ಡಿಸಿ ಹಾಜರಿಗೆ ಸೂಚನೆ

Published on

ಕೊಪ್ಪಳ: ಗಂಗಾವತಿ ತಾಲೂಕಿನ ಅಂಜನಾದ್ರಿ ಬೆಟ್ಟದ ಪೂಜಾ ವಿವಾದಕ್ಕೆ ಸಂಬಂಧಿಸಿದಂತೆ ಕೊಪ್ಪಳ ಡಿಸಿ ವಿಚಾರಣೆಗೆ ಹಾಜರಾಗಲು ಸುಪ್ರೀಂ ಸೂಚಿಸಿದೆ.

ಅರ್ಚಕ ವಿದ್ಯಾದಾಸ್​ ಬಾಬಾ ತಮಗೆ ಪೂಜೆ ಮಾಡಲು ಅನುಮತಿಸುವಂತೆ ನ್ಯಾಯಾಲಯ ನೀಡಿದ ನಿರ್ದೇಶನವನ್ನು ಸರಿಯಾಗಿ ಪಾಲಿಸುತ್ತಿಲ್ಲ. ಆಡಳಿತಾಧಿಕಾರಿ ಪ್ರಕಾಶರಾವ್​ ಅಡ್ಡಿಪಡಿಸುತ್ತಿದ್ದಾರೆಂದು ಆಕ್ಷೇಪಿಸಿದ್ದಾರೆ. 2018ರಲ್ಲಿ ದೇವಾಲಯವನ್ನು ಮುಜರಾಯಿ ಇಲಾಖೆ ವಶಕ್ಕೆ ಪಡೆದಿದೆ. ಪೂಜೆಗೆ ಅವಕಾಶವಿದ್ದರೂ ಗೊಂದಲ ಸೃಷ್ಟಿಸಲಾಗುತ್ತಿದೆ ಎಂದು ಬಾಬಾ ಪರ ವಕೀಲರು ನ್ಯಾಯಾಲಯದ ಮುಂದೆ ನಿವೇದನೆ ಸಲ್ಲಿಸಿದ್ದಾರೆ. ಈ ಸಂಬಂಧ ಜಿಲ್ಲಾಧಿಕಾರಿ ಡಾ.ಸುರೇಶ ಬಿ.ಇಟ್ನಾಳ ಆ.11ರಂದು ವಿಡಿಯೋ ಕಾನ್ಫರೆನ್ಸ್​ ಮೂಲಕ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ ಎನ್ನಲಾಗಿದೆ.

ಈ ಸಂಬಂಧ ವಿಜಯವಾಣಿಗೆ ಪ್ರತಿಕ್ರಿಯಿಸಿದ ಡಿಸಿ, ನನಗೆ ಈವರೆಗೂ ಲಿಖಿತ ನೋಟಿಸ್​ ಬಂದಿಲ್ಲ. ನಮ್ಮ ವಕೀಲರ ಮೂಲಕ ಮಾಹಿತಿ ಪಡೆಯುವೆ. ಹಾಜರಾಗುವಂತೆ ನ್ಯಾಯಾಲಯ ನಿರ್ದೇಶಿಸಿದ್ದಲ್ಲಿ ಹಾಜರಾಗುವೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net