

ಕೊಪ್ಪಳ: ನಗರದಲ್ಲಿ ಕಳ್ಳರ ಹಾವಳಿ ಹೆಚ್ಚಾಗಿದೆ. ಬುಧವಾರ ಬೆಳ್ಳಂಬೆಳಗ್ಗೆ ಮನೆ ಮುಂದೆಯೇ ನಿಂತಿದ್ದ ಮಹಿಳೆ ಮಾಂಗಲ್ಯ ಸರವನ್ನು ಬೈಕ್ನಲ್ಲಿ ಬಂದ ಕಳ್ಳರು ಕಿತ್ತುಕೊಂಡು ಪರಾರಿಯಾಗಿದ್ದಾರೆ.
ನಗರದ ಟೀಚರ್ಸ್ ಕಾಲನಿಯಲ್ಲಿ ಟನೆ ನಡೆದಿದೆ. ಮಂಜುಳಾ ಹಿರೇಮಠ ಎಂಬುವರು ಸರ ಕಳೆದುಕೊಂಡವರು. ಐವತ್ತು ಗ್ರಾಂ ತೂಕದ ಮಾಂಗಲ್ಯ ಸರ ಧರಿಸಿದ್ದರು. ಮನೆ ಮುಂದೆ ನಿಂತಿದ್ದಾಗ ಬೈಕ್ನಲ್ಲಿ ಹೆಲ್ಮೇಟ್ ಧರಿಸಿಕೊಂಡು ಬಂದ ಕಳ್ಳರು ಮೊದಲು ಮುಂದಿನಿಂದ ಹಾದು ಹೋಗಿದ್ದಾರೆ. ವಾಪಸ್ ಬಂದು ಕಿತ್ತುಕೊಂಡು ಕ್ಷಣಾರ್ಧದಲ್ಲೇ ಪರಾರಿಯಾಗಿದ್ದಾರೆ. ನಿವಾಸಿಗಳು ಆತಂಕಕ್ಕೆ ಒಳಗಾಗಿದ್ದಾರೆ. ಹಗಲಿನಲ್ಲೇ ಈ ರೀತಿ ದರೋಡೆ ನಡೆದರೆ ಹೇಗೆಂದು ಭಯಬೀತರಾಗಿದ್ದಾರೆ. ಸ್ಥಳಕ್ಕೆ ನಗರಠಾಣೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡರು.