ಕೊಪ್ಪಳ: ಹೊಸ ಬಡಾವಣೆಗೆ ಉತಾರ ವಿತರಣೆಗೆ ಲಂಚ ಪಡೆದಿದ್ದ ಅಧಿಕಾರಿ ವಿರುದ್ಧ ಅಪರಾಧ ಸಾಬೀತಾಗಿದ್ದು, 8 ವರ್ಷ ಜೈಲು ಶಿೆ ಜತೆಗೆ 80 ಸಾವಿರ ರೂ. ದಂಡ ವಿಧಿಸಿ ಗಂಗಾವತಿಯ 1ನೇ ಹೆಚ್ಚುವರಿ ಜಿಲ್ಲಾ ಸತ್ರ ಮತ್ತು ವಿಶೇಷ ನ್ಯಾಯಾಲಯ ಆದೇಶಿಸಿದೆ.
ಸದ್ಯ ನಿವೃತ್ತಿಯಾಗಿರುವ ಗಂಗಾವತಿ ತಾಲೂಕು ಬಸಾಪಟ್ಟಣ ಗ್ರಾಪಂನ ಪ್ರಭಾರ ಪಿಡಿಒ ಆಗಿದ್ದ ದಿವಾಕರ ಶಾಸ್ತ್ರಿ ಶಿೆಗೆ ಗುರಿಯಾದವರು.
2013ರಲ್ಲಿ ಎಸ್.ಲಿಂಗಪ್ಪ ಎಂಬುವರು ಗಂಗಾವತಿ ತಾಲೂಕಿನ ಬಸಾಪಟ್ಟಣ ಗ್ರಾಮದ ತಮ್ಮ 1 ಎಕರೆ ಜಮೀನನಲ್ಲಿ ನಿವೇಶನ ರಚಿಸಿದ್ದಾರೆ. ಗ್ರಾಪಂನಿಂದ ಆಸ್ತಿ ಸಂಖ್ಯೆ ನೀಡಿ ಉತಾರ ಮಾಡಿಕೊಡಲು ಅರ್ಜಿ ಸಲ್ಲಿಸಿದ್ದರು. ಕೆಲಸ ಮಾಡಲು 50 ಸಾವಿರ ರೂ. ಲಂಚ ನೀಡುವಂತೆ ಪ್ರಭಾರ ಪಿಡಿಒ ಆಗಿದ್ದ ದಿವಾಕರ ಶಾಸ್ತ್ರಿ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಲಿಂಗಪ್ಪ ಲೋಕಾಯುಕ್ತರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು. 2013ರ ೆ.21ರಂದು ಗಂಗಾವತಿ ತಾಲೂಕಿನ ಹೊಸಳ್ಳಿ ಗ್ರಾಮದಲ್ಲಿ ಪಿಡಿಒ ಲಂಚ ಪಡೆಯುವಾಗ ದಾಳಿ ನಡೆಸಿ ವಶಕ್ಕೆ ಪಡೆದಿದ್ದರು. ಲೋಕಾಯುಕ್ತ ಪಿಐ ವೆಂಕಟೇಶ ಮುರನಾಳ ಪ್ರಕರಣದ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದಾರೆ.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಸದಾನಂದಪ್ಪ ನಾಗಪ್ಪ ನಾಯ್ಕ ಅವರು ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಪಿಡಿಒ ಅಪರಾಧಿಯೆಂದು ಘೋಷಿಸಿದ್ದಾರೆ. ಕಲಂ 7 ಲಂಚ ಪ್ರತಿ ಬಂಧಕ ಕಾಯ್ದೆ 1988 ರ ಆಪಾದನೆಗೆ 3 ವರ್ಷ ಸಾದಾ ಜೈಲು ಶಿೆ, 30 ಸಾವಿರ ರೂ. ದಂಡ ಹಾಗೂ ಕಾಯ್ದೆ 1988 ರಲ್ಲಿನ ಆಪಾದನೆಗೆ 5 ವರ್ಷ ಸಾದಾ ಕಾರಾಗೃಹ ವಾಸ ಮತ್ತು 50 ಸಾವಿರ ರೂ. ದಂಡ ವಿಧಿಸಿದ್ದಾರೆ. ದಂಡ ಕಟ್ಟದಿದ್ದಲ್ಲಿ ಹೆಚ್ಚುವರಿ 6 ತಿಂಗಳು ಸೆರೆವಾಸ ವಿಧಿಸಿ ಏ.7ರಂದು ಆದೇಶ ನೀಡಿದ್ದಾರೆ. ಲೋಕಾಯುಕ್ತ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ನಾರಾಯಣ ಡಿ. ವಾದ ಮಂಡಿಸಿದ್ದಾರೆಂದು ಕೊಪ್ಪಳ ಲೊಕಾಯಕ್ತ ಡಿಎಸ್ಪಿ ತಿಳಿಸಿದ್ದಾರೆ.