ವಿಮೆ ಪರಿಹಾರ ಪಾವತಿಗೆ ಸೂಚನೆ

Published on

ಕೊಪ್ಪಳ: ಅಪಘಾತ ವಿಮೆ ಪರಿಹಾರ ವಿತರಿಸದೆ ಸೇವಾ ನೂನ್ಯತೆ ಎಸಗಿದ ಹುಬ್ಬಳ್ಳಿಯ ನ್ಯೂ ಇಂಡಿಯಾ ಅಶ್ಯೂರನ್ಸ್​ ಕಂಪನಿ ಲಿ.ಗೆ ಬಡ್ಡಿ ಸಮೇತ ನಷ್ಟ ಪರಿಹಾರ ಮೊತ್ತ ಪಾವತಿಗೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶಿಸಿದೆ.

ಮೊಹಮ್ಮದ ಅಲಿ ಎಂಬುವವರು ನರೇಂದ್ರರಾಜು ಜೆ. ಅವರಿಂದ ಕ್ರೇಟಾ ವಾಹನ ಖರೀದಿಸಿದ್ದಾರೆ. 2024ರ ಸೆ.30ರಂದು ಕಾರಿಗೆ ಲಾರಿ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಈ ಸಂಬಂಧ ಕೊಪ್ಪಳ ನಗರಠಾಣೆಯಲ್ಲಿ ಲಾರಿ ಚಾಲಕನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಅಪಘಾತ ಬಗ್ಗೆ ವಿಮಾ ಕಂಪನಿಗೆ ಮಾಹಿತಿ ನೀಡಿದ್ದು, ಪರಿಶೀಲನೆ ಬಳಿಕ ದುರಸ್ಥಿ ಮಾಡಿಸಲು ಕಂಪನಿ ಶಿಾರಸ್ಸು ಮಾಡಿದೆ. ಸರ್ವೇಯರ್​ ಮಾಹಿತಿಯಂತೆ ಹೊಸಪೇಟೆಯ ಅಂಕಿತಾ ಆಟೋಮೊಬೈಲ್ಸ್​ ಪೆ.ಲಿ.ನಲ್ಲಿ ವಾಹನ ದುರಸ್ಥಿ ಮಾಡಿಸಲಾಗಿದೆ. 1,79,929ರೂ. ಬಿಲ್​ ಬಂದಿದ್ದು ಮೊಹಮ್ಮದ ಅಲಿ ಕ್ಲೇಮಿಗೆ ಅರ್ಜಿ ಸಲ್ಲಿಸಿದ್ದಾರೆ.

ಆದರೆ, ವಾಹನ ವರ್ಗಾವಣೆಗೊಂಡು 14 ದಿನದೊಳಗೆ ವಿಮೆ ವರ್ಗಾವಣೆಗೆ ಅರ್ಜಿ ಸಲ್ಲಿಸಬೇಕು. ಆದರೆ, ಸಲ್ಲಿದ ಕಾರಣ ಪರಿಹಾರ ನೀಡಲು ಬರುವುದಿಲ್ಲವೆಂದು ಕಂಪನಿ ನಿರಾಕರಿಸಿದೆ. ಇದನ್ನು ಪ್ರಶ್ನಿಸಿ ಮೊಹಮ್ಮದ ಅಲಿ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದಾರೆ. ವಿಚಾರಣೆ ನಡೆಸಿದ ಆಯೋಗ ಜಿಲ್ಲಾಧ್ಯೆ ಜೆ.ಇ.ಸೌಭಾಗ್ಯಲಕ್ಷಿ$್ಮ, ಸದಸ್ಯ ರಾಜು ಎನ್​.ಮೇತ್ರಿ ಅಪಘಾತ ವೇಳೆ ವಿಮಾ ಪಾಲಿಸಿ ಚಾಲ್ತಿಯಲ್ಲಿದೆ. ಹೀಗಾಗಿ ಅಪಘಾತ ಪರಿಹಾರ ಮೊತ್ತ ಪಾವತಿಸಬೇಕು. ಸೇವಾನೂನ್ಯತೆ ಆಗಿದ್ದು, ದೂರುದಾರನಿಗೆ 1,79,929ರೂ.ಗಳನ್ನು ಅಪಘಾತ ನಡೆದ ದಿನದಿಂದ ಶೇ.6ರ ಬಡ್ಡಿದರದಲ್ಲಿ ಪಾವತಿಸಬೇಕು. ಮಾನಸಿಕ ಹಿಂಸೆಗೆ 10 ಸಾವಿರ ರೂ., ದೂರಿನ ಖರ್ಚು 5 ಸಾವಿರ ರೂ. 45 ದಿನದಲ್ಲಿ ನೀಡುವಂತೆ ಆದೇಶಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net