ಕುಡಿವ ನೀರು ಸಮಸ್ಯೆ ಆಗದಿರಲಿ, ಡಿಸಿ ನಲಿನ್​ ಅತುಲ್​ ಸೂಚನೆ

district koppal dc naleen athul drinking water meeting
Published on

ಕೊಪ್ಪಳ: ಜಿಲ್ಲೆಯ ಗ್ರಾಮೀಣ, ನಗರ ಪ್ರದೇಶದಲ್ಲಿ ಕುಡಿವ ನೀರು ಸಮಸ್ಯೆ ಆಗದಂತೆ ಕ್ರಮವಹಿಸುವಂತೆ ಜಿಲ್ಲಾಧಿಕಾರಿ ನಲಿನ್​ ಅತುಲ್​ ಅಧಿಕಾರಿಗಳಿಗೆ ಸೂಚಿಸಿದರು.

ನಗರದ ಡಿಸಿ ಕಚೇರಿ ಕೆಎಸ್​-2 ಸಭಾಂಗಣದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫಿರೆನ್ಸ್​ ಮೂಲಕ ಸಭೆ ನಡೆಸಿ ಮಾತನಾಡಿದರು.

ನೀರಿನ ಮೂಲ ಕಾಲ ಕಾಲಕ್ಕೆ ಪರೀಸಿ. ಮೇಲ್ತೊಟ್ಟಿ, ಮಿನಿ ವಾಟರ್​ ಟ್ಯಾಂಕ್​, ಸಂಪ್​ ಸೇರಿ ಇತರ ನೀರು ಸಂಗ್ರಹಾರಗಳನ್ನು ಶುದ್ಧಗೊಳಿಸಿ. ಚರಂಡಿ ಪಕ್ಕದಲ್ಲಿರುವ ಪೈಪ್​ಲೈನ್​ ಸ್ಥಳಾಂತರಿಸಿ. ಸಮಸ್ಯೆಗಳಿದ್ದಲ್ಲಿ ತಹಸೀಲ್ದಾರ್​, ತಾಪಂ ಇಒಗಳು ತಕ್ಷಣ ಸ್ಪಂದಿಸಿ. ಕುಡಿವ ನೀರಿಗೆ ಯಾವುದೇ ಅನುದಾನ ಕೊರತೆ ಇಲ್ಲ. 722 ಗ್ರಾಮಗಳಲ್ಲಿ 472 ಗ್ರಾಮಗಳಿಗೆ ಡಿಬಿಒಟಿ ಮೂಲಕ ನೀರು ಪೂರೈಸಲಾಗುತ್ತಿದೆ. 2,278 ಸರ್ಕಾರಿ, 5,551ಖಾಸಗಿ ಬೋರ್​ವೆಲ್​ಗಳಿವೆ. ಕುಡಿವ ನೀರಿನ ಸಮಸ್ಯೆ ಇರುವ 15 ಗ್ರಾಮಗಳಲ್ಲಿ 17 ಖಾಸಗಿ ಬೋರ್​ವೆಲ್​ ಬಾಡಿಗೆ ಪಡೆಯಲಾಗಿದೆ ಎಂದರು.

ನಗರ, ಪಟ್ಟಣ ಪ್ರದೇಶಗಳಲ್ಲಿ 860 ಕೊಳವೆ ಬಾವಿಗಳಿದ್ದು, 749 ಚಾಲನೆಯಲ್ಲಿವೆ. ತುಂಗಭದ್ರಾ ಹಿನ್ನೀರಿನಲ್ಲಿ 0.3ಟಿಎಂಸಿ ಅಡಿ ನೀರು ಕುಡಿಯಲು ಮೀಸಲಿಡಲಾಗಿದೆ. ಜಿಲ್ಲಾ, ತಾಲೂಕು, ಗ್ರಾಪಂ ಮಟ್ಟದಲ್ಲಿ ಸಹಾಯವಾಣಿ ಆರಂಭಿಸಿದ್ದು, ಗ್ರಾಮೀಣ ಭಾಗದಲ್ಲಿ 18, ನಗರದಲ್ಲಿ 101 ದೂರು ಬಂದಿದ್ದು ಪರಿಹರಿಸಲಾಗಿದೆ. ನಿಯಮಿತವಾಗಿ ಸಭೆ ನಡೆಸಿ ನೀಡುವ ಸೂಚನೆ ಪಾಲಿಸಿ. ಜಿಲ್ಲೆಯಲ್ಲಿ 10,16,004 ಮೆಟ್ರಿಕ್​ ಟನ್​ ಮೇವು ಲಭ್ಯವಿದ್ದು, 66 ವಾರಕ್ಕೆ ಸಾಕಾಗಲಿದೆ ಎಂದು ವಿವರಿಸಿದರು.

ಜಿಪಂ ಉಪ ಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ, ಪಶು ಪಾಲನಾ ಇಲಾಖೆ ಉಪನಿರ್ದೇಶಕ ಡಾ.ಪಿ.ಎಂ.ಮಲ್ಲಯ್ಯ, ಜಿಲ್ಲಾಧಿಕಾರಿ ಕಚೇರಿ ಶಿರಸ್ತೆದಾರ ಶಿವುಕುಮಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net