ಹೊಸಪೇಟೆಲಿ ಸಾಧನಾ ಸಮಾವೇಶ, ಸಿಎಂ ಸಿದ್ದರಾಮಯ್ಯ ಹೇಳಿಕೆ

district koppal cm siddaramayya mspl
Published on

ಕೊಪ್ಪಳ: ಕಾಂಗ್ರೆಸ್​ ಸರ್ಕಾರ ಅಧಿಕಾರಕ್ಕೆ ಬಂದು ಮೇ 20ಕ್ಕೆ ಎರಡು ವರ್ಷ ಪೂರೈಸಲಿದ್ದು ಹೊಸಪೇಟೆಯಲ್ಲಿ ಸಾಧನಾ ಸಮಾವೇಶ ಹಮ್ಮಿಕೊಳ್ಳುವುದಾಗಿ ಸಿಎಂ ಸಿದ್ದರಾಮಯ್ಯ ತಿಳಿಸಿದರು.

ಒಂದು ಲಕ್ಷ ಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಲಾಗುವುದು. ಮೂರು ಲಕ್ಷಕ್ಕೂ ಅಧಿಕ ಲಾನುಭವಿಗಳು ಕಾರ್ಯಕ್ರಮಕ್ಕೆ ಸಾಯಾಗುವರು. ಅದಕ್ಕೆ ಬೇಕಾದ ಸಿದ್ಧತೆ ನಡೆದಿದೆ ಎಂದು ಶುಕ್ರವಾರ ಸುದ್ದಿಗಾರರಿಗೆ ಹೇಳಿದರು.

ಆಪರೇಷನ್​ ಸಿಂಧೂರ ವಿಷಯವಾಗಿ ಶಾಸಕರು ನೀಡುವ ಹೇಳಿಕೆ ಅವರ ವೈಯಕ್ತಿಕ. ಅಮೇರಿಕಾ ಅಧ್ಯಕ್ಷ ಟ್ರಂಪ್​ ಎರಡೆರಡು ಹೇಳಿಕೆ ನೀಡಿದ್ದಾರೆ. ಅವರ ಮೊದಲ ಹೇಳಿಕೆ ಸರಿ ಎಂಬುದು ನನ್ನ ಅನಿಸಿಕೆ. ಕದನ ವಿರಾಮದಿಂದ ಉಗ್ರರಿಗೆ ನೆಲೆ ನೀಡಲು ಪಾಕಿಸ್ತಾನಕ್ಕೆ ಮತ್ತೊಂದು ಅವಕಾಶ ನೀಡಿದಂತಾಗಿದೆ. ಭಯೋತ್ಪಾದನೆ ನಾಶವಾಗಬೇಕು. ಯುದ್ಧ ಬೇಡವೆನ್ನಲ್ಲ. ಆದರೆ, ಅನಿವಾರ್ಯವಾದರೆ ಮಾಡಲಿ. ದೇಶದ ಜನರ ರಕ್ಷಣೆ ವಿಷಯ ಬಂದಾಗ ಕಠಿಣ ಕ್ರಮ ಅನಿವಾರ್ಯ. ಪಾಕಿಸ್ತಾನ ವಿರುದ್ಧ ಭಾರತ ತೋರಿದ ಪ್ರತಿರೋಧಕ್ಕೆ ದೇಶವೇ ಬೆಂಬಲ ನೀಡಿದೆ ಎಂದರು.

ವಿಪಕ್ಷ ನಾಯಕ ಆರ್​.ಅಶೋಕ್​ ಗ್ರೇಟರ್​ ಬೆಂಗಳೂರು ಅಲ್ಲ ಕ್ವಾರ್ಟರ್​ ಬೆಂಗಳೂರು ಎಂಬ ಹೇಳಿಕೆ ಬಗ್ಗೆ ಪ್ರತಿಕ್ತಿಯಿಸಿ, ಅವರಿಗೆ ಕ್ವಾರ್ಟರ್​ ಅಭ್ಯಾಸ. ಅದಕ್ಕೆ ಅದನ್ನೇ ಹೇಳುತ್ತಾರೆ. ಬೆಂಗಳೂರು ವಿಭಜನೆ ಮಾಡುವ ಯೋಜನೆ ರೂಪಿಸಿದ್ದೇ ಬಿಜೆಪಿ. 1.5 ಕೋಟಿ ಜನಸಂಖ್ಯೆ ಇರುವ ಬೆಂಗಳೂರಿಗೆ ಒಂದೇ ಮಹಾನಗರ ಪಾಲಿಕೆಯಡಿ ನಿರ್ವಹಣೆ ಕಷ್ಟ. ಆಡಳಿತಾತ್ಮಕ ದೃಷ್ಟಿಯಿಂದ ಮೂರು ಅಥವಾ ಹೆಚ್ಚು ಭಾಗವಾಗಿ ವಿಭಾಗಿಸಲಾಗುವುದು ಎಂದು ಸಮರ್ಥಿಸಿಕೊಂಡರು.

ಜನಾರ್ದನರೆಡ್ಡಿ ಅಕ್ರಮ ಗಣಿಗಾರಿಕೆಯಲ್ಲಿ 7 ವರ್ಷ ಶಿೆಗೆ ಗುರಿಯಾಗಿ ಶಾಸಕತ್ವ ಕಳೆದುಕೊಂಡಿದ್ದಾರೆ. ಉಪ ಚುನಾವಣೆ ಘೋಷಣೆಯಾದರೆ ನಾವೇ ಗೆಲ್ಲುತ್ತೇವೆ. ಅಭ್ಯರ್ಥಿ ಯಾರೆಂದು ಪಕ್ಷ ನಿರ್ಧರಿಸಲಿದೆ. ಹಿಂದೆ ನಾನು ಅಕ್ರಮ ಗಣಿಗಾರಿಕೆ ವಿರುದ್ಧ ಪಾದಯಾತ್ರೆ ಮೂಲಕ ಹೋರಾಟ ಮಾಡಿದ್ದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ನಾನು ರೆಡ್ಡಿ ಗೆಲ್ಲಲು ಸಹಕರಿಸಿಲ್ಲ. ಅದೆಲ್ಲ ಸುಳ್ಳು.ನನ್ನ ರಾಜಕೀಯ ಜೀವನದಲ್ಲಿ ಬಿಜೆಪಿ, ಆರ್​ಎಸ್​ಎಸ್​ ವಿರೋಧಿಸಿದಷ್ಟು ಬೇರೆ ಯಾರನ್ನೂ ವಿರೋಧಿಸಿಲ್ಲವೆಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net