ಮೋಸಹೋದಲ್ಲಿ ಆಯೋಗಕ್ಕೆ ದೂರು ನೀಡಿ

district koppal consumer day celebration in koppal judge mahantesh daragada
Published on

ಕೊಪ್ಪಳ: ಗ್ರಾಹಕರು ಜಾಹೀರಾತಿನಲ್ಲಿ ಬರುವ ಮಾಹಿತಿ ನಂಬಿ ಮೋಸ ಹೋದಲ್ಲಿ ದಾಖಲೆಗಳೊಂದಿಗೆ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿ ನ್ಯಾಯ ಪಡೆಯಬಹುದು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಮಹಾಂತೇಶ ಎಸ್.ದರಗದ ಸಲಹೆ ನೀಡಿದರು.

ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ ಹಮ್ಮಿಕೊಂಡಿದ್ದ ವಿಶ್ವ ಗ್ರಾಹಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಅಂಗಡಿಕಾರರು ವಸ್ತುವಿನ ಗರಿಷ್ಠ ಬೆಲೆಗಿಂತ ಅಧಿಕ ಬೆಲೆಗೆ ಮಾರಾಟ ಮಾಡುವಂತಿಲ್ಲ. ಸಕರು, ಸೇವೆಯಲ್ಲಿ ಲೋಪ ಕಂಡುಬಂದಲ್ಲಿ ಆಯೋಗ ಗ್ರಾಹಕರ ಪರ ನೆರವಿಗೆ ಬರಲಿದೆ. ವಸ್ತು ಕೊಳ್ಳುವ ಮೊದಲು ಗುಣಮಟ್ಟ, ಬೆಲೆ, ದಿನಾಂಕ ಇತರ ವಿಷಯ ಅರಿತು ಖರೀದಿಸಿ. ಆನ್ಲೈನ್ನಲ್ಲಿ ಇಂದು ಹೆಚ್ಚಾಗಿ ಜನ ಖರೀದಿ ಮಾಡುತ್ತಾರೆ. ಅದರಲ್ಲೂ ಮೋಸವಾದಲ್ಲಿ ಆಯೋಗದಕ್ಕೆ ದೂರು ನೀಡಬಹುದು ಎಂದರು.

ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಅಧ್ಯೆ ಸೌಭಾಗ್ಯಲಕ್ಷಿ$್ಮ ಮಾತನಾಡಿ, ಗ್ರಾಹಕರು ಮೊಬೈಲ್, ಟಿವಿ ಹಾಗೂ ಇನ್ನಿತರ ಎಲೆಕ್ಟ್ರಾನಿಕ್ ವಸ್ತುಗಳ ಖರೀದಿಯಲ್ಲಿ ಅನ್ಯಾಯವಾದರೆ ದೂರು ನೀಡಬಹುದು. ಅಗತ್ಯ ದಾಖಲೆಯೊಂದಿಗೆ ಸಲ್ಲಿಸಿ. ಗ್ರಾಹಕರು ಬೇಕಾದ ವಸ್ತು ಪಡೆಯುವ, ಜೀವ, ಆಸ್ತಿಹಾನಿ ಮಾಡುವ ಸಕರು ಮಾರಾಟ ವಿರುದ್ಧ ರಕ್ಷಣೆ ಪಡೆಯುವ, ಕೊಳ್ಳುವ ವಸ್ತುವಿನ ಗುಣಮಟ್ಟ, ಬೆಲೆ, ಅವಧಿ, ಗುಣಮಟ್ಟ ತಿಳಿಯುವ ಹಕ್ಕು ಹೊಂದಿದ್ದಾನೆಂದು ಮಾಹಿತಿ ನೀಡಿದರು.

ಆಹಾರ ಇಲಾಖೆ ಉಪನಿರ್ದೇಶಕ ಸೋಮಶೇಖರ ಬಿರಾದಾರ ಮಾತನಾಡಿ, ಈ ಬಾರಿ ಸುಸ್ಥಿರ ಜೀವನ ಶೈಲಿಗೆ ಒಂದು ಸರಳ ಪರಿವರ್ತನೆ ಎಂಬ ಘೋಷವಾಕ್ಯದಡಿ ಕಾರ್ಯಕ್ರಮ ಆಯೋಜಿಸಲಾಗಿದೆ. ಮಾರುಕಟ್ಟೆ ಇರುವುದೇ ಗ್ರಾಹಕರಿಂದ ಎಂದರು.

ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಸದಸ್ಯ ರಾಜು ಎನ್. ಮೇತ್ರಿ, ವಾಣಿಜ್ಯ ವಿಭಾಗ ಮುಖ್ಯಸ್ಥೆ ಡಾ.ವರುಣಿ, ಜಿಲ್ಲಾ ಕಾನೂನು ಮಾಪನ ಶಾಸ್ತ್ರ ಇಲಾಖೆ ಸಹಾಯಕ ನಿಯಂತ್ರಕ ಶಶಿಕಾಂತ ರಜಪೂತ, ಆಹಾರ ಇಲಾಖೆ ಸಹಾಯಕ ನಿರ್ದೇಶಕ ದೇವರಾಜ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net