ಸಿದ್ದರಾಮಯ್ಯ ವಿರುದ್ಧ ಆರೋಪ ಸಲ್ಲ

district koppal cm siddaramayya muda issue
Published on

ಕೊಪ್ಪಳ: ಸಿಎಂ ಸಿದ್ದರಾಮಯ್ಯ ವಿರುದ್ಧ ಬಿಜೆಪಿ&ಜೆಡಿಎಸ್​ ವಿನಾ ಕಾರಣ ಆರೋಪ ಮಾಡುತ್ತಿರುವುದನ್ನು ಖಂಡಿಸಿ ಆ.12ರಂದು ಕೊಪ್ಪಳದ ಗೌರಿಶಂಕರ ದೇವಸ್ಥಾನದಿಂದ ತಹಸೀಲ್​ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸುವುದಾಗಿ ಶ್ರೀ ಕ್ರಾಂತಿಕಾರಿ ಸಂಗೊಳ್ಳಿ ರಾಯಣ್ಣ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿ ಮಂಜುಳಾ ಉಂಡಿ ತಿಳಿಸಿದರು.

ಸಿದ್ದರಾಮಯ್ಯ ಹುಟ್ಟು ಹಬ್ಬ ಅಂಗವಾಗಿ ಬೆಳಗ್ಗೆ 11 ಗಂಟೆಗೆ ವಿಶೇಷ ಪೂಜೆ ನೆರವೇರಿಸಲಾಗುವುದು. ಬಳಿಕ ಪ್ರತಿಭಟನಾ ಮೆರವಣಿಗೆ ನಡೆಸಿ ತಹಸೀಲ್ದಾರ್​ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಗುವುದು. ನಾಲ್ಕು ದಶಕದಿಂದ ಸಿದ್ದರಾಮಯ್ಯ ಶುದ್ಧ ರಾಜಕಾರಣ ಮಾಡುತ್ತಿದ್ದಾರೆ. ಅವರ ಹೆಸರಿಗೆ ಮಸಿ ಬಳಿಯುವ ಹುನ್ನಾರ ವಿಪಕ್ಷಗಳು ನಡೆಸಿವೆ. ಅಹಿಂದ ನಾಯಕ ಎರಡು ಬಾರಿ ಸಿಎಂ ಆಗಿದ್ದನ್ನು ಅವರಿಗೆ ಸಹಿಸಲಾಗುತ್ತಿಲ್ಲ. ಮುಡಾ ಹಗರಣ ಹೆಸರಿನಲ್ಲಿ ಕೇಂದ್ರ, ರಾಜ್ಯಪಾಲರಿಗೆ ಒತ್ತಡ ಹಾಕಿ ರಾಜೀನಾಮೆಗೆ ಸಂಚು ಮಾಡಿದ್ದಾರೆಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ಸಂದ ಅಧ್ಯಕ್ಷ ಗುಡದಪ್ಪ ಮಾತನಾಡಿ, ವಿಪಕ್ಷಗಳ ನಡೆಯನ್ನು ನಮ್ಮ ಸಂ ಖಂಡಿಸುತ್ತದೆ. ಸಿದ್ದರಾಮಯ್ಯ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿದರೆ ಕುರಿ ಹಾಗೂ ದನಗಳ ಸಮೇತ ಬೆಂಗಳೂರಿಗೆ ಪಾದಯಾತ್ರೆ ನಡೆಸುತ್ತೇವೆಂದರು. ಸಂಘದ ನಿರ್ದೇಶಕರಾದ ಗಂಗಮ್ಮ ಚಿಕೇನಕೊಪ್ಪ, ಹನ್ಮಂತಪ್ಪ ಅಬ್ಬಿಗೇರಿ, ಬಸವರಾಜ ಉಂಡಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net