ಕೊಪ್ಪಳ: ರಾಜ್ಯ ಸರ್ಕಾರ ನ್ಯಾಯ ಬೆಲೆ ಅಂಗಡಿ ಮಾಲೀಕರನ್ನು ಆರ್ಥಿಕವಾಗಿ ಸಬಲಗೊಳಿಸುವ ಕೆಲಸ ಮಾಡಲಿ ಎಂದು ರಾಜ್ಯ ಸರ್ಕಾರಿ ಪಡಿತರ ವಿತರಕರ ಸಂಘದ ಅಧ್ಯಕ್ಷ ಟಿ.ಕೃಷ್ಣಪ್ಪ ಒತ್ತಾಯಿಸಿದರು.
ಕೇಂದ್ರ ಸರ್ಕಾರ ಆಹಾರ ಭದ್ರತಾ ಕಾಯ್ದೆ ಅಡಿ ದೇಶದ 84 ಕೋಟಿ ಪಡಿತರ ಚೀಟಿದಾರರಿಗೆ ಉಚಿತ ಆಹಾರ ಧಾನ್ಯ ನೀಡುತ್ತಿದೆ.ಬೇರೆ ಬೇರೆ ರಾಜ್ಯಗಳಲ್ಲಿ ಒಂದೊಂದು ಮಾದರಿ ಕಮಿಷನ್ ನೀಡುತ್ತಾರೆ. ಏಕ ರೂಪ ಕಮಿಷನ್ ಜಾರಿ ಮಾಡಬೇಕು. ಪ್ರತಿ ಕ್ವಿಂಟಾಲ್ಗೆ 250ರೂ.ನೀಡಬೇಕು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
ದಿನ ಬಳಕೆ ವಸ್ತುಗಳ ಬೆಲೆ ಏರಿಕೆಯಾಗಿದೆ. ಭಾರತ್ ರೈಸ್, ಭಾರತ್ ಬೇಳೆ, ಭಾರತ್ ಚನ ಎಂಬ ಯೋಜನೆಗಳು ಜಾರಿಗೆ ತಂದಿದೆ. ಇದನ್ನು ನ್ಯಾಯಬೆಲೆ ಅಂಗಡಿ ಮೂಲಕ ವಿತರಣೆ ಮಾಡಿದರೆ ದರ ಏರಿಳಿತ ತಡೆಯಬಹುದು. ನ್ಯಾಯಬೆಲೆ ಅಂಗಡಿ ಮೂಲಕ ಸುಲಭವಾಗಿ ಜನರಿಗೆ ಸಿಗುವಂತೆ ಮಾಡಬಹುದು. ಪಡಿತರ ವಿತರಕರಿಗೆ 7 ವರ್ಷಗಳಿಂದ ಇ&ಕೆವೈಸಿ ಮಾಡಿದ ಹಣ ನೀಡಿಲ್ಲ. ಬಾಕಿ ಮೊತ್ತ ತ್ವರಿತವಾಗಿ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿದರು. ರಾಜ್ಯ ಕಾರ್ಯದರ್ಶಿ ಚನ್ನಕೇಶವಗೌಡ, ರಾಜ್ಯ ಸಮಿತಿ ಸದಸ್ಯರಾದ ಪ್ರಭು ಶೆಟ್ಟರ್, ದೇವರಾಜು ಇದ್ದರು.