ಫಾರ್ಮ್ 3 ವಿತರಣೆ ಶಿಬಿರ

Published on

ಕೊಪ್ಪಳ: ನಗರಸಭೆ ವ್ಯಾಪ್ತಿಯಲ್ಲಿ ಇ&ಆಸ್ತಿ ತಂತ್ರಾಂಶ ಸರಳೀಕರಣ ದೃಷ್ಟಿಯಿಂದ ಸ್ಥಳದಲ್ಲೇ ಾರಂ 3 ವಿತರಣೆ ಶಿಬಿರ ಹಮ್ಮಿಕೊಂಡಿದ್ದ ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳುವಂತೆ ಪೌರಾಯುಕ್ತ ಗಣಪತಿ ಪಾಟೀಲ್​ ಮನವಿ ಮಾಡಿದ್ದಾರೆ.

ಆಸ್ತಿ ಕಣಜ ತಂತ್ರಾಂಶದಲ್ಲಿ ಲಭ್ಯ ದಾಖಲೆ ಪಡೆದು ಅದೇ ದಿನ ಅರ್ಹ ಆಸ್ತಿಗಳಿಗೆ ನಮೂನೆ 3 ವಿತರಿಸಲಾಗುವುದು. ವಾರ್ಡ್​ವಾರು ಶಿಬಿರ ನಡೆಯಲಿದ್ದು, ಸಾರ್ವಜನಿಕರು ತಮ್ಮ ಆಸ್ತಿ ದಾಖಲೆ ತಂದು ನಮೂನೆ 3 ಪಡೆದುಕೊಳ್ಳಬೇಕು. ನ.25ರಂದು 1ರಿಂದ 3ನೇ ವಾರ್ಡ್​ ಜನರಿಗೆ ಸಿರಸಪ್ಪಯ್ಯ ಮಠ ಹತ್ತಿರ, 26ರಂದು 4 ಮತ್ತು 12ನೇ ವಾರ್ಡ್​ ಸಾಲಾರಜಂಗ ರಸ್ತೆ ಜೆ.ಪಿ.ಮಾರುಕಟ್ಟೆ ಹತ್ತಿರ, 27ರಂದು 5ರಿಂದ 9ನೇ ವಾರ್ಡ್​ ಗಡಿಯಾರ ಕಂಬ ಬಳಿ ಹಿರೇ ಮಸೂತಿ, 10,11,13,14,15,16ನೇ ವಾರ್ಡ್​ ಕುಂಬಾರ ಓನಿಯ ಪ್ಯಾಟಿ ಈಶ್ವರ ದೇವಸ್ಥಾನ, 28ರಂದು 17ರಿಂದ 20ನೇ ವಾರ್ಡ್​ ಬಹಾರಪೇಟೆ ಶಾಲೆ ಹತ್ತಿರ, 30ರಂದು 21ರಿಂದ 23ನೇ ವಾರ್ಡ್​ ಗದಗ ರಸ್ತೆಯ ಮೈನಳ್ಳಿ ಗೌಡರ ಮನೆ ಹತ್ತಿರ, ಡಿ.2ರಂದು 24ರಿಂದ 26ನೇ ವಾರ್ಡ್​ ಕಿನ್ನಾಳ ರಸ್ತೆ ಐಬಿ ಹತ್ತಿರ, ಡಿ.3ರಂದು 27ರಿಂದ 29ನೇ ವಾರ್ಡ್​ ಬಸವೇಶ್ವರ ವೃತ್ತ, ಡಿ.4ರಂದು 30ರಿಂದ 31ನೇ ವಾರ್ಡ್​ ಹೊಸಪೇಟೆ ರಸ್ತೆ ಈಶ್ವರ ಪಾರ್ಕ್​ ಬಳಿ ಶಿಬಿರ ಹಮ್ಮಿಕೊಳ್ಳಲಾಗುವುದು.

ಸಾರ್ವಜನಿಕರು ಆಸ್ತಿಗೆ ಸಂಬಂಧಿಸಿದ ಖರೀದಿ ಪತ್ರ/ಹಕ್ಕುಪತ್ರ/ಖಾತಾ ನೋಂದಣಿ/ಬದಲಾವಣೆ ಪ್ರತಿ, 2024&-25ಸಾಲಿನ ಆಸ್ತಿತೆರಿಗೆ/ನಳದ ತೆರಿಗೆ ಪಾವತಿ ಪ್ರತಿ, ಆಸ್ತಿ ಮಾಲೀಕರ ಮತದಾರರ ಗುರುತಿನ ಚೀಟಿ/ಪ್ಯಾನ್​/ಡಿ.ಎಲ್​/ಪಡಿತರ ಚೀಟಿ, ಆಸ್ತಿ ಮಾಲೀಕರ-ಭಾವಚಿತ್ರ, ಆಸ್ತಿಯ ಭಾವಚಿತ್ರ/ಎನ್​ಎ ಆದೇಶ ಪ್ರತಿ, ಅನುಮೋದಿತ ಲೇಔಟ್​ ಪ್ರತಿ, ನಿವೇಶನಗಳ ಬಿಡುಗಡೆ ಆದೇಶ, ಕೆ.ಜೆ.ಪಿ ನಕ್ಷೆ, (ಕಟ್ಟಡ ಇದ್ದಲ್ಲಿ) ಕಟ್ಟಡ ಪರವಾನಿಗೆ, ನಕ್ಷೆ, ಕಟ್ಟಡ ಪೂರ್ಣಗೊಂಡ ಪ್ರಮಾಣ ಪತ್ರ ಹಾಗೂ ವಿದ್ಯುತ್​ ಮೀಟರ್​ ಆರ್​.ಆರ್​ ಸಂಖ್ಯೆ ಸಲ್ಲಿಸಿ ಇ ಆಸ್ತಿಯಡಿ ನಮೂನೆ 3 ಪಡೆದುಕೊಳ್ಳುವಂತೆ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net