

ಕೊಪ್ಪಳ: ನಗರದ ಶ್ರೀ ಗವಿಸಿದ್ದೇಶ್ವರ ಅರ್ಬನ್ ಸಹಕಾರಿ ಬ್ಯಾಂಕ್ ಹಾಲಿ ನಿರ್ದೇಶಕ, ಮಾಜಿ ಅಧ್ಯಕ್ಷ ಬಸವರಾಜ ಬಿ. ಶಹಾಪೂರಗೆ ಪ್ರಸಕ್ತ ಸಾಲಿನ ಸಹಕಾರ ರತ್ನ ಪ್ರಶಸ್ತಿ ಲಭಿಸಿದೆ.
ಶ್ರೀ ಗವಿಸಿದ್ದೇಶ್ವರ ಅರ್ಬನ್ ಸಹಕಾರಿ ಬ್ಯಾಂಕ್‌ಗೆ 1997 ಆಗಷ್ಟ್ 1ರಂದು ಮೊದಲ ಬಾರಿ ನಿರ್ದೇಶಕರಾಗಿ ಆಯ್ಕೆಯಾದ ಬಸವರಾಜ ಶಹಾಪೂರ, ಒಟ್ಟು 7 ಬಾರಿ ನಿರ್ದೇಶಕರಾಗಿದ್ದಾರೆ. ಹಾಗೂ 2014-15ರಲ್ಲಿ ಅಧ್ಯಕ್ಷರಾಗಿ, 1999-2000 ಮತ್ತು 2002-04ರಲ್ಲಿ ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ.
ಪರಿಶಿಷ್ಟ ಪಂಗಡ ಸ್ಥಾನಕ್ಕೆ ಪ್ರತಿನಿಧಿಸುವ ಇವರು, ಕೊಪ್ಪಳ ನಗರದ ಮಿಟ್ಟಿಕೇರಿ ಓಣಿ ನಿವಾಸಿ. ರಂಗಭೂಮಿ ಕಲಾವಿದರೂ ಆಗಿರುವ ಇವರು, ಕಲಬುರ್ಗಿ ವಿಭಾಗೀಯ ಮಟ್ಟದ ಪ್ರಶಸ್ತಿಯನ್ನು ಪಡೆದಿದ್ದಾರೆ.