ಪರಿಹಾರ ಪಾವತಿಗೆ ಆಯೋಗ ಸೂಚನೆ

Published on

ಕೊಪ್ಪಳ: ವಾಸದ ಮನೆ ಹಾಗೂ ಅಂಗಡಿಗೆ ವಿಮೆ ಮಾಡಿಸಿದ್ದರೂ ಪರಿಹಾರ ನೀಡದ ಕಂಪನಿಗೆ ಗ್ರಾಹಕರಿಗೆ 4.38 ಲಕ್ಷ ರೂ. ಪಾವತಿಸುವಂತೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶಿಸಿದೆ.

ಗಂಗಾವತಿಯ ಪೂಕರಾಜ್​ ಜೈನ್​ ಯುನೈಟೆಡ್​ ಇಂಡಿಯಾ ಕಂಪನಿ ಲಿಮಿಟೆಡ್​ನಲ್ಲಿ ನಿವಾಸಕ್ಕೆ 2008ರಿಂದ 2028ವರೆಗೆ 10.95 ಲಕ್ಷ ರೂ.ಗೆ ವಿಮೆ ಮಾಡಿಸಿದ್ದಾರೆ. ಪಾಲಸಿಯಲ್ಲಿ ಅಗ್ನಿ ಅವಡ ಹಾಗೂ ಇನ್ನಿತರ ವಿಶೇಷ ಅಪಾಯಗಳ ಅಡಿ ಪರಿಹಾರ ಪಡೆವ ಅಂಶ ಸೇರಿಸಲಾಗಿದೆ. 2023ರ ಏಪ್ರೀಲ್​ 5ರಂದು ಇವರ ಮನೆ ಪಕ್ಕದ ಕೋಲ್ಡ್​ ಸ್ಟೋರೇಜ್​ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಪುಕರಾಜ್​ ಜೈನ್​ ಅಂಗಡಿ ಹಾಗೂ ಮನೆಯ ಕಿಟಕಿ, ಬಾಗಿಲು, ಗೃಹ ಬಳಕೆ ಸಾಮಗ್ರಿಗಳು ಬೆಂಕಿಗೆ ಆಹುತಿಯಾಗಿವೆ.

14.50ಲಕ್ಷ ರೂ.ನಷ್ಟ ಪರಿಹಾರ ಕೋರಿ ವಿಮಾ ಕಂಪನಿಗೆ ಅರ್ಜಿ ಸಲ್ಲಿಸಿದ್ದಾರೆ. ಕಂಪನಿ 34,125 ರೂ. ಪರಿಹಾರ ನೀಡಿದೆ. ಇದನ್ನು ಪ್ರಶ್ನಿಸಿ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದಾರೆ. ಪ್ರಕರಣದ ವಿಚಾರಣೆ ನಡೆಸಿದ ಆಯೋಗ ಜಿಲ್ಲಾಧ್ಯೆ ಜಿ.ಇ.ಸೌಭಾಗ್ಯಲಕ್ಷಿ$್ಮ, ಸದಸ್ಯ ರಾಜು.ಎನ್​.ಮೇತ್ರಿ ಕಂಪನಿ ಸೇವಾ ನೂನ್ಯತೆ ಎಸಗಿದೆ ಎಂದು ತಿಳಿಸಿದ್ದಾರೆ. ದೂರುದಾರನಿಗೆ 4.38 ಲಕ್ಷ ರೂ. ಪರಿಹಾರ ನೀಡಬೇಕು. ದೂರು ಸಲ್ಲಿಸಿದ ದಿನಾಂಕದಿಂದ ಆದೇಶವಾದ ದಿನದವರೆಗೆ ಶೇ.6ರಷ್ಟು ಬಡ್ಡಿದರ ನೀಡಬೇಕು. ಮಾನಸಿಕ ಯಾತನೆಗೆ 10 ಸಾವಿರ ರೂ. ದೂರಿನ ಖರ್ಚು 5 ಸಾವಿರ ರೂ. 45 ದಿನದೊಳಗೆ ಪಾವತಿಸಲು ಆದೇಶಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net