

ಕೊಪ್ಪಳ: ರಾಜ್ಯ, ರಾಷ್ಟ್ರೀಯ ಹೆದ್ದಾರಿ ಸೇರಿ ಇತರ ರಸ್ತೆಗಳಲ್ಲಿ ಸುರಕ್ಷತೆಗೆ ಕ್ರಮವಹಿಸುವಂತೆ ಜಿಲ್ಲಾಧಿಕಾರಿ ನಲಿನ್ ಅತುಲ್ ಸೂಚಿಸಿದರು.
ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.
ರಸ್ತೆ ತಿರುವುಗಳಲ್ಲಿ ಸೂಚನಾ ಲಕ ಹಾಕಿ. ಅಗತ್ಯವಿದ್ದಲ್ಲಿ ಬೆಳಕು, ಸಿಸಿಟಿವಿ ಕ್ಯಾಮೆರಾ ಅಳವಡಿಸಿ. ವಾಹನ ಸವಾರರಿಗೆ ಅರ್ಥವಾಗುವಂತೆ ಸೂಚನಾ ಲಕಗಳಿರಲಿ. ಹಿಟ್ನಾಳ ಟೋಲ್ ಹುನುಗುಂದ ರಸ್ತೆಗಳಲ್ಲಿ ಸರಿಯಾದ ಸೂಚನಾ ಲಕಗಳಿಲ್ಲದ ಕಾರಣ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ. ದೊಡ್ಡ ಸೂಚನಾ ಲಕ ಹಾಕಲು ಕಳೆದ ಸಭೆಯಲ್ಲಿ ಸೂಚಿಸಲಾಗಿದೆ. ತಕ್ಷಣ ಈ ಬಗ್ಗೆ ಕ್ರಮವಹಿಸಿ. ಯಾವ ರಸ್ತೆಗಳಲ್ಲಿ ಹೆಚ್ಚು ಭಾರವಾದ ವಾಹನಗಳು ಓಡಾಡುತ್ತವೆ ಎಂದು ಮಾಹಿತಿ ಕಲೆ ಹಾಕಿ. ಮುಖ್ಯ ರಸ್ತೆಗಳಲ್ಲಿ ಗುಂಡಿಗಳಿದ್ದರೆ ಅವುಗಳನ್ನು ಮುಚ್ಚಿಸಿ. ಟ್ರಾಫಿಕ್ ಸಮಸ್ಯೆಗಳಾಗದಂತೆ ನಗರದಲ್ಲಿ ುಟ್ಪಾತ್ ತೆರವುಗೊಳಿಸಿ. ಬೀದಿ ಬದಿ ವ್ಯಾಪಾರಿಗಳಿಗೆ ಪ್ರತ್ಯೇಕ ಜಾಗ ಸೂಚಿಸುವಂತೆ ತಿಳಿಸಿದರು.
ಎನ್ಎಚ್ಗಳಲ್ಲಿ ಕೆಲವೆಡೆ ಲೈಟಿಂಗ್, ಸಿಸಿಟಿವಿ ಕ್ಯಾಮೆರಾ, ಸೂಚನಾ ಲಕ ಅಳವಡಿಸಿಲ್ಲ. ತಕ್ಷಣ ಅವುಗಳನ್ನು ಅಳವಡಿಸಿ. ಮುಂದಿನ ಸಭೆಯೊಳಗೆ ಎಲ್ಲ ಕೆಸಲಗಳನ್ನು ಪೂರ್ಣಗೊಳಿಸರಬೇಕೆಂದು ತಾಕೀತು ಮಾಡಿದರು. ಲೋಕೋಪಯೋಗಿ ಇಲಾಖೆ ಇಇ ಹೇಮಂತರಾಜ್, ಆರ್ಟಿಒ ಕೆ.ದಾಮೋದರ, ಡಿಡಿಪಿಯು ಜಗದೀಶ, ಎನ್ಎಚ್ಎಐ ಪ್ರತಿನಿಧಿ ಅಜಿಂಕ ನವಲೆ, ಸೈಟ್ ಇಂಜಿನಿಯರ್ ದಾನೇಶ್ವರ ಇತರರಿದ್ದರು.