ಸುಳ್ಳು ಸಾಕ್ಷಿ ನುಡಿದವನಿಗೆ 3 ವರ್ಷ ಜೈಲು

Published on

ಕೊಪ್ಪಳ: ಸುಳ್ಳು ಸಾಕ್ಷಿ ನುಡಿದಿದ್ದಕ್ಕೆ ಅಪರಾಧಿಗೆ 3 ವರ್ಷ ಜೈಲು  ಮತ್ತು 10 ಸಾವಿರ ರೂ. ದಂಡ ವಿಧಿಸಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಮುಖ್ಯ ಆಡಳಿತಾಧಿಕಾರಿ, ಮುಖ್ಯ ನ್ಯಾಯಿಕ ದಂಡಾಧಿಕಾರಿ ಮಲಕಾರಿ ರಾಮಪ್ಪ ಒಡೆಯರ್​ ಅ.21ರಂದು ಆದೇಶಿಸಿದ್ದಾರೆ.

ಕೊಪ್ಪಳ ತಾಲೂಕಿನ ಬಿಸರಳ್ಳಿಯ ಚಿದಾನಂದಯ್ಯ ಮುಂಡರಗಿ ಮಠ ಎಂಬಾತ ಶಿೆಗೆ ಗುರಿಯಾದಾತ. ಜಮೀನೊಂದರ ಪಹಣಿ ಬದಲಾವಣೆಗೆ ಗ್ರಾಮ ಆಡಳಿತಾಧಿಕಾರಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ. ಈ ಬಗ್ಗೆ ಲೋಕಾಯುಕ್ತರಿಗೆ ಮಾಹಿತಿ ನೀಡಿ ದಾಳಿ ನಡೆಸಲು ಕಾರಣವಾಗಿದ್ದ. ಈ ಬಗ್ಗೆ ನ್ಯಾಯಾಲಯದಲ್ಲಿ ವಿಚಾರಣೆ ವೇಳೆ ಸುಳ್ಳು ಸಾ ನುಡಿದಿದ್ದು, ಆರೋಪಿತರು ಖುಲಾಸೆಯಾಗಿದ್ದರು. ಆದೇಶ ಪ್ರಶ್ನಿಸಿ ಲೋಕಾಯುಕ್ತರು ಧಾರವಾಡ ಹೈಕೋರ್ಟ್​ಗೆ ಮೇಲ್ಮನವಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅಪರಾಧಿಗಳಿಗೆ ಶಿೆ ವಿಧಿಸಿದೆ.

ಜಿಲ್ಲಾ ನ್ಯಾಯಾಲಯದಲ್ಲಿ ಸುಳ್ಳು ಸಾ ನುಡಿದಿದ್ದ ಚಿದಾನಂದಯ್ಯ ವಿರುದ್ಧ ಕ್ರಮಕ್ಕೆ ಸೂಚಿಸಿದೆ. ಈ ಬಗ್ಗೆ ದಾಖಲಾದ ದೂರು ಆಧರಿಸಿ ವಿಚಾರಣೆ ನಡೆಸಿದ ನ್ಯಾಯಾಲಯ ಚಿದಾನಂದಯ್ಯ ಸುಳ್ಳು ಸಾ ನುಡಿದಿದ್ದು ದೃಢಪಟ್ಟ ಹಿನ್ನೆಲೆಯಲ್ಲಿ 3 ವರ್ಷ ಸೆರೆವಾಸ ಮತ್ತು 10 ಸಾವಿರ ರೂ. ದಂಡ ವಿಧಿಸಿ ಆದೇಶಿಸಿದೆ. ಸರ್ಕಾರದ ಪರವಾಗಿ ಹಿರಿಯ ಸಹಾಯಕ ಸರ್ಕಾರಿ ಅಭಿಯೋಜಕ ವಸಂತ ವಾದ ಮಂಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net