

ಕೊಪ್ಪಳ: ನಗರ ಸ್ವಚ್ಛವಾಗಿ ಕಾಣಲು ಪೌರ ಕಾರ್ಮಿಕರ ಶ್ರಮ ಅಧಿಕ ಎಂದು ನಗರಸಭೆ ಅಧ್ಯಕ್ಷ ಅಮ್ಜದ್ ಪಟೇಲ್ ಹೇಳಿದರು.
ನಗರದ ಸಾಹಿತ್ಯ ಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಪೌರ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಗರದಲ್ಲಿ ವಾಸಿಸುವ ಜನರಿಗೆ ಕುಡಿವ ನೀರು, ಬೀದಿ ದೀಪ ಜತೆಗೆ ಸ್ವಚ್ಛವಾಗಿ ಕಾಣಿಸುವಲ್ಲಿ ಪೌರ ಕಾರ್ಮಿಕರ ಶ್ರಮ ಅಪಾರ. ಬೆಳಗ್ಗೆ ಎಲ್ಲರೂ ಎದ್ದೇಳುವ ಮುನ್ನವೇ ಇವರು ಕೆಲಸ ಆರಂಭಿಸುತ್ತಾರೆ. ಅವರಿಗೆ ನಗರಸಭೆಯಿಂದ ಸಿಗಬಹುದಾದ ಸೌಲಭ್ಯ ಕಲ್ಪಿಸಬೇಕಿದೆ. ಶಾಸಕರು 55 ಕಾರ್ಮಿಕರಿಗೆ ನಿವೇಶನ ಹಂಚಿಕೆ ಮಾಡಿದ್ದಾರೆ. ಇನ್ನು 10&15 ಜನರಿಗೆ ನಿವೇಶನ ನೀಡಬೇಕಿದೆ. ಪೌರ ಕಾರ್ಮಿಕರಿಗೆ ಪ್ರತ್ಯೇಕ ಕಾಲನಿ ನಿರ್ಮಿಸಲಾಗುವುದು. ಗವಿಮಠ ಜಾತ್ರೆಯಲ್ಲಿ ಸಲ್ಲಿಸಿದ ಸೇವೆಗೆ ಗವಿಶ್ರೀಗಳು ಪ್ರಶಂಸೆ ವ್ಯಕ್ತಪಡಿಸಿದ್ದಾರೆ ಎಂದರು.
ಸಂಸದ ರಾಜಶೇಖರ ಹಿಟ್ನಾಳ, ಶಾಸಕ ರಾಘವೇಂದ್ರ ಹಿಟ್ನಾಳ, ಡಿಸಿ ಡಾ.ಸುರೇಶ ಬಿ.ಇಟ್ನಾಳ, ಎಸ್ಪಿ ಡಾ.ರಾಮ್ ಎಲ್.ಅರಸಿದ್ದಿ, ನಗರಸಭೆ ಉಪಾಧ್ಯೆ ಅಶ್ವಿನಿ ಗದಗಿನಮಠ, ಪೌರಾಯುಕ್ತ ವೆಂಕಟೇಶ ನಾಗನೂರು, ಸ್ಥಾಯಿ ಸಮಿತಿ ಅಧ್ಯಕ್ಷ ಬಸಯ್ಯ ಹಿರೇಮಠ ಇತರರಿದ್ದರು.