

ಕೊಪ್ಪಳ: ನಗರದ ಪ್ರಮುಖ ರಸ್ತೆಗಳು, ಕೂಡು ರಸ್ತೆಗಳಲ್ಲಿ ಕಸ ಹಾಕದಂತೆ ನಗರಸಭೆ ಸಿಬ್ಬಂದಿ ಗುರುವಾರ ಪ್ರಧಾನ ಅಂಚೆ ಕಚೇರಿ ಬಳಿ ರಂಗೋಲಿ ಬಿಡಿಸಿ ಜಾಗೃತಿ ಮೂಡಿಸಿದರು.
ನಗರದ ಪ್ರಮುಖ ಸ್ಥಳಗಳಲ್ಲಿ ಜನರು ಕಸ ಹಾಕುತ್ತಿದ್ದಾರೆ. ಸೂಚನಾ ಲಕ ಹಾಕಿದರೂ ಕ್ರಮ ಕೈಗೊಳ್ಳುತ್ತಿಲ್ಲ. ಹೀಗಾಗಿ ವಿನೂತನ ಕಾರ್ಯಕ್ಕೆ ನಗರಸಭೆ ಅಧಿಕಾರಿಗಳು ಮುಂದಾಗಿದ್ದಾರೆ. ಕಸ ಹಾಕುವ ಸ್ಥಗಳನ್ನು ಸ್ವಚ್ಛಗೊಳಿಸಿ ರಂಗೋಲಿ ಬಿಡಿಸಿ ಕಸ ಹಾಕದಂತೆ ಮನವಿ ಮಾಡಲಾಗುತ್ತಿದೆ. ಮನೆ, ಅಂಗಡಿಗಳಲ್ಲಿ ಸಂಗ್ರಹವಾಗುವ ಕಸವನ್ನು ಹಸಿ, ಒಣ, ನೈರ್ಮಲ್ಯ ತಾಜ್ಯ , ಎಲೆಕ್ಟ್ರಾನಿಕ್ ತಾಜ್ಯ, ಬಯೋಮೆಡಿಕಲ್ ತಾಜ್ಯವೆಂದು ವಿಂಗಡಿಸಬೇಕು ಎಂದು ಸಮುದಾಯ ಸಂಚಾಲಕರಾಗಿ ನೇಮಕಗೊಂಡ 11 ಮಹಿಳೆಯರು ಮನೆ ಮನೆಗೆ ತೆರಳಿ ಜಾಗೃತಿ ಮೂಡಿಸಿದರು.
ಕೊಪ್ಪಳ ನಗರ ಕಸ ಮುಕ್ತ, ಧೂಳು ಮುಕ್ತ ಮಾಡುವ ಸಂಕಲ್ಪದಿಂದ ಕಸ ಹಾಕುವ ಬ್ಲ್ಯಾಕ್ ಸ್ಪಾಟ್ ನಿಮೂರ್ಲನೆ, ಕಸ ವಿಂಗಡನೆ ಜಾಗೃತಿ ಕೈಗೊಳ್ಳಲಾಗಿದೆ. ನಗರಸಭೆ ಪೌರಾಯುಕ್ತ ವೆಂಕಟೇಶ್ ನಾಗನೂರ್, ಸದಸ್ಯರಾದ ಪರಶುರಾಮ ಮೇದಾರ್, ವ್ಯವಸ್ಥಾಪಕ ಮುನಿಸ್ವಾಮಿ, ಆರೋಗ್ಯ ನಿರೀಕ್ಷಕರಾದ ಲಾಲ್ ಸಾಬ್ ಮನಿಯಾರ್, ರಾಘವೇಂದ್ರ ಚೌವ್ಹಾಣ್, ವಿಶ್ವನಾಥ ಯಾದವ್, ಸಮುದಾಯ ಸಂಚಾಲಕರು, ಪೌರಕಾರ್ಮಿಕರು, ವಾಹನ ಚಾಲಕರು ಇದ್ದರು.