ಚಿಣ್ಣರು ಪಠ್ಯೇತರ ಚಟುವಟಿಕೆಯಲ್ಲಿ ತೊಡಗಿ, ಜಿಪಂ ಸಿಇಒ ಪಾಂಡೆಯ ಸಲಹೆ

district koppal childrens day sports zp ceo
Published on

ಕೊಪ್ಪಳ: ಅಭ್ಯಾಸದೊಂದಿಗೆ ಮಕ್ಕಳು ಪಠ್ಯೇತರ ಚಟುವಟಿಕೆಗಳಲ್ಲೂ ಭಾಗವಹಿಸಬೇಕೆಂದು ಜಿಪಂ ಸಿಇಒ ರಾಹುಲ್​ ರತ್ನಂ ಪಾಂಡೆಯ ಹೇಳಿದರು.

ನಗರದ ಕೃಷಿ ವಿಜ್ಞಾನ ಕೇಂದ್ರದಲ್ಲಿ ಮಕ್ಕಳ ದಿನಾಚರಣೆ ಅಂಗವಾಗಿ ಬುಧವಾರ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ವಿವಿಧ ಸ್ಪರ್ಧೆಗಳ ಉದ್ಘಾಟನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕ್ರೀಡೆ, ಸಾಂಸತಿಕ ಕಾರ್ಯಕ್ರಮ ಜೀವನದ ಭಾಗವಾಗಿರಲಿ. ಇದರಿಂದ ಮಾನಸಿಕ ನೆಮ್ಮದಿ, ಉತ್ತಮ ಆರೋಗ್ಯ ಹೊಂದಬಹುದು. ಮಕ್ಕಳು ಚಿತ್ರಕಲೆ, ಯೋಗ, ಕರಾಟೆ, ನೃತ್ಯ, ಹಾಡು ಇತರ ಚಟುವಟಿಕೆಗಳಲ್ಲಿ ಭಾಗಿಯಾಗಿ. ಪಠ್ಯೇತರ ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಿ. ಮೊಬೈಲ್​ ಬಳಕೆ ಕಡಿಮೆ ಮಾಡಿ. ಸ್ವಚ್ಛತೆಗೆ ಆದ್ಯತೆ ನೀಡಿ ಎಂದು ಸಲಹೆ ನೀಡಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಪರಶುರಾಮ್​ ವೈ. ಶೆಟ್ಟೆಪ್ಪನವರ ಮಾತನಾಡಿ, ಮಕ್ಕಳ ಪ್ರತಿಭೆ ಗುರುತಿಸಲು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮಕ್ಕಳ ದಿನಾಚರಣೆ ಅಂಗವಾಗಿ ಹಲವು ಸ್ಪರ್ಧೆ ಆಯೋಜಿಸಲಾಗಿದೆ. ಜಿಲ್ಲಾ ಮಟ್ಟದಲ್ಲಿ ಪ್ರಥಮ, ದ್ವೀತಿಯ ಸ್ಥಾನ ಪಡೆದ ಮಕ್ಕಳನ್ನು ರಾಜ್ಯಮಟ್ಟದ ಸ್ಪರ್ಧೆಗೆ ಕಳುಹಿಸಿಕೊಡಲಾಗುವುದು ಎಂದರು.

ಸೃಜನಾತ್ಮಕ ಕಲೆ ಪ್ರದರ್ಶನದಲ್ಲಿ ವೈಷ್ಣವಿ ಕಮ್ಮಾರ (ಪ್ರಥಮ), ತೇಜಸ್ವಿನಿ (ದ್ವೀತಿಯ), ಪುಟ್ಟರಾಜ ನಿಡೋಣಿ (ತೃತೀಯ), ಚಿತ್ರಕಲೆಯಲ್ಲಿ ಪುಟ್ಟರಾಜ ಗಂಗಾಧರ (ಪ್ರಥಮ), ಚೇತನ ಚಿತ್ರಗಾರ (ದ್ವೀತಿಯ), ಶ್ರೀನಿವಾಸ ಬಸವಂತಪ್ಪ (ತೃತೀಯ), ವಿಜ್ಞಾನದಲ್ಲಿ ಸೃಜನಾತ್ಮಕ ಆವಿಷ್ಕಾರದಲ್ಲಿ ಪ್ರದಿಪ ನಡಲೂರು (ಪ್ರಥಮ), ಬಂಗಾರಿ (ದ್ವೀತಿಯ), ಅಭಿಷೇಕ (ತೃತೀಯ), ವಾದ್ಯ ಸಂಗೀತದಲ್ಲಿ ಸಮರ್ಥ ಎಸ್​.ಎಂ.(ಪ್ರಥಮ), ಕೃಷ್ಣ ಚೈತನ್ಯ (ದ್ವೀತಿಯ), ತರುಣಾ (ತೃತೀಯ) ಸ್ಥಾನ ಪಡೆದರು. ವಿಜೇತರಿಗೆ ಪ್ರಶಸ್ತಿ ಪ್ರತ ನೀಡಲಾಯಿತು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಿರೂಪಣಾಧಿಕಾರಿ ಗಂಗಪ್ಪ, ಅನ್ನಪೂರ್ಣ, ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ವಿಠ್ಠಲ ಜಾಬಗೌಡರ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ರೋಹಿಣಿ ಕೊಟಗಾರ, ಮಕ್ಕಳ ಸಹಾಯವಾಣಿ ಜಿಲ್ಲಾ ಸಂಯೋಜಕ ಶರಣಪ್ಪ ಸಿಂಗನಾಳ, ಮೆಹಬೂಬ್​ ಸಾಬ್​ ಇಲಾಹಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net