ಕೊಪ್ಪಳದ ಹೋಟೆಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ಯುವಕ ಪೋಸ್ಟ್ ಬಿಟ್ಟಾತ. ಅ.6 ರಂದು ಸಿಎಂ ವಿವಿಧ ಕಾಮಗಾರಿಗಳ ಉದ್ಘಾಟನೆಗೆ ಕೊಪ್ಪಳಕ್ಕೆ ಬಂದಿದ್ದರು. ಅದಕ್ಕು ಮುನ್ನಾ ದಿನ ಪೊಲೀಸರು ಸಿದ್ಧತೆ ಮಾಡುವಾಗ ಕೇಸರಿ ಧ್ವಜ ತೆರವು ಮಾಡುವಂತೆ ತಿಳಿಸಿದ್ದರು. ಇದರಿಂದ ಕೆರಳಿದ ಬಿಜೆಪಿಗರು ಹಾಗೂ ಹಿಂದುಪರ ಕಾರ್ಯಕರ್ತರು ಪ್ರತಿಭಟಿಸಿದ್ದರು. ಇದೇ ವಿಷಯವಾಗಿ ಯುವಕ ಪೋಸ್ಟ್ ಮಾಡಿದ್ದಾನೆ. ಧಮ್ ಇದ್ದರೆ ಧ್ವಜ ತೆರವು ಮಾಡಿಸಿ. ಈ ವಿಷಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳಗೆ ಗೊತ್ತಾದರೆ ಜೀವಂತ ಸುಡುತ್ತಾರೆಂದು ಹೇಳಿದ್ದಾನೆ.