ಯತ್ನಾಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ

district koppal cpim protest basanagouda patil yatnal
Published on

ಕೊಪ್ಪಳ: ದಲಿತ ಮಹಿಳೆ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿ ನಿಂದಿಸಿದ ವಿಜಯಪುರ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಸಿಪಿಐಎಂ ಸಂಚಾಲಕರು ನಗರದಲ್ಲಿ ಪ್ರತಿಭಟನೆ ನಡೆಸಿದರು.

ದಸರಾ ಕಾರ್ಯಕ್ರಮ ಉದ್ಘಾಟನೆ ವಿಷಯವಾಗಿ ಯತ್ನಾಳ ಮಾತನಾಡುವಾಗ ಅವಮಾನಕಾರಿ ಹೇಳಿಕೆ ನೀಡಿದ್ದಾರೆ. ಚಾಮುಂಡೇಶ್ವರಿ ದೇವಿಗೆ ಸನಾತನ ಧರ್ಮದ ಮಹಿಳೆಯರು ಮಾತ್ರ ಪೂಜೆ ಸಲ್ಲಿಸಬೇಕು. ದಲಿತ ಮಹಿಳೆಗೂ ಪೂಜೆಗೆ ಅವಕಾಶವಿಲ್ಲವೆಂದಿದ್ದಾರೆ. ಈ ಮೂಲಕ ದಲಿತ ಮಹಿಳೆಯನ್ನು ಸಾರ್ವಜನಿಕವಾಗಿ ಅವಮಾನಿಸಿ ನಿಂದನೆ ಮಾಡಿದ್ದಾರೆಂದು ಆರೋಪಿಸಿದರು.

ದಲಿತ ವಿರೋಧಿ ಹೇಳಿಕೆ ಖಂಡನೀಯ. ಸನಾತನ ಧರ್ಮದ ಹೆಸರಿನಲ್ಲಿ ಕೋಮು ಭಾವನೆ ಕೆರಳಿಸಿದ್ದಾರೆ. ದಲಿತರಿಗೆ ದೇವಿ ಪೂಜೆ ಅವಕಾಶವಿಲ್ಲವೆಂದು ಹೇಳಿ ಅವಮಾನಿಸಿದ್ದು ಸರಿಯಲ್ಲ. ಯತ್ನಾಳ ನಿತ್ಯ ಪ್ರಚೋದನಕಾರಿ, ಕೋಮು ಸಂಘರ್ಷ ಹೇಳಿಕೆ ನೀಡುತ್ತಿದ್ದಾರೆ. ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು.

ಸಿಪಿಐಎಂ ಸಂಚಾಲಕರಾದ ನಿರುಪಾದಿ ಬೆಣಕಲ್​, ಸುಂಕಪ್ಪ ಗದಗ, ಹುಸೇನಪ್ಪ ಕೆ., ಹುಲಿಗೆಮ್ಮ ಜಿ., ಮಂಜುನಾಥ ಡಗ್ಗಿ, ಕಾಸಿಂ ಸರ್ದಾರ, ಲಕ್ಷಿ$್ಮದೇವಿ ಸೋನಾರ, ಬಸವರಾಜ ಆನೆಗೊಂದಿ, ಶಿವು ಬೆಣಕಲ್​, ಮುತ್ತಣ್ಣ ಬೆಣಕಲ್​ ಫಕೀರಮ್ಮ ಮಿರಗನತಂಡಿ, ಅಮರವ್ವ ಗದಗ, ಹುಲುಗಪ್ಪ ಗೋಕಾವಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net