ಕೊಪ್ಪಳದಲ್ಲಿ ಉರುಸ್​ ಕಾರ್ಯಕ್ರಮ

district koppal darga urus celebration
Published on

ಕೊಪ್ಪಳ: ನಗರದ ಹುಲಿಕೆರೆ ಬಲದಂಡೆ ಹತ್ತಿರ ಇರುವ ದಿಡ್ಡಿಕೇರಿ ಹಜರತ್​ ಸೈಯದ್​ ಷಾ ಗುಲಾಬ್​ ಷಾವಲಿ ದರ್ಗಾ ಉರುಸ್​ ಕಾರ್ಯಕ್ರಮ ಇಂದು ನಡೆಯಲಿದೆ. ಗುರುವಾರ ಗಂಧ ಕಾರ್ಯಕ್ರಮ ವಿಜೃಂಭಣೆಯಿಂದ ನೆರವೇರಿತು.

ನರಗದ ಪ್ರಮುಖ ದರ್ಗಾಗಳಲ್ಲಿ ಇದು ಒಂದಾಗಿದ್ದು ಪ್ರತಿ ವರ್ಷ ಸಂಭ್ರಮದಿಂದ ಉರುಸ್​ ಆಚರಿಸಲಾಗುತ್ತದೆ. ಮೂರು ದಿನಗಳ ಕಾಲ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಲಿವೆ. ಗುರುವಾರ ಗಂಧ ಕಾರ್ಯಕ್ರಮ ಮೂಲಕ ಧಾರ್ಮಿಕ ಕಾರ್ಯಕ್ರಮಗಳಿಗೆ ಚಾಲನೆ ದೊರೆತಿದೆ. ಸಂಜೆ ದಿಡ್ಡಿಕೇರಿಯ ಜುಮ್ಮಾ ಮಸೀದಿಯಿಂದ ಸೈಲಾನಪುರ (ಹಿರೇಮಸೂತಿ) ಮಾರ್ಗವಾಗಿ ದರ್ಗಾವರೆಗೆ ಗಂಧ ಮೆರವಣಿಗೆ ನಡೆಯಿತು. ವರುಣನ ಕಣ್ಣಾಮುಚ್ಚಾಲೆ ನಡುವೆಯೂ ಯಶಸ್ವಿಯಾಗಿ ಕಾರ್ಯಕ್ರಮ ಜರುಗಿತು.

ಇಂದು ಉರುಸ್​ ಕಾರ್ಯಕ್ರಮವಿದ್ದು, ಬೆಳಗ್ಗೆಯಿಂದ ರಾತ್ರಿವರೆಗೆ ಧಾರ್ಮಿಕ ವಿಧಿ&ವಿಧಾನಗಳು ನೆರವೇರಲಿವೆ. ಸಾವಿರಾರು ಭಕ್ತರು ದರ್ಗಾಕ್ಕೆ ಆಗಮಿಸಲಿದ್ದು ದೇವರ ಪ್ರಾರ್ಥನೆ ನೆರವೇರಿಸುವರು. ಇಷ್ಟಾರ್ಥ ಸಿದ್ಧಿಗೆ ಬೇಡಿಕೊಳ್ಳುವರು. ಆಗಮಿಸುವ ಭಕ್ತರಿಗೆ ದರ್ಗಾ ನಿರ್ವಹಣಾ ಸಮಿತಿ ಪ್ರಸಾದ ವ್ಯವಸ್ಥೆ ಕಲ್ಪಿಸಿದೆ. ಉರುಸ್​ ಆಚರಣೆ ಹಿನ್ನೆಲೆಯಲ್ಲಿ ದರ್ಗಾವನ್ನು ವಿದ್ಯುತ್​ ದೀಪಾಲಂಕಾರದಿಂದ ಸಿಂಗರಿಸಲಾಗಿದೆ. ನಾಳೆ ಜಿಯಾರತ್​ ಕಾರ್ಯಕ್ರಮ ಜರುಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net