

ಕೊಪ್ಪಳ: ತಾಲೂಕಿನ ತಾಂಡಾವೊಂದರ ಜಾತ್ರೋತ್ಸವದಲ್ಲಿ ಐವರು ಬಾಲಕಿಯರಿಗೆ ಬಾಲ್ಯವಿವಾಹ ಮಾಡಲು ನಿಶ್ಚಿಯಿಸಿದ್ದು ಬೆಳಕಿಗೆ ಬಂದಿದ್ದು, ಬಾಲಕಿಯರನ್ನು ಮಕ್ಕಳ ರಕ್ಷಣಾ ಟಕ ಅಧಿಕಾರಿಗಳು ಮಂಗಳವಾರ ರಸಿದ್ದಾರೆ.
ಏ.4ರಂದು ಗ್ರಾಮದ ಮರಿಯಮ್ಮ ದೇವಿ ಜಾತ್ರೋತ್ಸವ ಇದೆ. ಅದರ ಅಂಗವಾಗಿ ವೈಯಕ್ತಿಕ ಮದುವೆ ನಿಗದಿಪಡಿಸಿದ್ದು, ಐದು ಮದುವೆಗಳಲ್ಲಿ ಬಾಲಕಿಯರಿಗೆ ಮದುವೆ ಮಾಡಿಸಲು ಮುಂದಾಗಿದ್ದಾರೆ. ಮಕ್ಕಳ ಸಹಾಯವಾಣಿಗೆ ಈ ಬಗ್ಗೆ ದೂರು ಬಂದಿದ್ದು, ತಕ್ಷಣ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಅಂಗನವಾಡಿ ಮೇಲ್ವಿಚಾರಕಿ ಮಂಜುಳಾ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ ಪ್ರತಿಭಾ ಕಾಶಿಮಠ, ಶಿವಲೀಲಾ ವನ್ನೂರು, 112 ಪೊಲೀಸ್ ಅಧಿಕಾರಿಗಳು ವಿಚಾರನೆ ನಡೆಸಿದಾಗ ವಿವಾಹ ಮಾಡುತ್ತಿರುವುದು ಬೆಳಕಿಗೆ ಬಂದಿದೆ.
ಬಾಲಕಿಯರ ದಾಖಲೆ ಪರಿಶೀಲಿಸಿದಾಗ ಎಲ್ಲರೂ 18 ವರ್ಷ ಪೂರ್ಣಗೊಳ್ಳದಿರುದು ಪತ್ತೆಯಾಗಿದೆ. ಐವರು ಬಾಲಕಿಯರು ಕ್ರಮವಾಗಿ 17-ವರ್ಷ 8 ತಿಂಗಳು, 15 ವರ್ಷ, 15 ವರ್ಷ 11 ತಿಂಗಳು, 14 ವರ್ಷ 7 ತಿಂಗಳು, 17 ವರ್ಷ 4 ತಿಂಗಳು ಇರುವುದು ತಿಳಿದು ಬಂದಿದೆ. ತಕ್ಷಣ ಬಾಲಕಿಯರನ್ನು ವಶಕ್ಕೆ ಪಡೆದಿದ್ದು, ಪೋಷಕರಿಗೆ ಬಾಲ್ಯವಿವಾಹ ಅಪರಾಧ ಎಂದು ಮನವರಿಕೆ ಮಾಡಲಾಗಿದೆ. ಮುಂದಿನ ಕ್ರಮ ಹಾಗೂ ಪೋಷಣೆಗಾಗಿ ಬಾಲಕಿಯರನ್ನು ಮಕ್ಕಳ ಕಲ್ಯಾಣ ಸಮಿತಿಗೆ ಒಪ್ಪಿಸಲಾಗಿದೆ.