ಕಾವಲು ಸಮಿತಿಗಳು ಸಕ್ರಿಯವಾಗಲಿ

district koppal child prtaction awarenesss workshop
Published on

ಕೊಪ್ಪಳ: ಮಹಿಳೆ, ಮಕ್ಕಳ ರಕ್ಷಣಾ ಕಾವಲು ಸಮಿತಿಗಳು ಸಕ್ರಿಯವಾಗಿ ಕೆಲಸ ಮಾಡಬೇಕೆಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಸದಸ್ಯ ಶೇಖರಗೌಡ ಜಿ.ರಾಮತ್ನಾಳ ಹೇಳಿದರು.

ನಗರದ ತಾಪಂ ಕಚೇರಿ ಸಭಾಂಗಣದಲ್ಲಿ ತಾಲೂಕು ಮಟ್ಟದ ಮಕ್ಕಳ ರಕ್ಷಣಾ ಸಮಿತಿ ಸದಸ್ಯರೊಂದಿಗೆ ಮಂಗಳವಾರ ಹಮ್ಮಿಕೊಂಡಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.

ಗ್ರಾಪಂ ಮಟ್ಟದಲ್ಲಿ ಕಾವಲು ಸಮಿತಿ ಸಕ್ರಿಯಗೊಳಿಸಿ. ಮೂರು ತಿಂಗಳಿಗೊಮ್ಮೆ ಕಡ್ಡಾಯವಾಗಿ ಸಮಿತಿ ಸಭೆ ನಡೆಸಿ. ಮಕ್ಕಳ ಸಮಸ್ಯೆ ಚರ್ಚಿಸಿ ಪರಿಹಾರ ಕಂಡುಕೊಳ್ಳಿ. ಗ್ರಾಪಂನಲ್ಲಿ ಮಕ್ಕಳ ಸಮಸ್ಯೆಗೆ ಶೇ.5ರಷ್ಟು ಅನುದಾನ ಬಳಕೆಗೆ ಅವಕಾಶವಿದೆ. ಮಕ್ಕಳ ಆಯವ್ಯಯ ಮಂಡನೆಯಾಗಬೇಕು. ಮಕ್ಕಳ ರಕ್ಷಣಾ ನೀತಿ ಜಾರಿಯಾಗಿ 15 ವರ್ಷ ಗತಿಸಿದರೂ ಪರಿಣಾಕಾರಿಯಾಗಿ ಜಾರಿಯಾಗುತ್ತಿಲ್ಲ. ಮಕ್ಕಳು ಶಾಲೆಯಿಂದ ಹೊರುಗುಳಿಯದಂತೆ ನೋಡಿಕೊಳ್ಳಿ. ಬಾಲ್ಯವಿವಾಹ ತಡೆಗೆ ಇನ್ನಷ್ಟು ಜಾಗೃತಿ ಅಗತ್ಯ. ಸಾಮೂಹಿಕ ಆಯೋಜಿಸುವ ಕಲ್ಯಾಣ ಮಂಟಪ, ದೇವಾಲಯ, ಶಾದಿಮಹಲ್​ಗಳಲ್ಲಿ ಜಾಗೃತಿ ಗೋಡೆಬರಹ ಕಡ್ಡಾಯವಾಗಿ ಬರೆಸಿ. ಲಗ್ನ ಪತ್ರಿಕೆ ಮುದ್ರಿಸುವಾಗಲೂ ಪ್ರಿಂಟಿಂಗ್​ ಪ್ರೆಸ್​ನವರು ವಧು&ವರರ ಜನನ ಪ್ರಮಾಣ ಪತ್ರ ಪರಿಶೀಲಿಸಬೇಕೆಂದು ತಿಳಿಸಿದರು.

ಶಾಲಾ, ಕಾಲೇಜುಗಳು, ವಸತಿ ಶಾಲೆಗಳಲ್ಲಿ ಮಕ್ಕಳ ರಕ್ಷಣಾ ನೀತಿ ಜಾರಿಗೊಳಿಸಿ. ಶಿಕ್ಷಣ ಸಂಸ್ಥೆ ಸಿಬ್ಬಂದಿ ಅಪರಾಧ ಎಸಗಿದಲ್ಲಿ ನಿರ್ದಾಣ್ಯ ಕ್ರಮ ಕೈಗೊಳ್ಳಬೇಕು. ವಿಳಂಬವಾದರೆ ಸಂಸ್ಥೆಯ ಮುಖ್ಯಸ್ಥರನ್ನು ಹೊಣೆಗಾರರನ್ನಾಗಿಸಲಾಗುವುದು. ಪೊಲೀಸ್​, ಕೃಷಿ, ಅಬಕಾರಿಸ ಸೇರಿ ಇತರ ಅಧಿಕಾರಿಗಳು ನಿಯಮಿತ ದಾಳಿ ನಡೆಸಿ ಬಾಲ ಕಾರ್ಮಿಕರ ರಸಬೇಕು. ಬಾರ್​ಗಳಲ್ಲಿ 18 ವರ್ಷದೊಳಗಿನ ಮಕ್ಕಳನ್ನು ಕೆಲಸಕ್ಕೆ ಸೇರಿಸಿಕೊಳ್ಳುವಂತಿಲ್ಲ. ನೇಮಿಸಿಕೊಂಡವರ ಸನ್ನದು ರದ್ದುಪಡಿಸಲಾಗುವುದು. ಕೃಷಿ ಹೊಂಡಗಳಿಗೆ ತಂತಿಬೇಲಿ ಅಳವಡಿಕೆ ಕಡ್ಡಾಯ. ಎಚ್ಚರಿಕೆ ಲಕ ಅಳವಡಿಕಗೆ ಕೃಷಿ ಅಧಿಕಾರಿಗಳು ಕ್ರಮವಹಿಸಿ. ಮಕ್ಕಳ ದೌರ್ಜನ್ಯ ಟನೆಗಳಲ್ಲಿ ಪೊಲೀಸರು ತಡ ಮಾಡದೇ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮಹಾಂತಸ್ವಾಮಿ ಪುಜಾರ, ತಹಸೀಲ್ದಾರ್​ ವಿಠ್ಠಲ ಚೌಗಲಾ, ತಾಪಂ ಇಒ ದುಂಡಪ್ಪ ತುರಾದಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net