ನೆಕ್ಸಸ್​ ಪ್ರಶಸ್ತಿ ಸ್ವೀಕರಿಸಿದ ಡಿಸಿ

district koppal dc naleen athul nexas award
Published on

ಕೊಪ್ಪಳ: ಜಿಲ್ಲೆಯಲ್ಲಿ ಶಾಲಾ ಪೂರ್ವ ಶಿಕ್ಷಣ ಮಾದರಿ ಅನುಷ್ಠಾನ ಹಿನ್ನೆಲೆಯಲ್ಲಿ ನೆಕ್ಸಸ್​ ರಾಷ್ಟ್ರೀಯ ಪ್ರಶಸ್ತಿಗೆ ಭಾಜನವಾಗಿದ್ದು ಜಿಲ್ಲಾಧಿಕಾರಿ ನಲಿನ್​ ಅತುಲ್​ ದೆಹಲಿಯಲ್ಲಿ ಪ್ರಶಸ್ತಿ ಸ್ವೀಕರಿಸಿದರು.

ಮಗುವಿನ ಶೈಕ್ಷಣಿಕ ವ್ಯವಸ್ಥೆಯಲ್ಲಿ ಶಾಲಾಪೂರ್ವ ಶಿಕ್ಷಣ ಮಹತ್ವ ಪಡೆದಿದೆ. ಆಟದೊಂದಿಗೆ ಪಾಠ, ಪಠ್ಯೇತರ ಚಟುವಟಿಕೆಗಳ ಮೂಲಕವೇ ಬೌದ್ಧಿಕ ಮಟ್ಟ ಬೆಳವಣಿಗೆ ಮಾಡುವ ನಿಟ್ಟಿನಲ್ಲಿ ಕಲ್ಯಾಣ ಕರ್ನಾಟಕ ಜಿಲ್ಲೆಗಳಲ್ಲಿ ಯೋಜನೆ ಪ್ರಾಯೋಗಿಕವಾಗಿ ಜಾರಿಯಾಗಿದೆ. ಏಳು ಜಿಲ್ಲೆಗಳ 14 ಸಾವಿರ ಅಂಗನವಾಡಿ ಕೇಂದ್ರಗಳಲ್ಲಿ ಜಾರಿಗೊಳಿಸಲಾಗಿದೆ. ಉಳಿದ ಜಿಲ್ಲೆಗಳಿಗಿಂತ ಕೊಪ್ಪಳ ಜಿಲ್ಲೆಯ 1,960 ಅಂಗನವಾಡಿ ಕೇಂದ್ರಗಳಲ್ಲಿ ಯೋಜನೆ ಅನುಷ್ಠಾನ ಪರಿಣಾಮಕಾರಿಯಾಗಿದೆ. ರಾಜ್ಯದ ವಿವಿಧ ಜಿಲ್ಲೆಗಳು, ಹೊರ ರಾಜ್ಯದ ಅನೇಕ ಅಧ್ಯಯನ ತಂಡಗಳು ಜಿಲ್ಲೆಗೆ ಅನೇಕ ಬಾರಿ ಭೇಟಿ ನೀಡಿ ಮಾಹಿತಿ ಪಡೆದಿವೆ.

ರಾಜ್ಯ ಹಾಗೂ ದೇಶದಲ್ಲಿ ಮಾದರಿ ಆಗುವಂತೆ ಕೊಪ್ಪಳದಲ್ಲಿ ಶಾಲಾಪೂರ್ವ ಶಿಕ್ಷಣ ಅನುಷ್ಠಾನಗೊಳಿಸಲಾಗುತ್ತಿದೆ. 64 ಸಾವಿರ ಮಕ್ಕಳು ಯೋಜನೆಯಡಿ ಪ್ರಯೋಜನ ಪಡೆಯುತ್ತಿದ್ದಾರೆ. ಹಲವು ರಾಜ್ಯಗಳು ಕೊಪ್ಪಳ ಮಾದರಿ ಅನುಷ್ಠಾನಕ್ಕೆ ತಮ್ಮ ರಾಜ್ಯಗಳಿಂದ ಅಧ್ಯಯನ ತಂಡ ಕಳಿಸಿ ಮಾಹಿತಿ ಪಡೆದಿವೆ. ಇವೆಲ್ಲ ಅಂಶಗಳನ್ನು ಗಮನಿಸಿದ ರಾಷ್ಟ್ರಮಟ್ಟದ ನೆಕ್ಸಸ್​ ಆ್​ ಗುಡ್​ ೌಂಡೇಶನ್​, 2024ನೇ ಸಾಲಿನ ನೆಕ್ಸಸ್​ ಉತ್ತಮ ವಾರ್ಷಿಕ ಪ್ರಶಸ್ತಿಗೆ ಜಿಲ್ಲೆಯನ್ನು ಆಯ್ಕೆ ಮಾಡಿದೆ. ಡಿ.15ರಂದು ದೆಹಲಿಯಲ್ಲಿ ಡಿಸಿ ನಲಿನ್​ ಅತುಲ್​ ಜಿಲ್ಲೆಯ ಪರವಾಗಿ ಪ್ರಶಸ್ತಿ ಸ್ವೀಕರಿಸಿದರು. ಪ್ರಶಸ್ತಿ ವಿಷಯವನ್ನು ವಿಜಯವಾಣಿ ನ.29ರಂದು "ಶಾಲಾಪೂರ್ವ ಶಿಕ್ಷಣಕ್ಕೆ ರಾಷ್ಟ್ರ ಗರಿ' ಹೆಸರಿನಲ್ಲಿ ಮೊದಲು ವಿಶೇಷ ವರದಿ ಪ್ರಕಟಿಸಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net