

ಕೊಪ್ಪಳ: ಯೇಸುಕ್ರಿಸ್ತ ಅವರ ಬೋಧನೆ ನಮಗೆಲ್ಲ ದಾರಿ ದೀಪ. ಸನ್ಮಾರ್ಗದಲ್ಲಿ ನಡೆಯೋಣ ಎಂದು ಶಾಸಕ ರಾವೇಂದ್ರ ಹಿಟ್ನಾಳ ಹೇಳಿದರು.
ನಗರದ ಚರ್ಚ್ನಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕ್ರಿಸ್ಮಸ್ ಆಚರಣೆಯಲ್ಲಿ ಭಾಗಿಯಾಗಿ ಮಾತನಾಡಿದರು.
ಯೇಸು ಸಾಮಾನ್ಯ ಹಟ್ಟಿಯಲ್ಲಿ ಹುಟ್ಟಿ ಅಸಾಮಾನ್ಯವಾಗಿ ಬೆಳದರು. ತನ್ನನ್ನೇ ಉರಿಸಿಕೊಂಡು ಜಗತ್ತಿಗೆ ಬೆಳಕು ನೀಡಿದರು. ದೇವ ಮಾನವರಾದರು. ಬೈಬಲ್ ಕೇವಲ ಕೆಸ್ತರಿಗಷ್ಟೇ ಅಲ್ಲ ಎಲ್ಲರಿಗೂ ಸದ್ಭಾವನಾ ಗ್ರಂಥ. ಕೊಪ್ಪಳ ವಿಧಾನಸಭ ಕ್ಷೇತ್ರದಲ್ಲಿರುವ ಚರ್ಚ್ ಗಳಿಗೆ ಅನುದಾನ ಮಂಜೂರು ಮಾಡಿಸಿ ಅಭಿವೃದ್ಧಿಪಡಿಸಿದ್ದೇವೆ. ಮೂಲ ಸೌಕರ್ಯಗಳನ್ನು ಕಲ್ಪಿಸಲಾಗುವುದು ಎಂದರು.
ಚರ್ಚ್ನಲ್ಲಿ ಸಾಮೂಹಿ ಪ್ರಾರ್ಥನೆ ನೆರವೇರಿಸಲಾಯಿತು. ಪಾಧರ್ ಜೆ.ರವಿಕುಮಾರ್, ನಗರಸಭೆ ಅಧ್ಯಕ್ಷ ಅಮ್ಜದ್ ಪಟೇಲ್, ವಿನಯ್ ಅಗಡಿ, ಶ್ಯಾಮ್ ಸುಂದರ್ ಇತರರಿದ್ದರು.
ಕೊಪ್ಪಳದ ಪುಲ್ಗೋಸ್ಪೆಲ್ ಚರ್ಚ್ ಆ್ ಕೆಸ್ತ್ನಲ್ಲಿ ಬೆಳಗ್ಗೆಯಿಂದ ಮಧ್ಯಾಹ್ನವರೆಗೆ ಸಾಮೂಹಿಕ ಪ್ರಾರ್ಥನ ನಡೆಯಿತು. ಕೆಸ್ತರು ಬೆಳಗ್ಗೆಯಿಂದ ಚರ್ಚಿಗೆ ಆಗಮಿಸಿ ಪ್ರಾರ್ಥನೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ಸಂಭ್ರಮಿಸಿದರು. ಪಾಸ್ಟರ್ ಜೆ. ಪೀಟರ್ ಜೇಮ್ಸ್ ಪ್ರಾರ್ಥನೆ ಬೋಧಿಸಿದರು.