ಕೊಪ್ಪಳ ನಗರಸಭೆ ಆಯ-ವ್ಯಯ ಮಂಡನೆ

district koppal cmc budjet president amzad patel
Published on

ಕೊಪ್ಪಳ: ಜಿಲ್ಲಾ ಕೇಂದ್ರ ಕೊಪ್ಪಳ ನಗರಸಭೆಯಲ್ಲಿ 2025&26ನೇ ಸಾಲಿನ ಬಜೆಟ್​ ಮಂಡನೆಯಾಯಿತು. ಅಧ್ಯಕ್ಷ ಅಮ್ಜದ್​ ಪಟೇಲ್​ 54.43 ಕೋಟಿ ಗಾತ್ರದ ಬಜೆಟ್​ ಮಂಡಿಸಿ ಸದಸ್ಯರಿಂದ ಅನುಮೋದನೆ ಪಡೆದರು.

ಅಕೌಂಟೆಂಟ್​ ಇಲ್ಲದ ಕಾರಣ ಬಜೆಟ್​ ಮಂಡನೆಗೆ ಒಂದು ತಿಂಗಳು ತಡವಾಗಿದೆ. ವಿವಿಧ ಮೂಲಗಳು, ತೆರಿಗೆಯಿಂದ ಒಟ್ಟು 54,43, 61, 278ರೂ. ಸಂಗ್ರಹವಾಗಲಿದೆ. ರಾಜಸ್ವ, ಬಂಡವಾಳ, ಅಸಾಧಾರ ಸೇರಿ ಒಟ್ಟು 53,95,13,778ರೂ. ರ್ಖಚಾಗಲಿದೆ. 48,47,500 ರೂ. ಉಳಿತಾಯವಾಗಲಿದೆ. ಈ ಬಾರಿ ನಗರ ಸೌಂದರ್ಯ, ರಸ್ತೆ ಅಗಲೀಕರಣ, ಪ್ರವಾಸೋದ್ಯಮ ಬೆಳವಣಿಗೆ, ಉದ್ಯಾನಗಳ ಅಭಿವೃದ್ಧಿ, ಕೆರೆಗಳ ಅಭಿವೃದ್ಧಿಗೆ ಯೋಜನೆ ಹಾಕಿಕೊಳ್ಳಲಾಗಿದೆ. ಗವಿಮಠದ ಹತ್ತಿರದ ಹೂವಿನಾಳ ರಸ್ತೆ ವೃತ್ತ ಅಭಿವೃದ್ಧಿ, ನಗರಾಭಿವೃದ್ಧಿ ಪ್ರಾಧಿಕಾರ ಸಹಯೋಗದಲ್ಲಿ ಹುಲಿಕೆರೆ ಅಭಿವೃದ್ಧಿಪಡಿಸಲಾಗುವುದು ಎಂದರು.

ನಗರದಲ್ಲಿ ಆಗಾಗ ಕಾಣಿಸುವ ಅಗ್ನಿ ಅವಡಗಳಿಗೆ ತಕ್ಷಣ ಸ್ಪಂದಿಸಲು ನಗರಸಭೆಯಿಂದ ತಾತ್ಕಾಲಿಕ ಪರಿಹಾರ ಭಾಗ್ಯ ಕಲ್ಪಿಸಲಾಗುವುದು. ಮುಚ್ಚಿ ಹೋದ ಐತಿಹಾಸಿಕ ಬಾವಿಗಳನ್ನು ಸ್ವಚ್ಛಗೊಳಿಸುವುದು, ಈಶ್ವರ ಪಾರ್ಕ್​, ಪಾಂಡುರಂಗ ದೇವಸ್ಥಾನ ಹಿಂಭಾಗದ ಉದ್ಯಾನ, ಪದಕಿ, ಅಗಡಿ ಅಂದಣ್ಣ ಮನೆ ಹಿಂದಿನ ಉದ್ಯಾನ ಹಂತ ಹಂತವಾಗಿ ಅಭಿವೃದ್ಧಿಪಡಿಸಿ ಜನರಿಗೆ ಅನುಕೂಲ ಕಲ್ಪಿಸಿಕೊಡಲಾಗುವುದು. ಬಸ್​ ನಿಲ್ದಾಣ ಮುಂಭಾಗದಲ್ಲಿ ಜನಸಂಚಾರ ಹೆಚ್ಚುತ್ತಿದ್ದು, ಪಾದಾಚಾರಿಗಳಿಗಾಗಿ ಖಾಸಗಿ ಸಹಭಾಗಿತ್ವದಲ್ಲಿ ಸೇತುವೆ ನಿರ್ಮಿಸುವ ಉದ್ದೇಶ ಹೊಂದಲಾಗಿದೆ. ಹಂದಿಕೆರೆ, ಮೋತಿಕೆರೆಗಳನ್ನು ಅಮೃತ&2 ಅಭಿವರದ್ಧಿ ಮಾಡಿ ಬೋಟಿಂಗ್​ ಸೌಲಭ್ಯ ಕಲ್ಪಿಸಿ ಪ್ರವಾಸಿ ತಾಣವಾಗಿ ಬದಲಾಯಿಸಲು ಯೋಜಿಸಲಾಗಿದೆ ಎಂದು ತಿಳಿಸಿದರು.

ಉಪಾಧ್ಯೆ ಅಶ್ವಿನಿ ಗದಗಿನಮಠ, ಸ್ಥಾಯಿ ಸಮಿತಿ ಅಧ್ಯಕ್ಷ ಅಕ್ಬರ್​ ಪಾಷಾ ಪಲ್ಟನ್​, ಪೌರಾಯುಕ್ತ ಗಣಪತಿ ಪಾಟೀಲ್​, ನಗರಸಭೆ ಸದಸ್ಯರು, ಅಧಿಕಾರಿಗಳಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net