ಬಾಲಕರ ಮನೆಗೆ ರಕ್ಷಣಾ ಆಯೋಗ ಭೇಟಿ

district koppal chil protaction commission visit hosalli village
Published on

ಕೊಪ್ಪಳ: ತಾಲೂಕಿನ ಹೊಸಳ್ಳಿಯಲ್ಲಿ ವಿದ್ಯುತ್​ ತಗುಲಿ ಮೃತಪಟ್ಟ ಇಬ್ಬರು ಬಾಲಕರ ಮನೆಗೆ ಮಂಗಳವಾರ ರಾಜ್ಯ ಮಕ್ಕಳ ರಕ್ಷಣಾ ಆಯೋಗ ಸದಸ್ಯ ಶೇಖರಗೌಡ ರಾಮತ್ನಾಳ ಮಂಗಳವಾರ ಭೇಟಿ ನೀಡಿ ಮಾಹಿತಿ ಪಡೆದರು.

ಬಾಲಕರು ಮೃತಪಟ್ಟ ಜಾಗ ಹಾಗೂ ಮನೆಗೆ ತೆರಳಿ ಪಾಲಕರಿಗೆ ಸಾಂತ್ವಾನ ಹೇಳಿದರು. ಮಕ್ಕಳ ರಕ್ಷಣೆ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿದರು. ಬಳಿಕ ಮಾತನಾಡಿ, ಮಕ್ಕಳ ಜೀವ ಅಮೂಲ್ಯ. ಬೇಸಿಗೆ ರಜೆ ಅನುಭವಿಸುವ ಜತೆಗೆ ಸುರಕ್ಷತೆಯೂ ಮುಖ್ಯ. ರಜೆ ವೇಳೆ ಕ್ರೀಡೆ, ಈಜು ಕಲಿಯಲು ಹೋಗುವುದು ಸಹಜ. ಇದರಿಂದ ಅಪಾಯ ಹೆಚ್ಚು. ಇಂಥ ಘಟನೆಗಳು ಮರುಕಳಿಸದಂತೆ ಮಕ್ಕಳಸ್ನೀಹಿ ವಾತಾವರಣ ನಿರ್ಮಿಸಬೇಕು. ಗ್ರಾಪಂ ವ್ಯಾಪ್ತಿಯ ನದಿ, ಕಾಲುವೆ, ಹಳ್ಳ ಮತ್ತು ಬಾವಿಗಳ ಹತ್ತಿರ ಸೂಚನಾ ಲಕ ಅಳವಡಿಸಿ. ಜೀವರಕ್ಷಕ ಸಾಧನಗಳಾದ ನೀರಿನ ಟ್ಯೂಬ್​, ಹಗ್ಗ ತೇಲಿಬಿಡುವ ಮೂಲಕ ರಕ್ಷಣಾ ಕ್ರಮ ಕೈಗೊಳ್ಳಬಹುದೆಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ತಹಸೀಲ್ದಾರ್​ ವಿಠ್ಠಲ್​ ಚೌಗಲಾ, ತಾಪಂ ಇಒ ದುಂಡಪ್ಪ ತುರಾದಿ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮಹಾಂತಸ್ವಾಮಿ ಪೂಜಾರ, ಹೊಸಳ್ಳಿ ಗ್ರಾಪಂ ಅಧ್ಯಕ್ಷ ಸುರೇಶ ಚಲವಾದಿ, ಸಿಡಿಪಿಒ ಶರಣಪ್ಪ, ಮುನಿರಾಬಾದ್​ ಪಿಎಸ್​ಐ ಸುನಿಲ್​ ಎಚ್​., ಜೆಸ್ಕಾಂ ಎಇಇ ಸಂತೋಷ ಕುಮಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net