ಜೀತ ಪದ್ಧತಿ ನಿಮೂರ್ಲನೆಗೆ ಶ್ರಮಿಸಿ, ಡಿಸಿ ನಲಿನ್ ಅತುಲ್ ಸೂಚನೆ

district koppal dc naleen athul meeting
Published on

ಕೊಪ್ಪಳ: ಜೀತ ಪದ್ಧತಿ ಮಾನವ ಹಕ್ಕಿನ ಉಲ್ಲಂನೆ. ಅಮಾನವೀಯ ಪದ್ಧತಿ ಹೋಗಲಾಡಿಸಲು ನಾವೆಲ್ಲ ಶ್ರಮಿಸಬೇಂದು ಡಿಸಿ ನಲಿನ್ ಅತುಲ್ ಹೇಳಿದರು.

ನಗರದ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್ನಲ್ಲಿ ಸೋಮವಾರ ವಿವಿಧ ಇಲಾಖೆ ಅಧಿಕಾರಿಗಳಿಗೆ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ನನ್ನಿಂದ ಹಿಡಿದು ಗ್ರಾಮ ಆಡಳಿತಾಧಿಕಾರಿವರೆಗೆ ಎಲ್ಲ ಅಧಿಕಾರಿಗಳ ಜವಾಬ್ದಾರಿ ಇದೆ. ಜೀತ ಪದ್ಧತಿ ನಿಮೂರ್ಲನಾಧಿಕಾರಿಗಳು ಜೀತ ಕಾರ್ಮಿಕ ಪ್ರಕರಣಗಳನ್ನು ಸೂಕ್ತ ಪ್ರಾಧಿಕಾರಕ್ಕೆ ವರದಿ ಮಾಡಿ. ಆರೋಪಿಗಳ ವಿರುದ್ಧ ಶಿೆ ಆಗುವಂತೆ ಪರಿಣಾಕಾರಿ ಸಾಕ್ಷ$್ಯ ಸಂಗ್ರಹಿಸಿ. ಜೀತ ಪದ್ಧತಿ ಬಗ್ಗೆ ಸಾರ್ವಜನಿಕರು, ಉದ್ಯಮಿಗಳಿಗೆ ಅರಿವು ಮೂಡಿಸಿ. ಜೀತ ವಿಮುಕ್ತರ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಪೂರಕ ಕ್ರಮ ಅನುಸರಿಸಿ. ಅಗತ್ಯ ಕಾನೂನು ಸಲಹೆ, ಪೊಲೀಸ್ ನೆರವು ಪಡೆಯಲು ಸಹಕರಿಸಿ ಅವರನ್ನು ಮುಖ್ಯವಾಹಿನಿಗೆ ತನ್ನಿ ಎಂದು ತಿಳಿಸಿದರು.

ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ವಿಲಿಯಂ ಕ್ರಿಸ್ಟೋಪರ್ ಅವರು ಜೀತ ಕಾರ್ಮಿಕ ಪದ್ಧತಿ ನಿಮೂರ್ಲನೆ ಕುರಿತು, ರಾಘವೇಂದ್ರ ಭಟ್ ಅವರು ಮಾನವ ಕಳ್ಳ ಸಾಗಾಣೆ ತಡೆ ಕಾಯ್ದೆ ಕುರಿತು ಹಾಗೂ ಹರೀಶ ಜೋಗಿ ಅವರು ಬಾಲಕಾರ್ಮಿಕ ನಿಷೇಧ ಮತ್ತು ನಿಯಂತ್ರಣ ಕಾಯ್ದೆ ಕುರಿತು ತರಬೇತಿ ನೀಡಿದರು.

ಎಸ್ಪಿ ಡಾ.ರಾಮ್ ಎಲ್.ಅರಸಿದ್ದಿ, ಎಸಿ ಕ್ಯಾ.ಮಹೇಶ ಮಾಲಗಿತ್ತಿ, ಜಿಪಂ ಉಪಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ, ಡಿಯುಡಿಸಿ ಪಿಡಿ ರೇಷ್ನಾ ಹಾನಗಲ್, ಜಿಲ್ಲಾ ಕಾರ್ಮಿಕ ಅಧಿಕಾರಿ ಸುಧಾ ಗರಗ, ಬೆಳಗಾವಿ ಸ್ಪಂದನ ಸಂಸ್ಥೆ ಕಾರ್ಯದರ್ಶಿ ವಿ.ಸುಶೀಲ, ಜಿಲ್ಲಾ ಬಾಲ ಕಾರ್ಮಿಕ ಯೋಜನಾ ನಿರ್ದೇಶಕ ಬಸವರಾಜ ಹಿರೇಗೌಡರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net