ಸಫಾಯಿ ಕರ್ಮಚಾರಿಗಳಿಗೆ ಗುರುತಿನ ಚೀಟಿ ನೀಡಿ: ಡಿಸಿ ನಲಿನ್​ ಅತುಲ್​

dc koppal naleen atul sapayi karmachari meeting
ಜಿಲ್ಲೆಯ ವಿವಿಧ ನಗರ, ಸ್ಥಳಿಯ ಸಂಸ್ಥೆಗಳಲ್ಲಿ ಕಾಯಂ ನೇಮಕಾತಿ ಹೊಂದಿದ ಪೌರ ಕಾರ್ಮಿಕರಿಗೆ ಡಿಸಿ ನಲಿನ್​ ಅತುಲ್​ ಶುಕ್ರವಾರ ಸಾಂಕೇತಿಕವಾಗಿ ಆದೇಶ ಪತ್ರ ವಿತರಿಸಲಾಯಿತು. ಜಿಪಂ ಸಿಇಒ ರಾಹುಲ್​ ರತ್ನಂ ಪಾಂಡೆಯ, ಉಪಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ, ಡಿಯುಡಿಸಿ ಪಿಡಿ ಕಾವ್ಯಾರಾಣಿ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ರಾಜು ತಳವಾರ ಇದ್ದರು.
Published on

ಕೊಪ್ಪಳ: ಜಿಲ್ಲೆಯ ಎಲ್ಲ ನಗರ-ಸ್ಥಳಿಯ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಖಾಯಂ ಹಾಗೂ ಹಂಗಾಮಿ ಸಫಾಯಿ ಕರ್ಮಚಾರಿಗಳಿಗೆ ವಿವರ ಇರುವ ಗುರುತಿನ ಚೀಟಿ ನೀಡುವಂತೆ ಜಿಲ್ಲಾಧಿಕಾರಿ ನಲಿನ್​ ಅತುಲ್​ ಅಧಿಕಾರಿಗಳಿಗೆ ತಿಳಿಸಿದರು.

ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಮಡಿದ್ದ ಸಫಾಯಿ ಕರ್ಮಚಾರಿಗಳ ಜಿಲ್ಲಾ ಮಟ್ಟದ ವಿಜಿಲೆನ್ಸ್​ ಕಮಿಟಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಾಯಿ ಕರ್ಮಚಾರಿಗಳಿಗೆ ಸರ್ಕಾರದ ಸೌಲಭ್ಯ ಪಡೆಯಲು ಗುರುತಿನ ಚೀಟಿ ಅವಶ್ಯ. ಮೊಲದು ಅವರಿಗೆ ಗುರುತಿನ ಚೀಟಿ ವಿತರಿಸಿ. ನಿಯಮಿತವಾಗಿ ಆರೋಗ್ಯ ತಪಾಸಣೆ, ಕಾರ್ಯಾಗಾರ ಆಯೋಜಿಸಿ. ಗುಣಮಟ್ಟದ ಕೈಗವಸು, ಬೂಟು, ಮಾಸ್ಕ್​ ಇತರ ರಕ್ಷಣಾ ಸಾಮಗ್ರಿ ವಿತರಿಸಿ. ಅವರ ಮಕ್ಕಳಿಗೆ ವಸತಿ ನಿಲಯಗಳಲ್ಲಿ ವಿಶೇಷ ಮೀಸಲಾತಿ, ಪ್ರೋತ್ಸಾಹಧನ ಸೌಲಭ್ಯ ಬಗ್ಗೆ ತಿಳಿಸಿ. ನಿವೃತ್ತರಾಗುವ ಮುಂಚಿನ ಮೂರು ತಿಂಗಳಲ್ಲಿ ಸೇವಾ ದಾಖಲೆ, ಪಿಂಚಣಿ ದಾಖಲೆ ಸಿದ್ಧಪಡಿಸಿಕೊಂಡು ನಿವೃತ್ತಿ ದಿನದಂದೇ ಪಿಂಚಣಿ ಆದೇಶ ಪತ್ರ ವಿತರಿಸಿ. ಅನಗತ್ಯ ವಿಳಂಬ ಬೇಡ. ವಸತಿ ಯೋಜನೆಯಡಿ ನಿವೇಶನ ಒದಗಿಸಿ, ಮನೆ ನಿರ್ಮಿಸಿಕೊಡಿ. ಕೆಲಸ ಮಾಡುವ ಸ್ಥಳಕ್ಕೆ ಹತ್ತಿರ ಇರುವೆಡೆ ನಿವೇಶನ ಇರುವಂತೆ ನೋಡಿಕೊಳ್ಳಿ. ಬೆಳಗ್ಗೆ ಉಪಾಹಾರ ನೀಡುವಿಕೆ ಕಡ್ಡಾಯ. ಸಮಸ್ಯೆ ಆದಾಗ ಅಧಿಕಾರಿಗಳು ಸೌಜನ್ಯದಿಂದ ವರ್ತಿಸಿ ಎಂದು ಸೂಚಿಸಿದರು.

ಅಲೆಮಾರಿ/ಅರೆ ಅಲೆಮಾರಿ ಲಾನುಭವಿಗಳಿಗೆ ವಸತಿ ಯೋಜನೆಯಡಿ ನಿವೇಶನ ಹಂಚಿಕೆ ಮಾಡುವಾಗ ಕಡ್ಡಾಯವಾಗಿ ದಾಖಲೆ ಪರಿಶೀಲಿಸಿ. ಅರ್ಹ ಫಲಾನುಭವಿಗಳ ಪಟ್ಟಿ ಸಿದ್ಧಪಡಿಸಿ. ಯಾವುದೇ ಯೋಜನೆಯ ಫಲಾನುಭವಿ ಪಟ್ಟಿ ಸರ್ಕಾರಕ್ಕೆ ಸಲ್ಲಿಸುವಾಗ ನೈಜತೆ ಪರಿಶೀಲಿಸಿ. ಅರ್ಹರಿಗೆ ಮಾತ್ರ ಯೋಜನೆ ದೊರೆಯುವಂತೆ ನೋಡಿಕೊಳ್ಳಿ ಎಂದರು.

ಕಾರ್ಯಕ್ರಮದಲ್ಲಿ ವಿವಿಧ ನಗರ, ಸ್ಥಳಿಯ ಸಂಸ್ಥೆಗಳಲ್ಲಿ ಕಾಯಂ ನೇಮಕಾತಿ ಹೊಂದಿದ ಪೌರ ಕಾರ್ಮಿಕರಿಗೆ ಸಾಂಕೇತಿಕವಾಗಿ ಆದೇಶ ಪತ್ರ ವಿತರಿಸಲಾಯಿತು.

ಜಿಪಂ ಸಿಇಒ ರಾಹುಲ್​ ರತ್ನಂ ಪಾಂಡೆಯ, ಉಪಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ, ಡಿಯುಡಿಸಿ ಪಿಡಿ ಕಾವ್ಯಾರಾಣಿ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ರಾಜು ತಳವಾರ, ಸಫಾಯಿ ಕರ್ಮಚಾರಿಗಳ ಜಿಲ್ಲಾ ಮಟ್ಟದ ವಿಜಿಲೆನ್ಸ್​ ಕಮಿಟಿಯ ಸದಸ್ಯರಗಡಪ್ಪ ಹುಲಿಹೈದರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net