ಭವಿಷ್ಯಕ್ಕೆ ಕೌಶಲವೇ ಭದ್ರ ಬುನಾದಿ

district koppal cvc foudation trainig programme
Published on

ಕೊಪ್ಪಳ: ವಿಶ್ವದಲ್ಲಿ ನಮ್ಮ ದೇಶದಲ್ಲಿ ಹೆಚ್ಚು ಯುವಕರು ಇದ್ದಾರೆ. ಕೌಶಲಯುಕ್ತ ಶಿಕ್ಷಣದಿಂದ ಮಾತ್ರ ಯುವಕರಿಗೆ ಭವಿಷ್ಯ ಭದ್ರಗೊಳಿಸಲಿದೆ ಎಂದು ಜೆಡಿಎಸ್ ಕೋರ್ ಕಮಿಟಿ ಸದಸ್ಯ ಸಿ.ವಿ.ಚಂದ್ರಶೇಖರ ಹೇಳಿದರು.

ಸಿವಿಸಿ ಫೌಂಡೇಶನ್ ಹಾಗೂ ಎಸ್ವಿಸಿ ಶೈಕ್ಷಣಿಕ ಮತ್ತು ಗ್ರಾಮೀಣ ಅಭಿವೃದ್ಧಿ ಸಂಸ್ಥೆ, ಎಸ್ಎಸ್ಐ ಟೆಕ್ನಾಲಜೀಸ್ ಸಹಯೋಗದಲ್ಲಿ ಆಯೋಜಿಸಿದ ಉಚಿತ ಡಿಜಿಟಲ್ ಲಿಟ್ರಸಿ ಮತ್ತು ಸ್ಪೋಕನ್ ಇಂಗ್ಲೀಷ್ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮಾನವಸಂಪನ್ಮೂಲ ದೇಶದ ದೊಡ್ಡ ಆಸ್ತಿ. ಅದು ಕೌಶಲಯುಕ್ತವಾದಾಗ ಮಾತ್ರ ಸದುಪಯೋಗವಾಗಲಿದೆ. ಯುವಕರಿಗೆ ಶಿಕ್ಷಣ, ಜ್ಞಾನ ಹಾಗೂ ಕೌಶಲ ಅನಿವಾರ್ಯ. ಯುವಶಕ್ತಿ ಕೌಶಲಯುತವಾದಾಗ ಭಾರತ ವಿಶ್ವದ ಅತ್ಯಂತ ಬಲಾಢ್ಯ ರಾಷ್ಟ್ರವಾಗಲಿದೆ. ಪಾಶ್ಚಿಮಾತ್ಯದಿಂದ ಬರುವ ಜ್ಞಾನ ಇಂಗ್ಲಿಷ್ ಭಾಷೆಯಲ್ಲಿಯೇ ಹುಟ್ಟುತ್ತದೆ. ಆ ಜ್ಞಾನವನ್ನು ಅರ್ಥಮಾಡಿಕೊಳ್ಳಲು ಇಂಗ್ಲೀಷ್ ಭಾಷಾ ಪ್ರೌಢಿಮೆ ಅಗತ್ಯ. ಬಹುತೇಕ ಯುವಕರಿಗೆ ಡಿಜಿಟಲ್ ಕೌಶಲಗಳು ಇಲ್ಲದಿರುವುದು ನಿರುದ್ಯೋಗಕ್ಕೆ ಕಾರಣ. ಅಭಿವೃದ್ಧಿಗೆ ಅಡ್ಡಿಯಾಗುತ್ತಿದೆ. ಸಿವಿಸಿ ಫೌಂಡೇಶನ್ ಎಸ್ಎಸ್ಐ ಟೆಕ್ನಾಲಜಿಸ್ ಸಹಯೋಗದಲ್ಲಿ ಎರಡು ತಿಂಗಳ ಉಚಿತ ತರಬೇತಿ ಕಾರ್ಯಕ್ರಮವನ್ನು ಕೊಪ್ಪಳದ ಯುವಕರಿಗೆ ಆಯೋಜಿಸಿದೆ ಎಂದರು.

ರಾಜ್ಯ ಶಿಕ್ಷಣ ಸಂಪನ್ಮೂಲ ವ್ಯಕ್ತಿ ಮತ್ತು ಇಂಗ್ಲೀಷ್ ಭಾಷಾ ತಜ್ಞ ಸಿ.ವಿ. ಪಾಟೀಲ್ ಮಾತನಾಡಿ, ಭಾಷೆಯ ನಿರಂತರ ಬಳಕೆ ಭಾಷಾ ಸಾಮರ್ಥ್ಯ ಹೆಚ್ಚಿಸುತ್ತದೆ. ಇಂಗ್ಲೀಷ್ ಭಾಷಾ ಜ್ಞಾನ ಹೊಂದಿದ ವ್ಯಕ್ತಿ ಪ್ರಪಂಚದೆಲ್ಲೆಡೆ ವ್ಯವಹರಿಸಬಹುದು. ಪೂರ್ವ ಭಾಗದ ಕೆಲ ದೇಶಗಳಲ್ಲಿ ಇಂಗ್ಲೀಷ್ ಭಾಷೆ ಕಲಿಸುವವರಿಗೆ ಭಾರಿ ಬೇಡಿಕೆ ಇದೆ ಎಂದು ತಿಳಿಸಿದರು.

ಎಸ್ಎಸ್ಐ ಟೆಕ್ನಾಲಜಿಸ್ ಮುಖ್ಯಸ್ಥ ಮಂಜುನಾಥ ಉಲ್ಲತ್ತಿ, ಎಸ್ವಿಸಿ ಶಿಕ್ಷಣ ಸಂಸ್ಥೆ ಸಿಇಒ ಜಗದೀಶ ಅಂಗಡಿ ಮಾತನಾಡಿದರು. ಸಿವಿಸಿ ೌಂಡೇಶನ್ ಸಂಚಾಲಕ ಮೌನೇಶ ಕಿನ್ನಾಳ, ಉಪನ್ಯಾಸಕರಾದ ಶಿವಯ್ಯ ಹಿರೇಮಠ್, ಸಂಗನಗೌಡರ, ಮೋನಿಕಾ ಇಟಗಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net