ಕೊಪ್ಪಳ: ನಗರದ ಗದಗ ರಸ್ತೆಯ ಕೆಎಚ್ನಿ ಕಾಲನಿಯಲ್ಲಿ ಅಂಗನವಾಡಿ ಅಗತ್ಯವಿಲ್ಲದಿದ್ದರೂ ನಿರ್ಮಿಸುತ್ತಿದ್ದು, ಅದನ್ನು ತಡೆಯುವಂತೆ ಒತ್ತಾಯಿಸಿ ನಿವಾಸಿಗಳು ಗುರುವಾರ ಡಿಸಿ ನಲಿನ್ ಅತುಲ್ಗೆ ಮನವಿ ಸಲ್ಲಿಸಿದರು.
ಕಾಲನಿಯ ಸಿಎ ಸೈಟ್ನಲ್ಲಿ ಅಂಗನವಾಡಿ ಕಟ್ಟಡ ನಿರ್ಮಿಸಲಾಗುತ್ತಿದೆ. ಆದರೆ, ಇಲ್ಲಿ ಅಂಗನವಾಡಿ ಕೇಂದ್ರವಿಲ್ಲ. ನಿರ್ಮಾಣಕ್ಕೆ ಮನವಿ ಸಲ್ಲಿಸಿಲ್ಲ. 25 ಮನೆಗಳಿದ್ದು ಅಂಗನವಾಡಿಗೆ ತೆರಳುವ ಮಕ್ಕಳಿಲ್ಲ. ಗಾಂಧಿನಗರ ಕಾಲನಿಗೆ ಅಂಗನವಾಡಿ ಕೇಂದ್ರ ಮಂಜೂರಾಗಿದೆ. ಅಲ್ಲಿ ನಿರ್ಮಿಸುವುದು ಬಿಟ್ಟು, ಕೆಎಚ್ಬಿ ಕಾಲನಿಯಲ್ಲಿ ನಿರ್ಮಿಸುತ್ತಿದ್ದಾರೆ. ಈ ಬಗ್ಗೆ ಮನವಿ ಸಲ್ಲಿಸಿದರೂ ಸ್ಪಂದಿಸುತ್ತಿಲ್ಲ. ಇದನ್ನು ಪ್ರಶ್ನಿಸಿದರೆ, ನಗರಸಭೆ ಅಧಿಕಾರಿಗಳು ಮಹಿಳೆಯರಿಗೆ ಬೆದರಿಕೆ ಹಾಕುತ್ತಿದ್ದಾರೆ ಎಂದು ದೂರಿದರು.
ನಿವೇಶನ ದಾಖಲಾತಿ ನೀಡುವಂತೆ ಕೇಳಿದರೂ ತೋರಿಸುತ್ತಿಲ್ಲ. ಗುತ್ತಿಗೆದಾರರ ಬದಲು ಅಧಿಕಾರಿಗಳೇ ಜೆಸಿಬಿ ಬಳಸಿ ಕಾಮಗಾರಿ ನಡೆಸುತ್ತಿದ್ದಾರೆ. ಅಗತ್ಯ ಇರುವಲ್ಲಿ ನಿರ್ಮಿಸದರೆ ಮಕ್ಕಳಿಗೆ ಅನುಕೂಲವಾಗಲಿದೆ. ಅದು ಬಿಟ್ಟು ಬೇಡದ ಕಡೆ ಕೇಂದ್ರ ನಿರ್ಮಿಸಿದರೆ ಪ್ರಯೋಜನವಾಗುವುದಿಲ್ಲ. ಕೆಎಚ್ಬಿ ಕಾಲನಿಯಲ್ಲಿ ಅಂಗನಾಡಿ ನಿರ್ಮಿಸುವುದನ್ನು ಕೈ ಬಿಡಬೇಕೆಂದು ಒತ್ತಾಯಿಸಿದರು. ಎಸ್ಪಿ ಕಚೇರಿ, ಗೃಹ ಮಂಡಳಿ, ನಗರಸಭೆ ಅಧಿಕಾರಿಗಳಿಗೂ ಮನವಿ ಸಲ್ಲಿಸಿದರು. ನಿವಾಸಿಗಳಾದ ವೇದಾ ಡಿ.ಎಸ್., ಮಂಜುಳಾ ಪಿ.ಜಿ., ಮಾಲಾ ವೈ.ಎಂ., ಬಸಮ್ಮ, ಅಕ್ಕಮಹಾದೇವಿ, ಸಂಗೀತಾ ಕೆ.ಎಸ್. ಇತರರಿದ್ದರು.