ನಷ್ಟ ಪರಿಹಾರಕ್ಕೆ ವಿಮೆ ಕಂಪನಿಗೆ ಸೂಚನೆ

Published on

ಕೊಪ್ಪಳ: ಅಪಾಕ್ಕೀಡಾದ ವಾಹನಕ್ಕೆ ನಷ್ಟ ಪರಿಹಾರ ನೀಡುವಂತೆ ಮುಂಬೈ ಎಚ್​ಡಿಎ್​ಸಿ ಇಆರ್​ಜಿಒ ಜನರಲ್​ ಇನ್ಸೂರೆನ್ಸ್​ ಕಂಪನಿಗೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶಿಸಿದೆ.

ಗಂಗಾವತಿಯ ಮುರಾರಿ ನಗರದ ಸಲ್ಮಾನ್​ಖಾನ್​ ಎಂಬುವವರು ತಮ್ಮ ಮಿನಿಲಾರಿಗೆ ಮುಂಬೈ ಎಚ್​ಡಿಎ್​ಸಿ ಇಆರ್​ಜಿಒ ಜನರಲ್​ ಇನ್ಸೂರೆನ್ಸ್​ ಕಂಪನಿಯಲ್ಲಿ ವಿಮೆ ಮಾಡಿಸಿದ್ದಾರೆ. ವಿಮೆ ಅವಧಿ 2023 ಆಗಸ್ಟ್​ 25ರಿಂದ 2024ರ ಆಗಸ್ಟ್​ 24ವರೆಗಿದೆ. ಆದರೆ, 2023ರ ಡಿಸೆಂಬರ್​ 26ರಂದು ಭತ್ತದ ಹುಲ್ಲು ತುಂಬಿಕೊಂಡು ಹೋಗುವಾಗ ಎಮ್ಮಿಗನೂರು ಬಳಿ ವಿದ್ಯತ್​ ತಂತಿ ತಗುಲಿ ಬೆಂಕಿ ಹತ್ತಿ ವಾಹನ ಸುಟ್ಟು ಭಸ್ಮವಾಗಿದೆ. ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಪೊಲೀಸ್​ ಠಾಣೆಯಲ್ಲಿ ಪ್ರಕರಣವೂ ದಾಖಲಾಗಿದೆ. ಸುಟ್ಟ ವಾಹನಕ್ಕೆ 19 ಲಕ್ಷ ರೂ. ನಷ್ಟ ಪರಿಹಾರ ಕೋರಿ ವಿಮೆ ಕಂಪನಿಗೆ ಅರ್ಜಿ ಸಲ್ಲಿಸಿದ್ದಾರೆ.

ಕಂಪನಿ ಅರ್ಜಿ ತಿರಸ್ಕರಿಸಿದ್ದು, ವಿಮೆ ಇನ್ನೊಬ್ಬರ ಹೆಸರಿನಲ್ಲಿದ್ದು ಸಲ್ಮಾನ್​ಖಾನ್​ಗೆ ವರ್ಗಾವಣೆಯಾಗಿಲ್ಲವೆಂದು ತಿಳಿಸಿದೆ. ಇದನ್ನು ಪ್ರಶ್ನಿಸಿ ಸಲ್ಮಾನ್​ಖಾನ್​ ಗ್ರಾಹಕರ ಆಯೋಗದ ಮೊರೆ ಹೋಗಿದ್ದಾರೆ. ವಾದ&ಪ್ರತಿವಾದ ಆಲಿಸಿದ ಆಯೋಗ ಜಿಲ್ಲಾಧ್ಯೆ ಜಿ.ಇ.ಸೌಭಾಗ್ಯಲಕ್ಷಿ$್ಮ, ಸದಸ್ಯ ರಾಜು ಎನ್​.ಮೇತ್ರಿ ವಿಮಾ ಕಂಪನಿ ನಷ್ಟ ಪರಿಹಾರ ನೀಡುವಂತೆ ಆದೇಶಿಸಿದ್ದಾರೆ. 18.70 ಲಕ್ಷರೂ. ಪರಿಹಾರಕ್ಕೆ ವಾರ್ಷಿಕ ಶೇ.6ರಷ್ಟು ಬಡ್ಡಿದರ ವಿಧಿಸಿ ದೂರಿನ ದಿನಾಂಕದಿಂದ ಪಾವತಿಸಲು ನಿರ್ದೇಶಿಸಿದ್ದಾರೆ. ಅರ್ಜಿದಾರನ ಮಾನಸಿಕ ಯಾತನೆಗೆ 10 ಸಾವಿರ ರೂ., ಅರ್ಜಿ ಶುಲ್ಕ 5 ಸಾವಿರ ರೂ. 45 ದಿನದೊಳಗೆ ನೀಡಲು ತೀರ್ಪು ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net