

ಕೊಪ್ಪಳ: ಗಂಗಾವತಿಯಲ್ಲಿ ಪುಂಡರು ವೃದ್ಧ ಹುಸೇನ್ ಸಾಬ್ ಮೇಲೆ ಹಲ್ಲೆ ನಡೆಸಿ, ಜೈ ಶ್ರೀರಾಮ್ ಘೋಷಣೆ ಕೂಗುವಂತೆ ಹಿಂಸಿದ್ದು, ಅವರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಸಿಪಿಐಎಂ ತಾಲೂಕು ಪದಾಧಿಕಾರಿಗಳು ಸೋಮವಾರ ನಗರದ ಕೇಂದ್ರ ಬಸ್ ನಿಲ್ದಾಣ ಮುಂಭಾಗ ಪ್ರತಿಭಟನೆ ನಡೆಸಿದರು.
65 ವಯಸ್ಸಿನ ವೃದ್ಧನಿಗೆ ಹೊಡೆಯುವುದಲ್ಲದೇ ಗಡ್ಡಕ್ಕೆ ಬೆಂಕಿ ಹಚ್ಚಿದ್ದಾರೆ. ಅವರ ಬಳಿ ಇದ್ದ ಹಣ ದೋಚಿದ್ದು, ಬಲವಂತವಾಗಿ ಜೈ ಶ್ರೀರಾಮ್ ಘೋಷಣೆ ಕೂಗುವಂತೆ ಆಗ್ರಹಿಸಿದ್ದಾರೆ. ಗಂಗಾವತಿ ಭಾಗದಲ್ಲಿ ಇಂಥ ಟನೆಗಳು ಮರುಕಳಿಸುತ್ತಿದ್ದು, ಕೋಮು ಗಲಭೆ ಹೆಚ್ಚುವ ಸಾಧ್ಯತೆ ಇದೆ ಎಂದು ಪ್ರತಿಭಟನಕಾರರು ಕಳವಳ ವ್ಯಕ್ತಪಡಿಸಿದರು.
ತಕ್ಷಣ ಕಿಡಿಗೇಡಿಗಳನ್ನು ಬಂಧಿಸಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ವೃದ್ಧನಿಗೆ ಅಗತ್ಯ ಚಿಕಿತ್ಸೆ ಹಾಗೂ ರಕ್ಷಣೆ ನೀಡಬೇಕು. ಕೋಮು ಪ್ರಚೋದಿತ ಚಟುವಟಿಕೆಗಳಿಗೆ ಬ್ರೇಕ್ ಹಾಕಬೇಕು. ಶಾಂತಿ ಸುವ್ಯವಸ್ಥೆ ಕಾಪಾಡಬೇಕು. ಹಲ್ಲೆಗೊಳಗಾದ ಹುಸೇನ್ಸಾಬ್ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ನೀಡಬೇಕೆಂದು ಆಗ್ರಹಿಸಿದರು.
ಪ್ರತಿಭಟನಕಾರರಾದ ಸುಂಕಪ್ಪ ಗದಗ, ಹನುಮೇಶ ಕಲ್ಮಂಗಿ, ಶೇಖಪ್ಪ ಚೌಡ್ಕಿ, ಹುಲುಗಪ್ಪ ಗೋಕಾವಿ, ರಾಮಣ್ಣ ದೊಡ್ಮನಿ, ಹುಸೇನ್ಸಾಬ್, ಅಮರವ್ವ ಗದಗ, ಕೀರಮಮ್ಮ, ಗಂಗಮ್ಮ ಇತರರಿದ್ದರು.
ಹುಸೇನ್ಸಾಬ್ ಮೇಲಿನ ಹಲ್ಲೆ ಖಂಡಿಸಿ ಸಿಪಿಐಎಂ ಕಾರ್ಯಕರ್ತರು ಸೋಮವಾರ ಕೊಪ್ಪಳದಲ್ಲಿ ಪ್ರತಿಭಟನೆ ನಡೆಸಿದರು. ಸುಂಕಪ್ಪ ಗದಗ, ಹನುಮೇಶ ಕಲ್ಮಂಗಿ, ಶೇಖಪ್ಪ ಚೌಡ್ಕಿ, ಹುಲುಗಪ್ಪ ಗೋಕಾವಿ, ರಾಮಣ್ಣ ದೊಡ್ಮನಿ, ಹುಸೇನ್ಸಾಬ್, ಅಮರವ್ವ ಗದಗ, ಕೀರಮಮ್ಮ, ಗಂಗಮ್ಮ ಇದ್ದರು.