ಮಕ್ಕಳಿಗೆ ದೈಹಿಕ ಹಿಂಸೆ ನೀಡಿದರೆ ಶಿಾರ್ಹ ಅಪರಾಧ

Published on

ಕೊಪ್ಪಳ: ಮೌಡ್ಯತೆ, ಮೂಢನಂಬಿಕೆಗೆ ಒಳಗಾಗಿ ಮಕ್ಕಳಿಗೆ ದೈಹಿಕ ಹಿಂಸೆ ನೀಡುವುದು ಶಿಾರ್ಹ ಅಪರಾಧ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮಹಾಂತಸ್ವಾಮಿ ಪುಜಾರ ತಿಳಿಸಿದ್ದಾರೆ.

ಎಲ್ಲರಿಗೂ ಬದುಕುವ ಹಕ್ಕಿದೆ. ಮಹಿಳೆ ಮತ್ತು ಮಕ್ಕಳಿಗೆ ವಿಶೇಷ ಪ್ರಾತಿನಿಧ್ಯ ನೀಡಲಾಗಿದೆ. ಕೇಂದ್ರ ಸರ್ಕಾರ "ವಿಶ್ವ ಸಂಸ್ಥೆಯ ಮಕ್ಕಳ ಹಕ್ಕುಗಳ ಒಡಂಬಡಿಕೆಗೆ" ಸಹಿ ಮಾಡಿದ್ದು, ದೇಶದ ಸಮಸ್ತ ಮಕ್ಕಳಿಗೆ ಸುರಕ್ಷತೆ, ಮಕ್ಕಳಸ್ನೇಹಿ ವಾತಾವರಣ ನಿಮಾರ್ಣ ಮಾಡಲು ಕಾರ್ಯನಿರ್ವಹಿಸುವಂತೆ ಸೂಚಿಸಿದೆ. ಜಿಲ್ಲಾಡಳಿತ ಮಕ್ಕಳಸ್ನೇಹಿ ವಾತಾವರಣ ನಿಮಾರ್ಣಕ್ಕಾಗಿ ಹಾಗೂ ಮಕ್ಕಳ ಹಿತದೃಷ್ಟಿಯಿಂದ ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿದೆ.

ಜಿಲ್ಲೆಯ ಗ್ರಾಮವೊಂದರಲ್ಲಿ ಮಗುವಿನ ಆರೋಗ್ಯ ಸುಧಾರಣೆಗೆ ತಾಯಿಯೊಬ್ಬಳು ಅಗರಬತ್ತಿಯಿಂದ ಮಗುವಿಗೆ ಸುಟ್ಟಿದ್ದಾಳೆ. ಕಾಲಿಗೆ ಬೊಬ್ಬೆ ಬರುವ ಹಾಗೆ ಬಟ್ಟೆಯಿಂದ ಕಾವು ಕೊಟ್ಟಿದ್ದು, ನಂಜಾಗಿ ಮಗು ಮೃತಪಟ್ಟಿದೆ. ಮಗುವಿನ ಸಾವಿಗೆ ಕಾರಣಳಾದ ತಾಯಿ ವಿರುದ್ಧ ಕನಕಗಿರಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಮೂಢನಂಬಿಕೆಗೆ ಒಳಗಾಗಿ ಮೌಢ್ಯಾಚರಣೆಗಳಿಂದ ಮಕ್ಕಳಿಗೆ ಬರೆ ಹಾಕುವುದು, ಲೋಹಗಳಿಂದ ಚುಚ್ಚುವುದು, ಸುಡುವುದು ಅಥವಾ ಇನ್ನಾವುದೇ ರೀತಿಯಲ್ಲಿ ದೈಹಿಕ ಹಿಂಸೆ ನೀಡುವುದು ಶಿಕ್ಷಾರ್ಹ ಅಪರಾಧ. ಮಕ್ಕಳಿಗೆ ಯಾವುದೇ ರೀತಿಯಲ್ಲಿ ದೈಹಿಕ ಹಿಂಸೆ ನೀಡಿದರೆ ಅಂಥವರಿಗೆ ಕಾನೂನು ಶಿೆ ವಿಧಿಸಲಾಗುವುದೆಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net