

ಕೊಪ್ಪಳ: ಜಿಲ್ಲೆಯನ್ನು ಕುಷ್ಠರೋಗ ಮುಕ್ತಗೊಳಿಸಲು ಆರೋಗ್ಯ ಅಧಿಕಾರಿಗಳು ಶ್ರಮಿಸಬೇಕು ಎಂದು ಜಿಲ್ಲಾಧಿಕಾರಿ ನಲಿನ್ ಅತುಲ್ ಸೂಚಿಸಿದರು.
ನಗರದ ಡಿಸಿ ಕಚೇರಿಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕುಷ್ಠರೋಗ ನಿಮೂರ್ಲನಾ ಪ್ರತಿಜ್ಞಾ ವಿಧಿ ಸ್ವೀಕಾರ ಹಾಗೂ ಜಾಗೃತಿ ಭಿತ್ತಿ ಪತ್ರ ಬಿಡುಗಡೆಗೊಳಿಸಿ ಮಾತನಾಡಿದರು.
ಕುಷ್ಠರೋಗ ಮೊದಲಿನಷ್ಟು ಇಲ್ಲದಿದ್ದರೂ ಸಂಪೂರ್ಣ ನಿವಾರಣೆ ಆಗಬೇಕಿದೆ. ಕೊಪ್ಪಳವನ್ನು ರೋಗ ಮುಕ್ತಗೊಳಿಸಲು ಬದ್ಧರಾಗಿ. ರೋಗಿಗಳಿಗೆ ಯಾವುದೇ ತಾರತಮ್ಯ ಆಗದಂತೆ ನೋಡಿಕೊಳ್ಳಿ. ರೋಗದ ಬಗ್ಗೆ ಅರಿವು ಮೂಡಿಸಿ. ಆರಂಭಿಕ ಲಕ್ಷಣ ಗುರುತಿಸಿ ತಕ್ಷಣ ಚಿಕಿತ್ಸೆ ದೊರೆಯುವಂತೆ ನೋಡಿಕೊಳ್ಲಿ. ಒಗ್ಗಟ್ಟಾಗಿ ಕೆಲಸ ಮಾಡಿ ರೋಗ ಮುಕ್ತ ಜಿಲ್ಲೆಯಾಗಿಸಲು ಶ್ರಮಿಸಿ. ದೌರ್ಜನ್ಯಕ್ಕೆ ಒಳಗಾದ ರೋಗಿಗಳನ್ನು ಮುಖ್ಯವಾಹಿನಿಗೆ ತನ್ನಿ. ನತೆಯಿಂದ ಬಾಳುವಂತೆ ಸ್ಥೆರ್ಯ ತುಂಬಿ ಎಂದು ತಿಳಿಸಿದರು.
ಬಳಿಕ ಕುಷ್ಠರೋಗ ನಿಮೂರ್ಲನಾ ಪ್ರತಿಜ್ಞಾ ವಿಧಿ ಬೋಧಿಸಿದರು. ಕುಷ್ಠರೋಗ ನಿಮೂರ್ಲನಾ ಕಾರ್ಯಕ್ರಮದ ಜಾಗೃತಿ ಭಿತ್ತಿಪತ್ರ ಬಿಡುಗಡೆಗೊಳಿಸಿದರು. ಡಿಎಚ್ಒ ಡಾ.ಟಿ.ಲಿಂಗರಾಜು, ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿ ಡಾ.ಪ್ರಕಾಶ, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ರವೀಂದ್ರ ಎಂ.ಎಚ್., ಡಿಡಿಪಿಐ ಶ್ರೀಶೈಲ ಬಿರಾದಾರ ಇತರರಿದ್ದರು.