ಶೌಚಗೃಹ ಸಮಸ್ಯೆ ಸರಿಪಡಿಸಿ

district koppal city gandhinagar toilet issue protest
Published on

ಕೊಪ್ಪಳ: ನಗರದ 23ನೇ ವಾರ್ಡ್​ ಗಾಂಧಿನಗರದ ಸಾರ್ವಜನಿಕ ಮಹಿಳಾ ಶೌಚಗೃಹ ಸಮಸ್ಯೆ ಸರಿಪಡಿಸಿ ಬಳಕೆಗೆ ನೀಡುವಂತೆ ಒತ್ತಾಯಿಸಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂ ಗಾಂಧಿ ನಗರ ಟಕ ಪದಾಧಿಕಾರಿಗಳು ಶುಕ್ರವಾರ ನಗರಸಭೆ ಮುಂಭಾಗ ಪ್ರತಿಭಟನೆ ನಡೆಸಿದರು.

ಈ ಮೊದಲು ಉತ್ತಮ ಶೌಚಗೃಹವಿತ್ತು. ಜನರು ಬಳಕೆ ಮಾಡುತ್ತಿದ್ದರು. ಆದರೆ, ಅನುದಾನವಿದೆ ಎಂದು ಇದ್ದ ಶೌಚಗೃಹ ಒಡೆದಿದ್ದಾರೆ. ಹೊಸದಾಗಿ ನಿರ್ಮಿಸಿದ್ದು ಚಿಕ್ಕದಾಗಿದೆ. ಕಾಮಗಾರಿ ಕಳಪೆಯಾಗಿದೆ. ಪೈಪುಗಳು ಒಡೆದಿವೆ. ನೀರು ಸಂಪರ್ಕವಿಲ್ಲ. ಕೇವಲ ಮೂರು ಶೌಚಗೃಹಗಳು ಬಳಕೆ ಇವೆ. ವಾರ್ಡ್​ನಲ್ಲಿ ನೂರಾರು ಮಹಿಳೆಯರಿದ್ದು ಕೇವಲ ಮೂರು ಶೌಚಗೃಹಗಳಿರುವ ಕಾರಣ ಸಮಸ್ಯೆ ಆಗಿದೆ. ಶೌಚಗೃಹಕ್ಕೆ ವಿದ್ಯುತ್​ ಸಂಪರ್ಕ ಕಡಿತ ಮಾಡಿ ತೊಂದರೆ ಮಾಡುತ್ತಿದ್ದಾರೆ. ಈ ಬಗ್ಗೆ ಹಲವು ಬಾರಿ ನಗರಸಭೆ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಆದರೂ, ಅಧಿಕಾರಿಗಳು ಕಿವಿಗೊಡುತ್ತಿಲ್ಲವೆಂದು ಆರೋಪಿಸಿದರು.

ಶೌಚಗೃಹ ಸಮಸ್ಯೆ ತಕ್ಷಣ ಸರಿಪಡಿಸಿ. ಈ ಮೊದಲಿನಂತೆ 16 ರೂಮ್​ಗಳಿರುವ ಟಾಯ್ಲೆಟ್​ ಕಟ್ಟಡ ನಿರ್ಮಿಸಬೇಕು. ಪದೇ ಪದೆ ವಿದ್ಯುತ್​ ಸಂಪರ್ಕ ಕಡಿತ ಮಾಡುವುದನ್ನು ತಡೆಯಿರಿ. ಒಡೆದ ಪೈಪ್​ ಸರಿಪಿಡಿಸಿ. ನೀರು ಸಂಪರ್ಕ ಕಲ್ಪಿಸಿ. ಕಳಪೆ ಕಾಮಗಾರಿ ಮಾಡಿದವರ ವಿರುದ್ಧ ಕ್ರಮವಾಗಬೇಕು. ಸಮಸ್ಯೆ ಸರಿಪಡಿಸಿ ಬಳಕೆಗೆ ನೀಡುವಂತೆ ಒತ್ತಾಯಿಸಿದರು.

ನಿವಾಸಿಗಳಾದ ಸುಂಕಪ್ಪ ಗದಗ, ಅಮರವ್ವ ಗದಗ, ಕೀರಮ್ಮ ಮಿರಗನತಂಡಿ, ರಾಮಣ್ಣ ದೊಡ್ಮನಿ, ಸುಂಕಮ್ಮ ಕುಕನೂರು, ಸಂಜೀವಮ್ಮ ಕುಕನೂರು, ಸುಂಕಮ್ಮ ಪಡಚಿಂತಿ, ಶರಣಮ್ಮ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net