

ಕೊಪ್ಪಳ: ಪರಿಶಿಷ್ಟ ಜಾತಿ ಮೀಸಲಾತಿ ವರ್ಗೀಕರಣ ಸಮೀೆ ನಡೆಸುತ್ತಿದ್ದು ಯಾವೊಂದು ಕುಟುಂಬ ಸಮೀೆಯಿಂದ ಹೊರಗುಳಿಯದಂತೆ ನೋಡಿಕೊಳ್ಳಿ ಎಂದು ಜಿಲ್ಲಾಧಿಕಾರಿ ನಲಿನ್ ಅತುಲ್ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಜಿಪಂ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ನ್ಯಾ.ಎಚ್.ಎನ್.ನಾಗಮೋಹನದಾಸ್ ಏಕಸದಸ್ಯ ವಿಚಾರಣಾ ಆಯೋಗದಿಂದ ನಡೆಸುವ ಸಮೀೆ ಅಂಗವಾಗಿ ಸೋಮವಾರ ತಾಲೂಕು ಮಟ್ಟದ ಮಾಸ್ಟರ್ ಟೆನರ್ಗಳಿಗೆ ಹಮ್ಮಿಂಡಿದ್ದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಪಜಾಗೆ ಸೇರಿದ ಜನರ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ರಾಜಕೀಯ, ಔದ್ಯೋಗಿಕ ಪ್ರಾತಿನಿಧ್ಯ ಮತ್ತು ಇನ್ನಿತರ ಸ್ಥಿತಿ&ಗತಿ ತಿಳಿಯಬೇಕಿದೆ. ಇದರಿಂದ ಒಳ ಮೀಸಲು ಹಂಚಿಕೆಗೆ ಅನುಕೂಲ. ಇದಕ್ಕಾಗಿ ಸಮೀೆ ಕೈಗೊಂಡಿದ್ದು, ಮೂರು ಹಂತದಲ್ಲಿ ನಡೆಯಲಿದೆ. ತಾಲೂಕು ಮಟ್ಟದ ಮಾಸ್ಟರ್ ಟೆನರ್ಗಳು ನಿಮ್ಮ ತಾಲೂಕಿನ ಮತಗಟ್ಟೆವಾರು ಪ್ರತಿ ಮನೆಗೆ ತೆರಳಿ ಜಾಗರೂಕತೆಯಿಂದ ಸಮೀೆ ನಡೆಸಿ. ಯಾವುದೇ ತಪು$್ಪ ಮಾಹಿತಿ ಭರ್ತಿ ಮಾಡಬೇಡಿ. ಮನೆಗೆ ತೆರಳಿದಾಗ ಜನರೊಂದಿಗೆ ಸೌಜನ್ಯದಿಂದ ವರ್ತಿಸಿ. ಮನೆ ಮುಖ್ಯಸ್ಥನಿಂದ ಮಾಹಿತಿ ಪಡೆಯಿರಿ. ಅವರು ನೀಡಿದ ಮಾಹಿತಿ ಮಾತ್ರ ಭರ್ತಿ ಮಾಡಿ. ಮಧ್ಯವರ್ತಿಗಳು, ಸಂ, ಸಂಸ್ಥೆ ಮತ್ತು ಮಕ್ಕಳಿಂದ ಮಾಹಿತಿ ಪಡೆಯಬೇಡಿ. ಮೊಬೈಲ್ ಆ್ಯಪ್ ಮೂಲಕವೇ ಮಾಹಿತಿ ತುಂಬಿ. ಸಮೀೆ ವೇಳೆ ಜನರು ಆಧಾರ್, ಪಡಿತರ ಚೀಟಿ ನೀಡಬೇಕೆಂದು ತಿಳಿಸಿದರು.
ಜಿಲ್ಲಾ ತರಬೇತಿ ಸಂಸ್ಥೆಯ ಪ್ರಾಚಾರ್ಯ ಕೃಷ್ಣಮೂರ್ತಿ ದೇಸಾಯಿ ಮಾತನಾಡಿ, ಮೇ 5ರಿಂದ 17ವರೆಗೆ ಬೆಳಗ್ಗೆ 8 ರಿಂದ ಸಂಜೆ 6.30 ಗಂಟೆವರೆಗೆ ಸಮೀಕ್ಷೆ ಮಾಡಿ. ಬ್ಲಾಕಗಳಲ್ಲಿ ವಿಶೇಷ ಶಿಬಿರಗಳನ್ನು ಕೈಗೊಂಡು, ಮನೆ ಭೇಟಿ ಅವಧಿಯಲ್ಲಿ ಬಿಟ್ಟು ಹೋದ ಪಜಾ ಕುಟುಂಬಗಳ ಮಾಹಿತಿ ಮೇ 19 ರಿಂದ 21ವರೆಗೆ ಸಂಗ್ರಹಿಸಬೇಕು. ಮೇ 19 ರಿಂದ ಮೇ 23ವರೆಗೆ ಕಡ್ಡಾಯವಾಗಿ ಆಧಾರ್ ನಂಬರ್ ಹಾಗೂ ಪಡಿತರ ಚೀಟಿ ಸಂಖ್ಯೆಯೊಂದಿಗೆ ಸ್ವಯಂ ಘೋಷಣೆ ಸಲ್ಲಿಸುವಂತೆ ತಿಳಿಸಿದರು.
ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಅಜ್ಜಪ್ಪ ಸೊಗಲದ ಇತರರಿದ್ದರು.