೆ ಜಿಲ್ಲಾಧಿಕಾರಿ ಡಾ.ಸುರೇಶ ಬಿ.ಇಟ್ನಾಳ ಹೇಳಿದರು.

ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

ಉಪ್ಪಿನಕಾಯಿ, ಸಿರಿಧಾನ್ಯ ಸಂಸ್ಕರಣೆ ಹಾಗೂ ಶೇಂಗಾ ಚಿಕ್ಕಿ ಸೇರಿ ಮೌಲ್ಯವರ್ಧಿತ ಉತ್ಪನ್ನಗಳ ತಯಾರಿಕೆಗೆ ಪಿ.ಎಂ.ಎಫ್​.ಎಂ.ಇ ಯೋಜನೆಯಡಿ ಶೇ.50 ಸಹಾಯಧನದವಿದೆ. ಇದರ ಬಗ್ಗೆ ಅರಿವು ಮೂಡಿಸಲು ಜಿಲ್ಲಾ ಮಟ್ಟದ ಅರಿವು ಕಾರ್ಯಕ್ರಮ ಆಯೋಜಿಸಲಾಗಿದೆ. ಯೋಜನೆಯಡಿ ಸಲ್ಲಿಸಿದ ಅರ್ಜಿಗಳನ್ನು ಬ್ಯಾಂಕುಗಳು ಗರಿಷ್ಠ 15 ದಿನದೊಳಗೆ ವಿಲೇವಾರಿ ಮಾಡಬೇಕು. ಈ ಬಗ್ಗೆ ಲೀಡ್​ ಬ್ಯಾಂಕ್​ ವ್ಯವಸ್ಥಾಪಕರು ಕ್ರಮ ವಹಿಸಿ. ತಿರಸತ ಅರ್ಜಿಗಳಿಗೆ ನಿಖರ ಕಾರಣ ನೀಡಿ. ಸಮಸ್ಯೆ ಇದ್ದಲ್ಲಿ ಪರಿಹಾರ ಕಂಡುಕೊಳ್ಳಿ. ಸಂಪನ್ಮೂಲ ವ್ಯಕ್ತಿಗಳಿಗೆ ಒಬ್ಬರಿಗೆ 50 ಅರ್ಜಿಯಂತೆ 300 ಅರ್ಜಿ ವಿಲೇವಾರಿ ಮಾಡಿ. ಯೋಜನೆ ಕುರಿತು ವ್ಯಾಪಕ ಪ್ರಚಾರ ಮಾಡಿ ಎಂದರು.

ಜಂಟಿ ಕೃಷಿ ನಿರ್ದೇಶಕ ರುದ್ರೇಶಪ್ಪ ಟಿ.ಎಸ್​. ಮಾತನಾಡಿ, ಅಸ್ತಿತ್ವದಲ್ಲಿರುವ ಆಹಾರ ಸಂಸ್ಕರಣ ಉದ್ಯಮಗಳನ್ನು ಉನ್ನತಿಕರಿಸಲು ಹಣಕಾಸು, ತಾಂತ್ರಿಕ ಮತ್ತು ವ್ಯಾಪಾರ ಬೆಂಬಲ ಒದಗಿಸಲಾಗುವುದು. ಕೇಂದ್ರ 6 ಲಕ್ಷ ರೂ., ರಾಜ್ಯ ಸರ್ಕಾರ 9 ಲಕ್ಷ ರೂ. ಸಹಾಯಧನ ಒದಗಿಸಲಿವೆ. ಸೆ.18ರಂದು ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್​ನಲ್ಲಿ ಕಾರ್ಯಕ್ರಮ ಆಯೋಜಿಸಲಾಗುವುದು. ಯೋಜನೆಯಡಿ 427 ಅರ್ಜಿ ಸಲ್ಲಿಕೆಯಾಗಿದ್ದು, 188 ಲಾನುಭವಿಗಳು ಪ್ರಯೋಜನ ಪಡೆದಿದ್ದಾರೆ. 194 ಅರ್ಜಿಗಳು ವಿವಿಧ ಕಾರಣಗಳಿಂದ ತಿರಸ್ಕರಿಸಲ್ಪಟ್ಟಿವೆ. 45 ಅರ್ಜಿಗಳು ಸಾಲ ಮಂಜೂರಾತಿ ಬಾಕಿ ಇದೆ ಎಂದರು.

ಜಿಪಂ ಸಿಇಒ ವರ್ಣಿತ್​ ನೇಗಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net