ಮಾನವೀಯತೆಯಿಂದ ಬದುಕಬೇಕು

district koppal crismus celebration
Published on

ಕೊಪ್ಪಳ: ಎಲ್ಲರೂ ತಮ್ಮ ಧರ್ಮ ಅರಿತು ಬಾಳಬೇಕು. ಮಾನವೀಯತೆ ಅಳವಡಿಸಿಕೊಂಡು ಸೌಹಾರ್ದತೆಯಿಂದ ಜೀವನ ನಡೆಸಬೇಕೆಂದು ಮೌಲಾನ ಅಬುಲ್​ ಹಸನ್​ ಖಾಝಿ ಹೇಳಿದರು.

ಕ್ರಿಸ್​ಮಸ್​ ಅಂಗವಾಗಿ ಬುಧವಾರ ಹಮ್ಮಿಕೊಂಡಿದ್ದ ರಕ್ಷಣಾ ಶುಭ ವಾರ್ತೆ ಸೌಹಾರ್ದ ಯಾತ್ರೆ ಉದ್ದೇಶಿಸಿ ಮಾತನಾಡಿದರು.

ಮನುಷ್ಯ ತನ್ನಿಷ್ಟದ ಧರ್ಮ ಅನುಸರಿಸಬಹುದು. ಮನುಷ್ಯರಾಗಿ ಹುಟ್ಟಿದ್ದು, ಮಾನವೀಯತೆ ಅಳವಡಿಸಿಕೊಳ್ಳಬೇಕು. ಕುರಾನ್​ನಲ್ಲಿ ಹೇಳುವಂತೆ ಪಿತೂರಿ ಮಾಡುವುದು ಕೊಲೆಗಿಂತ ಹೆಚ್ಚು ಎಂದಿದೆ. ಕೊಲೆಯಿಂದ ಒಬ್ಬ ವ್ಯಕ್ತಿ ಹತನಾದರೆ, ಪಿತೂರಿಯಿಂದ ಸಾವಿರಾರು ಜನ ಪ್ರಾಣ ಕಳೆದುಕೊಳ್ಳುತ್ತಾರೆ. ಎಲ್ಲರೂ ಸೌಹಾರ್ದತೆಯಿಂದ ಬದುಕಬೇಕು. ಶಾಂತಿ ಸಂದೇಶ ಪಾಲಿಸೋಣ ಎಂದರು.

ನ್ಯಾಯವಾದಿ ಮಂಜುನಾಥ ಬಾಗೇಪಲ್ಲಿ ಮಾತನಾಡಿ, ನಮ್ಮ ರಾಜ್ಯ ಶರಣರ, ಸೂಫಿ ಸಂತರ ನಾಡು. ದಯೆ ಇಲ್ಲದ ಧರ್ಮ ಯಾವುದಯ್ಯ ಎಂದು ಶರಣರು ಹೇಳಿದ್ದಾರೆ. ಕೆಲವು ಹಿತಾಸಕ್ತಿಗಳು ಬಹುಜನರ ಸಾಮಾಜಿಕ ಸ್ವಾಸ್ಥ್ಯ ಹಾಳುಮಾಡುತ್ತಿದ್ದು, ಜನರು ಎಚ್ಚರವಹಿಸಬೇಕೆಂದರು.

ನಗರ ಸಭೆ ಅಧ್ಯಕ್ಷ ಅಮ್ಜದ್​ ಪಟೇಲ್​ ಮಾತನಾಡಿ, ಕಲಬುರ್ಗಿಯಲ್ಲಿ ಶರಣಬಸವೇಶ್ವರ ಹಾಗೂ ಖಾಜಾ ಬಂದೆ ನವಾಜ್​, ಕೊಪ್ಪಳದಲ್ಲಿ ಗವಿಮಠ ಹಾಗೂ ಮರ್ದಾನ್​ ಗೈಬ್​ ದರ್ಗಾ ಸಾಮರಸ್ಯಕ್ಕೆ ಹೆಸರಾಗಿವೆ. ಸೂಫಿ, ಸಂತರು ನಮಗೆ ಸಾಮರಸ್ಯದಿಂದ ಬಾಳಲು ಕಲಿಸಿದ್ದಾರೆ. ಕೊಪ್ಪಳದಲ್ಲಿ ಯಾವುದೇ ಕಲಹಗಳಿಲ್ಲ. ಎಲ್ಲ ಧರ್ಮದವರೂ ಬಾಂದವ್ಯದಿಂದ ಇದ್ದೇವೆ. ಇದನ್ನು ಮುಂದುವರೆಸಿಕೊಂಡು ಹೋಗೋಣ ಎಂದರು.

ಗವಿಮಠದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಜಾಥಾಕ್ಕೆ ಚಾಲನೆ ನೀಡಿದರು. ಭ್ರಾತೃತ್ವ ಸಮಿತಿ ಜಿಲ್ಲಾ ಸಂಚಾಲಕ ಎಸ್​.ಎ.ಗಫಾರ್​, ಪಾಸ್ಟರ್ಸ್​ ಅಸೋಸಿಯೇಷನ್​ ಜಿಲ್ಲಾಧ್ಯಕ್ಷ ಚನ್ನಬಸಪ್ಪ ಅಪ್ಪಣ್ಣನವರ, ಸಾಹಿತಿ ಅಲ್ಲಮಪ್ರಭು ಬೆಟ್ಟದೂರು, ಭೀಮ್​ ಆರ್ಮಿ ಕರ್ನಾಟಕ ಏಕತಾ ಮಿಷಿನ್​ ಜಿಲ್ಲಾಧ್ಯಕ್ಷ ನಿಂಗಪ್ಪ ಮಾತನಾಡಿದರು.

ಪಾಸ್ಟರ್ಸ್​ ಅಸೋಸಿಯೇಷನ್​ ಜಿಲ್ಲಾ ಉಪಾಧ್ಯಕ್ಷ ಾದರ್​ ತಿಪ್ಪೇಶ ನಾಯಕ, ಪ್ರ.ಕಾ. ಾದರ್​ ಡಿ.ಆರ್​.ಪೀಟರ್​, ಖಜಾಂಚಿ ಾದರ್​ ಎಂ. ಡೇವಿಡ್​, ಾದರ್​ ಪ್ರಸಾದ್​, ಾದರ್​ ಸುಧಾಕರ್​, ಾದರ್​ ಡಿ.ರಾಜು, ಾದರ್​ ಅಬ್ರಾಹಂ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net