ಹತ್ತಿ ಬೆಳೆಯಲ್ಲಿ ಕೀಟ ನಿರ್ವಹಣೆಗೆ ಸಲಹೆ

Published on

ಕೊಪ್ಪಳ: ಹತ್ತಿ ಬೆಳೆಯಲ್ಲಿ ಮಿರಿಡ್​ ತಿಗಣೆ, ಥ್ರೀಪ್ಸ್​, ಹಿಟ್ಟು ತಿಗಣೆ, ಹಸಿರು ಜಿಗಿಹುಳು, ಬಿಳಿನೊಣ, ಗುಲಾಬಿ ಕಾಯಿಕೊರಕ ನಿರ್ವಹಣೆ ಕುರಿತು ಕೃಷಿ ಇಲಾಖೆ ರೈತರಿಗೆ ಸಲಹೆ ನೀಡಿದೆ.

ಆಳಕ್ಕೆ ಉಳುಮೆ ಮಾಡಿ. ಕಟಾವು ಮಗಿದ ಮೇಲೆ ಗಿಡಗಳನ್ನು ಸಂಪೂರ್ಣ ಕಿತ್ತು ಪುಡಿ ಮಾಡಿ ಮಣ್ಣಿಗೆ ಸೇರಿಸಿ. ರೋಗ ಪೀಡಿತ ಕಾಯಿ ಕಿತ್ತು ನಾಶಪಡಿಸಿ. ಆಶ್ರಯ ಕಳೆಗಳಾದ ಅಬುಟಿಲಾನ್​, ಪಾರ್ಥೆನಿಯಮ್​, ವಿಭೂತಿ ಗಿಡ ಮತ್ತು ಇತರ ಕಳೆಗಳನ್ನು ಕಿತ್ತು ನಾಶಪಡಿಸಬೇಕು. ಹತ್ತಿ ಬೆಳೆ ಸುತ್ತಲು ನಾಲ್ಕು ಸಾಲು ಸಜ್ಜೆ ಬೆಳೆಯುವುದರಿಂದ ಡ್ರಿಪ್ಸ್​ ನುಸಿ ಮತ್ತು ಹಿಟ್ಟು ತಿಗಣೆ ಕೀಟ ಬಾಧೆ ನಿಯಂತ್ರಿಸಬಹುದು. ಆಯಾ ಪ್ರದೇಶಕ್ಕೆ ಶಿಾರಸ್ಸು ಮಾಡಿದ ಬಿಟಿ ಹತ್ತಿ ಶಕ್ತಿಮಾನ್​ ತಳಿ ಉಯೋಗಿಸಿ.

ಬಿತ್ತನೆ ಪೂರ್ವದಲ್ಲಿ ಪ್ರತಿ ಕೆ.ಜಿ. ಬೀಜಕ್ಕೆ 15 ಮಿ.ಲೀ.ಇಮಿಡಾಕ್ಲೋಪ್ರಿಡ್​ 60 ಎಫ್​.ಎಸ್​. ಬಳಸಿ ಬೀಜೋಪಚಾರ ಮಾಡಿ. ಆಕರ್ಷಕ ಬೆಳೆಯಾಗಿ ಬೆಂಡೆ, ಹಳದಿ ಚೆಂಡು ಹೂವು ಮತ್ತು ತೊಗರಿ ಬೆಳೆ ಬೆಳೆಯಿರಿ. ರಸ ಹೀರುವ ಕೀಟಗಳ ನಿಯಂತ್ರಣಕ್ಕೆ ಪ್ರತಿ ಎಕರೆಗೆ 10 ರಂತೆ ಹಳದಿ ಬಣ್ಣದ ಅಂಟಿನ ಬಲೆ ಬೆಳೆಯ ಒಂದು ಅಡಿ ಎತ್ತರಕ್ಕೆ ನೆಡಬೇಕು. ಪ್ರತಿ ಹೆಕ್ಟೇರ್​ಗೆ 5ರಂತೆ ಲಿಂಗಾರ್ಷಕ ಬಲೆ ಬಳಸಿ. ಕೀಟಗಳ ಹತೋಟಿಗೆ ಇಲಾಖೆ ಶಿಾರಸ್ಸು ಮಾಡಿದ ಕೀಟನಾಶಕ ಬಳಕೆ ಮಾಡಬೇಕು. ಹೆಚ್ಚಿನ ಮಾಹಿತಿಗೆ ರೈತ ಸಂಪರ್ಕ ಕೇಂದ್ರ, ತಾಲೂಕು ಸಹಾಯಕ ಕೃಷಿ ನಿರ್ದೇಶಕರು, ಕೃಷಿ ವಿಜ್ಞಾನಿಗಳನ್ನು ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net