ಸಂತ್ರಸ್ತರಿಗೆ ಅವಧಿಯೊಳಗೆ ಪರಿಹಾರ ನೀಡಿ: ಡಿಸಿ ನಲಿನ್​ ಅತುಲ್​ ಸೂಚನೆ

dc meet in Koppal Naleen athul social welfare department
ಕೊಪ್ಪಳದಲ್ಲಿ ಶುಕ್ರವಾರ ಡಿಸಿ ನಲಿನ್​ ಅತುಲ್​ ಅಧ್ಯಕ್ಷತೆಯಲ್ಲಿ ದೌರ್ಜನ್ಯ ನಿಯಂತ್ರಣ, ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆ ನಡೆಯಿತು. ಜಿಪಂ ಸಿಇಒ ರಾಹುಲ್​ ರತ್ನಂ ಪಾಂಡೆಯ, ಎಎಸ್ಪಿ ಹೇಮಂತ್​ ಕುಮಾರ್​, ಎಸಿ ಕ್ಯಾ.ಮಹೇಶ ಮಾಲಗಿತ್ತಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಕಾವ್ಯಾರಾಣಿ, ತಹಸೀಲ್ದಾರ ವಿಠ್ಠಲ್​ ಚೌಗಲಾ, ನಗರಸಭೆ ಪೌರಾಯುಕ್ತ ಗಣಪತಿ ಪಾಟೀಲ ಇದ್ದರು.
Published on

ಕೊಪ್ಪಳ: ಎಸ್ಸಿ, ಎಸ್ಟಿ ಜನರ ಮೇಲಿನ ದೌರ್ಜನ್ಯ, ಜಾತಿ ನಿಂದನೆ ಟನೆಗಳಲ್ಲಿ ಕಡ್ಡಾಯವಾಗಿ ಪ್ರಕರಣ ದಾಖಲಿಸಿ. ಸಂತ್ರಸ್ತರಿಗೆ ನಿಯಮಾನುಸಾರ ಅವಧಿಯೊಳಗೆ ಪರಿಹಾರ ವಿತರಿಸಿ ಎಂದು ಜಿಲ್ಲಾಧಿಕಾರಿ ನಲಿನ್​ ಅತುಲ್​ ಸೂಚಿಸಿದರು.

ನಗರದ ಡಿಸಿ ಕಚೇರಿಯಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ದೌರ್ಜನ್ಯ ನಿಯಂತ್ರಣ, ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆ ಉದ್ದೇಶಿಸಿ ಮಾತನಾಡಿದರು.

ಜಿಲ್ಲೆಯ ಯಾವುದೇ ಭಾಗದಲ್ಲಿ ದೌರ್ಜನ್ಯಗಳಾದಲ್ಲಿ ದೂರು ದಾಖಲಿಸಿ. ಅಗತ್ಯ ಚಿಕಿತ್ಸೆ ಕೊಡಿಸಿ. ರಕ್ಷಣೆ ನೀಡುವ ಜತೆಗೆ ಸಂತ್ರಸ್ತರಿಗೆ ಅವಧಿಯೊಳಗೆ ಪರಿಹಾರ ವಿತರಿಸಿ. ಅನಗತ್ಯ ವಿಳಂಬ, ತೊಂದರೆ, ರ್ನಿಲಕ್ಷ$್ಯ ಮಾಡುವಂತಿಲ್ಲ. ಪಜಾ,ಪಪಂ ನಿವಾಸಿಗಳ ಪ್ರದೇಶಗಳಲ್ಲಿ ಕುಡಿವ ನೀರು, ಶೌಚಗೃಹ, ಚರಂಡಿ, ಇತರ ಮೂಲಸೌಕರ್ಯ ಕಲ್ಪಿಸಿ. ದೂರು ಸಲ್ಲಿಸಲು ಬಂದಾಗ ನಿರಾಕರಿಸದೇ ದಾಖಲಿಸಿಕೊಳ್ಳಿ. ಬಾಕಿ ಪ್ರಕರಣಗಳನ್ನ ವಿಲೇವಾರಿ ಮಾಡಿ. ಸಮುದಾಯ ಭವನಗಳ ನಿಮಾರ್ಣ, ಅಂಗನವಾಡಿ ಸೇರಿ ಎಲ್ಲ ಕಾಮಗಾರಿಗಳು ಅವಧಿಯೊಳಗೆ ಪೂರ್ಣಗೊಳಿಸಿ ಎಂದು ನಿರ್ದೇಶಿಸಿದರು.

ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ರಾಜು ತಳವಾರ ಮಾತನಾಡಿ, ಬಾಬು ಜಗಜೀವನರಾಂ ಭವನ ನಿಮಾರ್ಣ ಸಂಬಂಧ ಹೆಚ್ಚುವರಿ ಅಂದಾಜು ಪತ್ರಿಕೆ ಸಲ್ಲಿಸಲಾಗಿದೆ. ಅಂಬೇಡ್ಕರ್​ ಭವನದಲ್ಲಿ ತಾಲೂಕು ಕಚೇರಿ ಆರಂಭಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ಸಮಿತಿ ಸದಸ್ಯರು ಪ್ರಸ್ತಾಪಿಸಿದ ವಿವಿಧ ವಿಷಯಗಳಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಪ್ರಸಕ್ತ ವರ್ಷದಲ್ಲಿ 36 ದೌಜ್ಯನ್ಯ ಪ್ರಕರಣಗಳಾಗಿವೆ. 31 ಎ್​ಐಆರ್​, 22 ಚಾರ್ಜ್​ಶೀಟ್​ ಹಂತದಲ್ಲಿವೆ. 53 ಪ್ರಕರಣಗಳಲ್ಲಿ 49,25,000ರೂ. ಪರಿಹಾರ ವಿತರಿಸಲಾಗಿದೆ. ಜಿಲ್ಲಾ ಹಂತದ ಮಂಜೂರಾತಿಗೆ ಎರಡು ಪ್ರಕರಣ ಬಾಕಿ ಇವೆ. ನ್ಯಾಯಾಲಯದಲ್ಲಿ 266 ಪ್ರಕರಣಗಳಿದ್ದು, 12 ರಲ್ಲಿ ಬಿಡುಗಡೆ, 2 ರಲ್ಲಿ ಶಿಕ್ಷೆ, ಇತರೆ 2 ಸೇರಿದಂತೆ 16 ಪ್ರಕರಣಗಳು ವಿಲೇವಾರಿಯಾಗಿವೆ ಎಂದರು.

ಜಿಪಂ ಸಿಇಒ ರಾಹುಲ್​ ರತ್ನಂ ಪಾಂಡೆಯ, ಎಎಸ್ಪಿ ಹೇಮಂತ್​ ಕುಮಾರ್​, ಎಸಿ ಕ್ಯಾ.ಮಹೇಶ ಮಾಲಗಿತ್ತಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಕಾವ್ಯಾರಾಣಿ, ತಹಸೀಲ್ದಾರ ವಿಠ್ಠಲ್​ ಚೌಗಲಾ, ನಗರಸಭೆ ಪೌರಾಯುಕ್ತ ಗಣಪತಿ ಪಾಟೀಲ, ದೌರ್ಜನ್ಯ ನಿಯಂತ್ರಣ, ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸದಸ್ಯರಾದ ಚಂದ್ರಪ್ಪ, ಚಂದಾಲಿಂಗಪ್ಪ ಮಾದರ, ಸಿದ್ದು ಮಣ್ಣಿನವರ, ಮರಳಸಿದ್ದಪ್ಪ ಪೂಜಾರ, ಮಾರುತಿ ಚಾಮಲಾಪುರ, ಸುಂಕಪ್ಪ ಮಾಲಗತ್ತಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net