

ಕೊಪ್ಪಳ: ನಗರದ ಹೊರವಲಯದಲ್ಲಿನ ವೈದ್ಯಕಿಯ ವಿಜ್ಞಾನ ಸಂಸ್ಥೆ ಸಂಪರ್ಕಿಸುವ ರಸ್ತೆಯಲ್ಲಿ ವಿದ್ಯುತ್ ಕಂಬಗಳಿದ್ದರೂ ದೀಪಗಳಿಲ್ಲ. ಹೀಗಾಗಿ ರಾತ್ರಿ ವೇಳೆ ವೈದ್ಯಕಿಯ ಸಿಬ್ಬಂದಿ, ವಿದ್ಯಾರ್ಥಿಗಳು ಓಡಾಡಲು ಭಯಪಡುವಂತಾಗಿದೆ.
ಗಂಗಾವತಿ ರಸ್ತೆಯಲ್ಲಿ ಕಿಮ್ಸ್ ಕಟ್ಟಡವಿದೆ. ಹೊಸ 450 ಹಾಸಿಗೆಗಳ ಆಸ್ಪತ್ರೆಯೂ ಇಲ್ಲಿಯೇ ನಿರ್ಮಾಣಗೊಂಡಿದೆ. ಆದರೆ, ರೈಲು ಹಳಿಯಿಂದ ಕಿಮ್ಸ್ ಕಟ್ಟಡದವರೆಗೆ ವಿದ್ಯುತ್ ದೀಪಗಳಿಲ್ಲ. ಜಿಲ್ಲಾಸ್ಪತ್ರೆಯನ್ನು ಬೋಧಕ ಆಸ್ಪತ್ರೆಯಾಗಿ ಬದಲಾಯಿಸಲಾಗಿದೆ. ಹೀಗಾಗಿ ಹಗಲಿರುಳು ಕಿಮ್ಸ್ನಿಂದ ಆಸ್ಪತ್ರೆಗೆ ವೈದ್ಯರು, ವೈದ್ಯಕಿಯ ಸಿಬ್ಬಂದಿ, ವೈದ್ಯ ವಿದ್ಯಾರ್ಥಿಗಳು ಓಡಾಟ ಸಾಮಾನ್ಯ. ಮಹಿಳಾ ಸಿಬ್ಬಂದಿಯೂ ರಾತ್ರಿ ಪಾಳೆಯ ಕೆಲಸಕ್ಕೆ ಹೋಗುತ್ತಾರೆ. ಆದರೆ, ಇಲ್ಲಿ ವಿದ್ಯುತ್ ದೀಪಗಳಿಲ್ಲ.
ಇತ್ತೀಚೆಗೆ ಸ್ಟ್ಾ ನರ್ಸ್ ಒಬ್ಬರು ರಾತ್ರಿ ಪಾಳೆ ಕೆಲಸಕ್ಕೆ ಹೋಗುವಾಗ ಕಳ್ಳರು ಕೊರಳಲ್ಲಿನ ಚೈನ್ ಕಿತ್ತುಕೊಂಡು ಹೋದ ಟನೆಯೂ ನಡೆದಿದೆ. ಇದರಿಂದ ಸಿಬ್ಬಂದಿ ಆತಂಕಗೊಂಡಿದ್ದು, ರಾತ್ರಿ ಪಾಳೆ ಕೆಲಸಕ್ಕೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ. ಕಿಮ್ಸ್ ಕಟ್ಟಡ ಭಾಗ್ಯನಗರ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿದೆ. ಕೊಪ್ಪಳ&ಭಾಗ್ಯನಗರ ಗಡಿಗಳ ಗುರುತಿಸುವಿಕೆ ಗೊಂದಲವಿದ್ದು, ಸಮಸ್ಯೆ ಬಹುದಿನದಿಂದ ಮುಂದುವರೆದಿದೆ. ಪರಿಣಾಮ ವಿದ್ಯುತ್ ದೀಪ ಅಳವಡಿಕೆ ಆಗುತ್ತಿಲ್ಲ. ಇದರಿಂದ ವೈದ್ಯ ಸಿಬ್ಬಂದಿ ಕಷ್ಟ ಪಡುವಂತಾಗಿದೆ.