

ಕೊಪ್ಪಳ: ವಸತಿ ನಿಲಯ, ಬಾಲ ಮಂದಿರ, ಶಿಕ್ಷಣ ಸಂಸ್ಥೆಗಳಲ್ಲಿ ಮಕ್ಕಳ ರಕ್ಷಣಾ ನೀತಿ ಕಡ್ಡಾಯವಾಗಿ ಅಳವಡಿಸಿ ಅನುಷ್ಠಾನಗೊಳಿಸುವಂತೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಸದಸ್ಯ ಶೇಖರಗೌಡ ರಾಮತ್ನಾಳ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಜಿಪಂ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಶುಕ್ರವಾರ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದರು.
ಈ ಬಗ್ಗೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಬದ್ಧತಾಪತ್ರಕ್ಕೆ ಸಹಿ ಹಾಕಿ ಅನುಷ್ಠಾನಗೊಳಿಸುವ ಭರವಸೆ ನೀಡಿ. ಸಲಹಾ ಪೆಟ್ಟಿಗೆ ಸಿಸಿಟಿವಿ ಕ್ಯಾಮೆರಾ ಅಳವಡಿಕೆ ಕಡ್ಡಾಯ. ವಾರ್ಡ್ನಗಳು ಪೆಟ್ಟಿಗೆ ತೆರೆಯುವಂತಿಲ್ಲ. ಬಾಲಕಿಯರ ವಸತಿ ನಿಲಯದಲ್ಲಿ ಮಹಿಳಾ ನಿಲಯ ಪಾಲಕರಿರುವುದು ಕಡ್ಡಾಯ. ಮಾರ್ಗಸೂಚಿ ಅಳವಡಿಸಿಕೊಂಡ ಬಗ್ಗೆ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗೆ ವರದಿ ಸಲ್ಲಿಸಿ. ಅಧಿಕಾರಿಗಳು ನಿಯಮಿತವಾಗಿ ವಸತಿ ನಿಲಯಗಳಿಗೆ ಭೇಟಿ ನೀಡಿ. ಡೆಂ ಹರಡುತ್ತಿದ್ದು, ಸ್ವಚ್ಛತೆ ಕಾಪಾಡಿ. ಗುತ್ತಿಗೆ ಆಧಾರದಲ್ಲಿ ಸಿಬ್ಬಂದಿ ನೇಮಿಸಿಕೊಂಡಲ್ಲಿ ಪೊಲೀಸ್ ಪರಿಶೀಲನೆ ಕಡ್ಡಾಯ. ಬಾಡಿಗೆ ಕಟ್ಟಡವಿದ್ದಲ್ಲಿ ಮೂಲ ಸೌಕರ್ಯ ಕಲ್ಪಿಸಿ. ಭಿಾಟನೆಯಲ್ಲಿ ತೊಡಗಿದ ಮಕ್ಕಳರನ್ನು ರಸುವಂತೆ ತಾಕೀತು ಮಾಡಿದರು.
ಆರೋಗ್ಯಾಧಿಕಾರಿಗಳು ಅಪ್ರಾಪ್ತ ಬಾಲಕಿಯರ ಗರ್ಭಿಣಿ ಪ್ರಕರಣಗಳ ಬಗ್ಗೆ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿ. ಪೋಕ್ಸೋ ಅಡಿ ಪ್ರಕರಣ ದಾಖಲಿಸಿ. ಸದ್ಯ ಜಿಲ್ಲೆಯಲ್ಲಿರುವ ಬಾಲ ಗರ್ಭಿಣಿಯರ ಬಗ್ಗೆ ಪ್ರಕರಣ ದಾಖಲಿಸಿ ವರದಿ ಸಲ್ಲಿಸಿ. ಸ್ಕಾ$ನಿಂಗ್ ಸೆಂಟರ್ಗಳಲ್ಲಿ ಭ್ರೂಣಲಿಂಗ ಪತ್ತೆ, ಹತ್ಯೆ ಆಗದಂತೆ ನೋಡಿಕೊಳ್ಳಿ. ಮಕ್ಕಳ ರಕ್ಷಣೆ ವಿಷಯದಲ್ಲಿ ಆಯೋಗ ಅಧಿಕಾರಿಗಳ ಬೆಂಬಲಕ್ಕೆ ಇರಲಿದೆ. ಹೆದರದೇ ಕ್ರಮ ಕೈಗೊಳ್ಳಿ. ಶಾಲೆಯಿಂದ ಹೊರಗುಳಿದ ಮಕ್ಕಳು, ಬಾಲ ಕಾರ್ಮಿಕರು, ಭಿಾಟನೆಯಲ್ಲಿ ತೊಡಗಿದ ಮಕ್ಕಳನ್ನು ಮುಖ್ಯವಾಹಿನಿಗೆ ತನ್ನಿ. ಎಲ್ಲ ಸರ್ಕಾರಿ ಸಂಸ್ಥೆ, ಕಚೇರಿಗಲ್ಲಿ ಮಕ್ಕಳ ಸಹಾಯವಾಣಿ ಲಕ ಅಳವಡಿಸಿ. ಗ್ರಾಪಂ ಮಟ್ಟದಲ್ಲಿ ನಿಯಮಿತವಾಗಿ ಮಕ್ಕಳ ಗ್ರಾಮಸಭೆ ಡನೆಸಿ. ಜಾಗೃತಿ ಮೂಡಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ವಿವಿಧ ಅಭಿವೃದ್ಧಿ ನಿಗಮಗಳಿದ ವಿವಿಧ ಯೋಜನೆಗೆ ಆಯ್ಕೆಯಾಗುವ ಲಾನುಭವಿಗಳಿಗೆ ಅವರ ಮಕ್ಕಳನ್ನು ಶಾಲೆಗೆ ಸೇರಿಸುವುದು, ಬಾಲ್ಯವಿವಾಹ ಮಾಡದಿರುವ ಬಗ್ಗೆ ಪತ್ರ ಬರೆಸಿಕೊಳ್ಳಿ ಮಾಡಿದಲ್ಲಿ ಸರ್ಕಾರಿ ಯೋಜನೆ ಮರಳಿಸುವುದಾಗಿ ಬದ್ಧತಾ ಪತ್ರ ಪಡೆಯಿರಿ. ಪ್ರತಿಭಾವಂತ ಕ್ರೀಡಾರಾಪಟುಗಳಿಗೆ ಕ್ರೀಡಾ ವಸತಿ ನಿಲಯ ಮಾಹಿತಿ ನೀಡಿ. ಮದರಸಾಗಳಲ್ಲಿ ಮಕ್ಕಳು ಹಾಜರಾಗುವಂತೆ ಮೌಲ್ವಿಗಳು, ವಕ್ಫ ಅಧಿಕಾರಿಗಳಿಗೆ ಸೂಚಿಸಿ. ಕೃಷಿ ಹೊಂಡಗಳಲ್ಲಿ ಮಕ್ಕಳು ಬಿದ್ದು ತಡೆಯಲು ಸುತ್ತಲೂ ತಡೆಗೋಡೆ ನಿರ್ಮಿಸಿಕೊಳ್ಳಲು ಕೃಷಿ ಅಧಿಕಾರಿಗಳು ಸಂಬಂಧಿಸಿದವರಿಗೆ ತಿಳಿಸಿ. ಬಾಲಪರಾಧಿಗಳಿಗೆ ಆಪ್ತ ಸಮಾಲೋಚನೆ ನಡೆಸಿ. ಅಪ್ರಾಪ್ತರ ವಾಹನ ಚಲಾವಣೆ ತಡೆಯುವಂತೆ ತಿಳಿಸಿದರು.
ಡಿವೈಎಸ್ಪಿ ಮುತ್ತಣ್ಣ ಸರವಗೋಳ ಮಾತನಾಡಿ, ಮಕ್ಕಳಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ವಿವಿಧ ಇಲಾಖೆಗಳ ಸಹಕಾರ ಅಗತ್ಯ. ಸಾಮಾಜಿಕ ಜಾಲತಾಣ, ಟಿ.ವಿ., ಸಿನೆಮಾ, ಮೊಬೈಲ್ ಬಳಕೆಯಿಂದ ಮಕ್ಕಳು ವಯಸ್ಸಿಗಿಂತ ಹೆಚ್ಚಿನ ತಿಳುವಳಿಕೆ ಪಡೆಯುತ್ತಿದ್ದಾರೆ. ಅದನ್ನು ನಕಾರಾತ್ಮಕ ವಿಷಯಗಳಿಗೆ ಬಳಸಿಕೊಳ್ಳುತ್ತಿದ್ದು, ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಾರೆ. ಮಕ್ಕಳ ವಿಷಯದಲ್ಲಿ ಸರ್ಕಾರ, ಆಯೋಗ ಮಾತ್ರವಲ್ಲ ಪಾಲಕರೂ ಜವಾಬ್ದಾರಿಯಿಂದ ವರ್ತಿಸಬೇಕು ಎಂದರು.
ಎಡಿಸಿ ಸಾವಿತ್ರಿ ಕಡಿ, ಜಿಪಂ ಮುಖ್ಯ ಯೋಜನಾಧಿಕಾರಿ ಡಿ.ಮಂಜುನಾಥ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ತಿಪ್ಪಣ್ಣ ಸಿರಸಗಿ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮಹಾಂತಸ್ವಾಮಿ ಪೂಜಾರ ಇತರರಿದ್ದರು.