ಕೊಪ್ಪಳದಲ್ಲಿ 16ರಂದು ನೀರು ಸರಬರಾಜಿನಲ್ಲಿ ವ್ಯತ್ಯಯ

koppal cmc water supply inconvenience may 16th date
CMC KOPPAL
Published on

ಕೊಪ್ಪಳ: ತಾಲೂಕಿನ ಮುನಿರಾಬಾದ್​ನಲ್ಲಿ ಗಾಳಿ ಮತ್ತು ಮಳೆಯಿಂದಾಗಿ ವಿದ್ಯುತ್​ ಕಂಬಗಳು ಬಿದ್ದು, ವಿದ್ಯುತ್​ ಸ್ಥಗಿತಗೊಂಡಿವೆ. ಇದರಿಂದ ಕೊಪ್ಪಳ ನಗರಕ್ಕೆ ನೀರು ಸರಬರಾಜು ಮಾಡಲು ತೊಂದರೆ ಉಂಟಾಗಿದೆ.

ಮುನಿರಾಬಾದ್​ನಿಂದ ಕೊಪ್ಪಳ ನಗರಕ್ಕೆ ಸಂಪರ್ಕವಿರುವ 600 ಎಂ.ಎಂ. ಪೈಪ್​ಲೈನ್​ ವಿವಿಧ ಸ್ಥಳಗಳಲ್ಲಿ ಲೀಕೇಜ್​ ಆಗಿದ್ದು, ಸಾಕಷ್ಟು ನೀರು ಪೋಲಾಗುತ್ತಿದೆ. ವಿದ್ಯುತ್​ ಕಂಬ ಹಾಗೂ ಪೈಪ್​ಲೈನ್​ ದುರಸ್ಥಿ ಮಾಡಬೇಕಿರುವ ಕಾರಣ ಮೇ 16ರಂದು ಕೊಪ್ಪಳ ನಗರದಕ್ಕೆ ನೀರು ಪೈರೈಕೆ ಮಾಡಲಾಗುವುದಿಲ್ಲ. ಸಾರ್ವಜನಿಕರು ಸಹಕರಿಸುವಂತೆ ನಗರಸಭೆ ಪೌರಾಯಕ್ತರು ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net