ದೀಕ್ಷಾ ರಜತ ಮಹೋತ್ಸವ 20ರಂದು

chitradugrga immadi shree july 20 silver jubely program
ಕೊಪ್ಪಳದಲ್ಲಿ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಶುಕ್ರವಾರ ಮಾತನಾಡಿದರು. ಭೋವಿ ಅಭಿವೃದ್ಧಿ ನಿಗಮ ಅಧ್ಯಕ್ಷ ರವಿಕುಮಾರ್​ ಎಸ್​., ಸಂಸದ ರಾಜಶೇಖರ ಹಿಟ್ನಾಳ, ಭೋವಿ ಸಮುದಾಯದ ಮುಖಂಡರಾದ ಬಸವರಾಜ ಭೋವಿ, ಕಾವೇರಿ ರಾಗಿ ಇದ್ದರು.
Published on

ಕೊಪ್ಪಳ: ಚಿತ್ರದುರ್ಗದ ಭೋವಿ ಗುರಪೀಠದಲ್ಲಿ ಜು.20ರಂದು ದೀಕ್ಷಾ ರಜತ ಮಹೋತ್ಸವ ಜರುಗಲಿದೆ ಎಂದು ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ತಿಳಿಸಿದರು.

ಕನ್ನಡ ಮತ್ತು ಸಂಸತಿ ಸಚಿವ ಶಿವರಾಜ ತಂಗಡಗಿ ಅಧ್ಯಕ್ಷತೆ, ಮಾಜಿ ಸಚಿವ ಅರವಿಂದ ಲಿಂಬಾವಳಿ ಕಾರ್ಯಾಧ್ಯಕ್ಷತೆ ಇರಲಿದೆ. ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಶೇ.90ಕ್ಕಿಂತ ಅಧಿಕ ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಯುಪಿಎಸ್ಸಿಯಲ್ಲಿ ತೇರ್ಗಡೆ ಹೊಂದಿದ ಸಮುದಾಯದ ಮೂವರನ್ನು ಸನ್ಮಾನಿಸಲಾಗುವುದು ಎಂದು ಶುಕ್ರವಾರ ನಗರದ ಪ್ರವಾಸಿ ಮಂದಿರಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ನಾಡಿನ ವಿವಿಧ ಮಠಗಳ ಮಠಾಧೀಶರು ಸಾನ್ನಿಧ್ಯವಹಿಸುವರು. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ, ಕೇಂದ್ರ ಸಚಿವರಾದ ಎಚ್​.ಡಿ.ಕುಮಾರಸ್ವಾಮಿ, ವಿ.ಸೋಮಣ್ಣ, ಶೋಭಾ ಕರಂದ್ಲಾಜೆ ಸೇರಿ ವಿವಿಧ ಜನಪ್ರತಿನಿಧಿಗಳು, ಸಮುದಾಯದ ಹಾಲಿ, ಮಾಜಿ ಜನಪ್ರತಿನಿಧಿಗಳು ಆಗಮಿಸುವರು. ಸುಮಾರು 3 ಲಕ್ಷಕ್ಕೂ ಅಧಿಕ ಜನರು ಸೇರುವ ನಿರೀೆ ಇದೆ. ಅಸಂಘಟಿತ ಸಮುದಾಯ ಕಟ್ಟುವ ಕೆಲಸ ನಡೆಯುತ್ತಿದೆ. ಸಾಮಾಜಿಕ, ಆರ್ಥಿಕ ಧಾರ್ಮಿಕವಾಗಿ ಪ್ರಗತಿಯತ್ತ ಕೊಂಡೋಯ್ಯುವ ಕಾರ್ಯವನ್ನು ಗುರುಪೀಠ ಕಳೆದ ಎರಡೂವರೆ ದಶಕಗಳಿಂದ ಮಾಡುತ್ತಿದೆ ಎಂದರು.

ಭೋವಿ ಅಭಿವೃದ್ಧಿ ನಿಗಮ ಅಧ್ಯಕ್ಷ ರವಿಕುಮಾರ್​ ಎಸ್​. ಮಾತನಾಡಿ, ಶ್ರೀಗಳ ದೀಕ್ಷಾ ರಜತ ಮಹೋತ್ಸವ ಅಂಗವಾಗಿ ಎಲ್ಲ ಜಿಲ್ಲೆಗಳಲ್ಲಿ ಪೂರ್ವಭಾವಿ ಸಭೆ ನಡೆಸಲಾಗುತ್ತಿದೆ. ಸಮುದಾಯ ಮುಖಂಡರು, ಸಂಟನೆಯವರು ಹಾಗೂ ಜನರನ್ನು ಆಹ್ವಾನಿಸಲಾಗುತ್ತಿದೆ. ಕಾರ್ಯಕ್ರಮ ಜತೆಗೆ ಸಮುದಾಯ ಅಭಿವೃದ್ಧಿ, ಸಂಟನೆಗೆ ಆದ್ಯತೆ ನೀಡುತ್ತಿದ್ದೇವೆ ಎಂದು ತಿಳಿಸಿದರು.

ಸಂಸದ ರಾಜಶೇಖರ ಹಿಟ್ನಾಳ, ಭೋವಿ ಸಮುದಾಯದ ಮುಖಂಡರಾದ ಬಸವರಾಜ ಭೋವಿ, ಕಾವೇರಿ ರಾಗಿ ಇತರರಿದ್ದರು.

ಹಲವು ಧಾರ್ಮಿಕ ಕಾರ್ಯಕ್ರಮ, ರಕ್ತದಾನ ಶಿಬಿರ, ವಧು-ವರರಿಗೆ ಋಣಾನುಬಂಧ ಕಾರ್ಯಕ್ರಮ, ಯುವಕರಿಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ವ್ಯಕ್ತತ್ವ ವಿಕಸನ ತರಬೇತಿ, ಸಾಲುಮರದ ತಿಮ್ಮಕ್ಕ ನೆತೃತ್ವದಲ್ಲಿ ಲಕ್ಷ ಸಸಿ ನೆಡುವ ವನ ಮಹೋತ್ಸವ ಕಾರ್ಯಕ್ರಮಗಳು ಜರುಗಲಿವೆ. ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ. ಚಿತ್ರದುರ್ಗ.

ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ. ಚಿತ್ರದುರ್ಗ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net