

ಕೊಪ್ಪಳ: ಕೊಪ್ಪಳ ತಾಲೂಕಿನ ಬೂದಗುಂಪಾ ಕುರಿ ಸಂತೆ ಮಾರುಕಟ್ಟೆ ಅಭಿವೃದ್ಧಿಗೆ ಕೆಕೆಆರ್ಡಿಬಿಯಿಂದ 25 ಕೋಟಿ ರೂ. ಅನುದಾನ ಮಂಜೂರು. ಕೂಕನಪಳ್ಳಿಯಿಂದ ಬೂದಗುಂಪಾಕ್ಕೆ ಸಂತೆ ವರ್ಗ.
ತುಂಗಭದ್ರಾ ಜಲಾಶಯದ ಹೂಳು ಮತ್ತು ನವಲಿ ಜಲಾಶಯಕ್ಕೆ ಸಂಬಂಧಿದಂತೆ ಆಂಧ್ರ ಮತ್ತು ತೆಲಂಗಾಣದೊಂದಿಗೆ ಚರ್ಚೆ. 100 ಕೋಟಿ ರೂ. ವೆಚ್ಚದಲ್ಲಿ ಕಿಮ್ಸ್ ವ್ಯಾಪ್ತಿಯಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಮಂಜೂರು. ಯಲಬುರ್ಗಾಕ್ಕೆ ಕೆಕೆಆರ್ಡಿಬಿಯಿಂದ 6 ಕೋಟಿ ರೂ. ವೆಚ್ಚದಲ್ಲಿ ನರ್ಸಿಂಗ್ ಕಾಲೇಜು ಮಂಜೂರು. ತಳಕಲ್ ಜಿಟಿಟಿಸಿ ಬಹು ಕೌಶಲಾಭಿವೃದ್ಧಿ ಕೇಂದ್ರಕ್ಕೆ ಕೆಕೆಆರ್ಡಿಬಿಯಿಂದ 90 ಕೋಟಿ ರೂ. ಮಂಜೂರಾಗಿದ್ದು, ಕಾಮಗಾರಿ ಮುಂದುವರಿಕೆ. ಬಾಕಿ ಅನುದಾನ ಒದಗಿಸುವ ಭರವಸೆ.
60 ಕೋಟಿ ರೂ. ವೆಚ್ಚದಲ್ಲಿ ರೋಣ ತಾಲೂಕಿನ ಕೋಟುಮುಚಗಿ ಗ್ರಾಮದಿಂದ ಕುಕನೂರು ತಾಲೂಕಿನ ವೀರಾಪುರ ಗ್ರಾಮದವರೆಗೆ ಹಿರೇಹಳ್ಳದ ಹೂಳೆತ್ತು ಭರವಸೆ. ಯಲಬುರ್ಗಾ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ತಾಲೂಕು ಕ್ರೀಡಾಂಗಣವನ್ನು 6 ಕೋಟಿ ರೂ.ನಲ್ಲಿ ಅಭಿವೃದ್ಧಿ. ಕೊಪ್ಪಳ ಜಿಲ್ಲಾ ನ್ಯಾಯಾಲಯ ಕಟ್ಟಡ ಕಾಮಗಾರಿಗೆ 50 ಕೋಟಿ ರೂ. ಮಂಜೂರು. ಕುಕನೂರು ಮತ್ತು ಕಾರಟಗಿ ಜೆಎಂಎ್ಸಿ ನ್ಯಾಯಾಲಯಗಳಿಗೆ ತಲಾ 9 ಕೋಟಿ ರೂ. ನೀಡಲಾಗಿದೆ.