ತಂಗಡಗಿ ಮನೆಗೆ ಮುತ್ತಿಗೆ ಮೇ 15ಕ್ಕೆ

Published on

ಕೊಪ್ಪಳ: ಕಾರಟಗಿ ತಾಲೂಕಿನಲ್ಲಿ ಅರ್ಹರಿಗೆ ಸಾಗುವಳಿ ಚೀಟಿ, ಹಕ್ಕುಪತ್ರ ವಿತರಣೆಯಲ್ಲಿ ವಿಳಂಬ ಮಾಡುತ್ತಿರುವ ಸಚಿವ ಶಿವರಾಜ ತಂಗಡಗಿ ನಿವಾಸಕ್ಕೆ ಮೇ 15ರಂದು ಮುತ್ತಿಗೆ ಹಾಕಲಾಗುವುದೆಂದು ಸಿಪಿಐಎಂ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಚಂದ್ರಪ್ಪ ಹೊಸಕೇರಾ ತಿಳಿಸಿದರು.

ಕಾರಟಗಿ ತಾಲೂಕಿನ ಸಿದ್ದಾಪುರ ಹೋಬಳಿಯ ಸಿಂಗನಾಳ ಗ್ರಾಮದ ಸರ್ವೇ ನಂ 63, 7, 8, 9, 10 ಮತ್ತು 116, 117ರ ಸರ್ಕಾರಿ ಜಮೀನಿನಲ್ಲಿ ಕಳೆದ 25&30 ವರ್ಷದಿಂದ ಭೂರಹಿತ ಬಡವರು ಸಾಗುವಳಿ ಮಾಡುತ್ತಿದ್ದಾರೆ. ಹುಳ್ಕಿಹಾಳ ಗ್ರಾಮದ ಸರ್ವೇ ನಂ.139ರಲ್ಲಿ ದೇವದಾಸಿ ಮಹಿಳೆಯರು ಸಾಗುವಳಿ ಮಾಡುತ್ತಿದ್ದಾರೆ. 2019ರಲ್ಲಿ ಸಹಾಯಕ ಆಯುಕ್ತರು, ಜಿಲ್ಲಾಧಿಕಾರಿ ಸರ್ವೇ ನಡೆಸಿ ಸರ್ಕಾರಕ್ಕೆ ವರದಿ ಮಾಡಿದ್ದಾರೆ. ಹಕ್ಕುಪತ್ರ ವಿತರಿಸುವಂತೆ ಶಿಾರಸ್ಸು ಮಾಡಿದ್ದಾರೆ. ಸಚಿವ ಶಿವರಾಜ ತಂಗಡಗಿ ಅವರಿಗೆ ಹಲವು ಬಾರಿ ಮನವಿ ಮಾಡಿದ್ದೇವೆ. ಭೂ ಪರಿಹಾರ ಮಂಡಳಿಗೆ ಅವರೇ ಅಧ್ಯಕ್ಷರಿದ್ದು, ಸಭೆ ನಡೆಸಿ ರ್ನಿಣಯ ಕೈಗೊಳ್ಳದೇ ಅನ್ಯಾಯ ಮಾಡುತ್ತಿದ್ದಾರೆಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ದಲಿತ ಸಮುದಾಯದವರಾಗಿದ್ದು, ಬಾಯಿ ಮಾತಿನಲ್ಲಿ ಅಂಬೇಡ್ಕರ್​ ಅವರ ಆದರ್ಶ, ಚಿಂತನೆಗಳ ಬಗ್ಗೆ ಮಾತನಾಡುತ್ತಾರೆ. ಅಧಿಕಾರಿಗಳು ನೀಡಲು ಸಿದ್ಧರಿದ್ದರೂ ಸಭೆ ನಡೆಸಲು ಬಿಡುತ್ತಿಲ್ಲ. 6 ಎಕರೆ ಬಡವರು ಉಳುಮೆ ಮಾಡಿದರೆ, ಬಾಕಿ ಭೂಮಿಯವನ್ನು ಉಳ್ಳವರು ಒತ್ತುವರಿ ಮಾಡಿದ್ದಾರೆ. ಆಸ್ಪತ್ರೆ ಕಟ್ಟುವ ನೆಪದಲ್ಲಿ ಬಡವರನ್ನು ಒಕ್ಕಲೆಬ್ಬಿಸಲು ಯೋಜಿಸಿದ್ದಾರೆ. ಸಾಕಷ್ಟು ಭೂಮಿ ಇದ್ದು ಆಸ್ಪತ್ರೆ ನಿರ್ಮಿಸಲಿ. ಅದಕ್ಕೆ ನಮ್ಮ ವಿರೋಧವಿಲ್ಲ. ಆದರೆ, ಅರ್ಹರಿಗೆ ಹಕ್ಕುಪತ್ರ ನೀಡಬೇಕು. ಇಲ್ಲದಿದ್ದರೆ ಮೇ 15ರಂದು ಸಚಿವರ ನಿವಾಸಕ್ಕೆ ಮುತ್ತಿಗೆ ಹಾಕುತ್ತೇವೆಂದು ತಿಳಿಸಿದರು.

ಸಿಪಿಐಎಂ ಪದಾಧಿಕಾರಿಗಳಾದ ನಿರುಪಾದಿ ಬೆಣಕಲ್​, ಮರಿನಾಗಪ್ಪ ಡಗ್ಗಿ, ಮಂಜುನಾಥ ಡಗ್ಗಿ, ಶಿವಕುಮಾರ ಬೆಣಕಲ್​, ಸುಂಕಪ್ಪ ಗದಗ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net