ಎಸ್ಸಿ-ಎಸ್ಟಿ ಹಣ ಸಮರ್ಪಕ ಬಳಕೆಯಾಗಲಿ

district koppal dc naleen athul meeting sc st programme reviwe
Published on

ಕೊಪ್ಪಳ: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗೆ ಇರುವ ಅನುದಾನ ಜಿಲ್ಲೆಯಲ್ಲಿ ಸಮರ್ಪಕವಾಗಿ ಬಳಕೆಯಾಗಬೇಕೆಂದು ಜಿಲ್ಲಾಧಿಕಾರಿ ನಲಿನ್​ ಅತುಲ್​ ಅಧಿಕಾರಿಗಳಿಗೆ ಸೂಚಿಸಿದರು.

ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಎಸ್ಸಿಪಿ&ಟಿಎಸ್ಪಿ ಅನುದಾನ ಬಳಕೆ ಪ್ರಗತಿ ಪರಿಶೀಲನೆ ಸಭೆ ನಡೆಸಿ ಮಾತನಾಡಿದರು.

ಹಿಂದಿನ ವರ್ಷದ ಎಲ್ಲ ಕಾಮಗಾರಿಗಳನ್ನು ಅವಧಿಯೊಳಗೆ ಮುಗಿಸಿ. ಒಂದು ವರ್ಷ ಮುಂಚಿತವಾಗಿ ಕ್ರಿಯಾ ಯೋಜನೆ ರಚಿಸಿ. ಇದರಿಂದ ಕಾಮಗಾರಿ ಮುಗಿಸಲು ನೆರವಾಗಲಿದೆ. ವಿಳಂಬ ಆಗುವುದಿಲ್ಲ. ಪಜಾ ಕಾಲನಿಗಳಲ್ಲಿ ಶಾಲೆ, ಅಂಗನವಾಡಿ, ಗ್ರಂಥಾಲಯ, ರಸ್ತೆ, ಚರಂಡಿ, ನೀರು ಹೀಗೆ ಅವಶ್ಯ ಇರುವ ಸೌಲಭ್ಯ ಕಲ್ಪಿಸಿ ಎಂದು ನಿರ್ದೇಶಿಸಿದರು.

ದೌರ್ಜನ್ಯಕ್ಕೆ ಒಳಗಾಗಿ ಮರಣ, ಅತ್ಯಾಚಾರ ಹಾಗೂ ಗಾಯಗೊಂಡ ಪಜಾ ಜನರಿಗೆ ಸಮಾಜ ಕಲ್ಯಾಣ ಇಲಾಖೆಯಿಂದ 5&10ಲಕ್ಷ ರೂ. ಪರಿಹಾರವಿದ್ದು ಸಕಾಲದಲ್ಲಿ ತಲುಪಿಸಿ. ಅಗತ್ಯ ಇದ್ದಲ್ಲಿ ಹೆಚ್ಚುವರಿ ನೆರವು ನೀಡಿ. ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ ನಮ್ಮ ಜಿಲ್ಲೆಗೆ 400 ಕೋಟಿ ಅನುದಾನ ಬಂದಿದೆ. ಪಜಾ, ಪಪಂಗಳ ಅಭಿವೃದ್ಧಿಗೆ 100 ಕೋಟಿ ರೂ. ಬಳಸಿಕೊಳ್ಳಬಹುದು ಎಂದು ತಿಳಿಸಿದರು.

ಜಿಪಂ ಸಿಇಒ ರಾಹುಲ್​ ರತ್ನಂ ಪಾಂಡೆಯ, ಡಿಯುಡಿಸಿ ಪಿಡಿ ರೇಷ್ಮಾ ಹಾನಗಲ್​, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಅಜ್ಜಪ್ಪ ಸೊಗಲದ, ಕನ್ನಡ ಮತ್ತು ಸಂಸತಿ ಇಲಾಖೆ ಸಹಾಯಕ ನಿರ್ದೇಶಕ ಕೊಟ್ರೇಶ ಮರಬನಳ್ಳಿ, ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೆಶಕ ನಾಗರಾಜ ಡಿ. ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net