ಬೀದಿ ನಾಯಿ ಹಾವಳಿ ತಡೆಯಿರಿ

2208-Kpl-Ravi-4
Published on

ಕೊಪ್ಪಳ: ನಗರದಲ್ಲಿ ಬೀದಿ ನಾಯಿ ಹಾವಳಿ ಹೆಚ್ಚುತ್ತಿದ್ದು, ನಿಯಂತ್ರಿಸುವಂತೆ ಒತ್ತಾಯಿಸಿ ಸೋಸಿಯಲ್​ ಡೆಮಾಕ್ರಟಿಕ್​ ಪಾರ್ಟಿ ಆ್​ ಇಂಡಿಯಾ ಪದಾಧಿಕಾರಿಗಳು ಶುಕ್ರವಾರ ನಗರಸಭೆ ಪೌರಾಯುಕ್ತ ಸುರೇಶ ಬಬಲಾದ ಅವರಿಗೆ ಮನವಿ ಸಲ್ಲಿಸಿದರು.

ನಗರದಲ್ಲಿ ಬೀದಿ ನಾಯಿಗಳ ಸಂಖ್ಯೆ ಹೆಚ್ಚಿದೆ. ಎಲ್ಲೆಂದರಲ್ಲಿ ಮಕ್ಕಳು, ಜನರ ಮೇಲೆ ದಾಳಿ ಮಾಡುತ್ತಿವೆ. ಈ ಬಗ್ಗೆ ಹಲವು ಬಾರಿ ನಗರಸಭೆ ಗಮನಕ್ಕೆ ತಂದಿದ್ದೇವೆ. ಆದರೆ, ನಿಯಂತ್ರಣ ಮಾಡುತ್ತಿಲ್ಲ. ಭರವಸೆ ನೀಡಿ ಸುಮ್ಮನಾಗುತ್ತಿದ್ದಾರೆ. ನಾಯಿ ದಾಳಿಗಳು ಹೆಚ್ಚುತ್ತಿವೆ. ಮಕ್ಕಳ ಮೇಲೆ ಮಾರಾಂತಿಕ ದಾಳಿ ನಡೆಸುತ್ತಿವೆ ಎಂದು ದೂರಿದರು.

ತಕ್ಷಣ ಕ್ರಮ ಕೈಗೊಳ್ಳಬೇಕು. ಬೀದಿ ನಾಯಿಗಳನ್ನು ನಿಯಂತ್ರಿಸಿ. ಜನರಿಗೆ ರಕ್ಷಣೆ ನೀಡಿ. ಇಂಥ ಟನೆಗಳು ಮರುಕಳಿಸದಂತೆ ನೋಡಿಕೊಳ್ಳಿ. ಇಲ್ಲದಿದ್ದರೆ ಪಕ್ಷದಿಂದ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಎಸ್​ಡಿಪಿಐ ಕೊಪ್ಪಳ ವಿಧಾನಸಭಾ ಕ್ಷೇತ್ರ ಅಧ್ಯಕ್ಷ ಸಲೀಂ ಖಾದ್ರಿ, ಉಪಾಧ್ಯಕ್ಷ ಾರೂಕ್​ ಅತ್ತಾರ, ತಾಲೂಕು ಸಮಿತಿ ಸದಸ್ಯರಾದ ರಿಜ್ವಾನ್​ ಪೀರ್ಜಾದೆ, ಗೇಸು, ಭಾಷಾ ಗಂಗಾವತಿ, ಶಾರುಖ್​ಖಾನ್​ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net