ತೆರಿಗೆಗೆ ಅಗತ್ಯ ದಾಖಲೆ ಸಲ್ಲಿಸಿ

Published on

ಕೊಪ್ಪಳ: ನಗರಸಭೆ ವ್ಯಾಪ್ತಿಯಲ್ಲಿನ ಸಾರ್ವಜನಿಕರು ತಮ್ಮ ಆಸ್ತಿಗಳ ತೆರಿಗೆಗೆ ಅಗತ್ಯ ದಾಖಲೆ ಸಲ್ಲಿಸಬೇಕು.

ಸರ್ಕಾರದ ಸೂಚನೆಯಂತೆ ನಗರ, ಸ್ಥಳಿಯ ಸಂಸ್ಥೆಗಳ ವ್ಯಾಪ್ತಿಯಲ್ಲಿರುವ ಆಸ್ತಿ ತೆರಿಗೆ, ಬೇಡಿಕೆ, ವಸೂಲಿ ಮತ್ತು ಬಾಕಿ ನಿರ್ವಹಿಸಲು ನಿಗದಿಪಡಿಸಿರುವ ನಮೂನೆ ಕೆ.ಎಂ.ಎಫ್​. 24ರ ವಹಿ ಮತ್ತು ಆಸ್ತಿ ಕಣಜ ತಂತ್ರಾಂಶದಲ್ಲಿ ನಿಗದಿತ ಕಾಲಮಿತಿಯೊಳಗೆ ಕಾಲೋಚಿತಗೊಳಿಸಬೇಕಾಗಿದೆ. ಆಸ್ತಿಗೆ ಸಂಬಂಧಿಸಿದ ಖರೀದಿ ಪತ್ರ, ಎನ್​.ಎ.ಆದೇಶದ ಪ್ರತಿ, ವಿನ್ಯಾಸ ನಕ್ಷೆ, ಚಕ್ಕಬಂದಿ ದಾಖಲಾತಿ, ವರ್ಗಾವಣೆ ಆದೇಶ ಪ್ರತಿ, ಕೈ ಬರಹದ ನಮೂನೆ-&3ರ ಪ್ರತಿ, ಆಸ್ತಿ ಭಾವಚಿತ್ರ, ಆಸ್ತಿ ಮಾಲೀಕರ ಪಾಸ್​ ಪೋರ್ಟ ಸೈಜ್​ ಭಾವಚಿತ್ರ ಮತ್ತು ವೋಟರ್​ ಐ.ಡಿ. ಸಲ್ಲಿಸಬೇಕು. ದಾಖಲೆಗಳನ್ನು ನಗರಸಭೆಯ ಸಂಬಂಧಪಟ್ಟ ವಾರ್ಡಿನ ಕರವಸೂಲಿಗಾರರಿಗೆ ನೀಡುವಂತೆ ಪೌರಾಯುಕ್ತರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net