ಸೇವಾ ನೂನ್ಯತೆ ಎಸಗಿದ ಚಿಮಣಿ ಕಂಪನಿಗೆ ದಂಡ

Published on

ಕೊಪ್ಪಳ: ಆನ್​ಲೈನ್​ನಲ್ಲಿ ಖರೀದಿಸಿದ ಅಡುಗೆ ಚಿಮಣಿ ಅಳವಡಿಸದೇ ಹಾಗೂ ಚಿಮಣಿ ಮೊತ್ತ ಮರುಪಾವತಿ ಮಾಡದೆ ಸೇವಾ ನೂನ್ಯತೆ ಎಸಗಿದ ಕಂಪನಿಗೆ ದಂಡ ವಿಧಿಸಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶಿಸಿದೆ.

ಕುಕನೂರಿನ ಪ್ರಗತಿ ಬಡಾವಣೆ ನಿವಾಸಿ ಮೇಘಾ ದೇಸಾಯಿ ಎಂಬುವರು ಎಲಿಕಾ ಪಿಬಿ ವಿಲ್ರ್​ೂ ಕಿಚನ್​ ಅಪ್ಲಿಕೇಷನ್​ ಪೆ.ಲಿ. ಕಂಪನಿಯಿಂದ ಫ್ಲಿಪ್​ ಕಾರ್ಟ್​ ಮೂಲಕ ಅಡುಗೆ ಮನೆ ಚಿಮಣಿ ಆನ್​ಲೈನ್​ನಲ್ಲಿ ಖರೀದಿಸಿದ್ದಾರೆ. 14,799ರೂ. ಪಾವತಿಸಿದ್ದಾರೆ. ಚಿಮಣಿ ಬಂದ ಬಳಿಕ ಹುಬ್ಬಳ್ಳಿಯ ಡಾನ್​ಟೆಕ್​ ಎಲೆಕ್ಟ್ರಾನಿಕ್​ ಪೆ.ಲಿ.ಕಂಪನಿ ಚಿಮಣಿ ಅಳವಡಿಸಿಕೊಡುವುದಾಗಿ ತಿಳಿಸಿದೆ. ಆದರೆ, ಅವಧಿಯಲ್ಲಿ ಅಳವಡಿಕೆ ಮಾಡದೆ ಸತಾಯಿಸಿದೆ. ಇದರಿಂದ ನೊಂದ ಮೇಘಾ ದೇಸಾಯಿ ಚಿಮಣಿ ವಾಪಸ್​ ಮಾಡಿದ್ದಾರೆ. ಈ ಬಗ್ಗೆ ಗ್ರಾಹಕರ ಆಯೋಗದಲ್ಲಿ ದೂರು ದಾಖಲಿಸಿದ್ದಾರೆ.

ವಿಚಾರಣೆ ನಡೆಸಿದ ಆಯೋಗ ಜಿಲ್ಲಾಧ್ಯೆ ಜೆ.ಇ.ಸೌಭಾಗ್ಯಲಕ್ಷಿ$್ಮ ಹಾಗೂ ಸದಸ್ಯ ರಾಜು ಎನ್​.ಮೇತ್ರಿ ಚಿಮಣಿ ಪೂರೈಸಿದ ಎಲಿಕಾ ಪಿಬಿ ವಿಲ್ರ್​ೂ ಕಿಚನ್​ ಅಪ್ಲಿಕೇಷನ್​ ಪೆ.ಲಿ. ಚಿಮಣಿ ಮೊತ್ತ ಮರು ಪಾವತಿಸಿಲ್ಲ. ಹುಬ್ಬಳ್ಳಿಯ ಡಾನ್​ಟೆಕ್​ ಎಲೆಕ್ಟ್ರಾನಿಕ್​ ಪೆ.ಲಿ.ಕಂಪನಿ ಅಳವಡಿಸದೇ ಸೇವಾ ನೂನ್ಯತೆ ಎಸಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಸೇವಾ ನೂನ್ಯತೆ ಎಸಗಿದ ಕಂಪನಿಗಳು ಚಿಮಣಿ ಮೊತ್ತ 14,799ರೂ.ಗಳನ್ನು ದೂರು ನೀಡಿದ ದಿನಾಂಕದಿಂದ ಪಾವತಿಯಾಗುವವರೆಗೆ ವಾರ್ಷಿಕ ಶೇ.6ರಷ್ಟು ಬಡ್ಡಿದರದೊಂದಿಗೆ ಪಾವತಿಸಲು ಸೂಚಿಸಿದೆ. ಮಾನಸಿಕ ಯಾತನೆಗೆ 10 ಸಾವಿರ ರೂ. ಮತ್ತು ದೂರಿನ ಖರ್ಚು 5 ಸಾವಿರ ರೂ. 45 ದಿನದೊಳಗೆ ನೀಡುವಂತೆ ಆದೇಶಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net